ಪ್ಯಾರಿಸ್ (ಎಎಫ್ಪಿ): ಅಗ್ರ ಶ್ರೇಯಾಂಕದ ಅರಿನಾ ಸಬಲೆಂಕಾ ಮತ್ತು ನಾಲ್ಕು ಗ್ರ್ಯಾನ್ಸ್ಲಾಮ್ ಚಾಂಪಿಯನ್ ನವೊಮಿ ಒಸಾಕಾ ಅವರು ಶನಿವಾರ ಮೂರನೇ ಸುತ್ತಿನ ಪಂದ್ಯಗಳನ್ನು ಗೆದ್ದು ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಅಂತಿಮ 16ರ ‘ಬ್ಲಾಕ್ಬಸ್ಟರ್’ ಸೆಣಸಾಟಕ್ಕೆ ಸಜ್ಜಾದರು.

ಬೆಲರೂಸ್ನ ಸಬಲೆಂಕಾ 6–0, 7–5 ರಿಂದ ಆಸ್ಟ್ರೇಲಿಯಾದ ಡೇರಿಯಾ ಕಸಾಟ್ಕಿನಾ ಅವರನ್ನು ಸೋಲಿಸಲು ತೆಗೆದುಕೊಂಡಿದ್ದು 76 ನಿಮಿಷಗಳನ್ನಷ್ಟೇ. ಮೊದಲ ಸೆಟ್ಅನ್ನು ಆರಾಮವಾಗಿ ಗೆದ್ದ ಸಬಲೆಂಕಾ ನಂತರ 53ನೇ ಕ್ರಮಾಂಕದ ಎದುರಾಳಿ ಎದುರು ಒಂದು ಗೇಮ್ ಕಳೆದುಕೊಂಡು ಹಿನ್ನಡೆಯಲ್ಲಿದ್ದರು. ಆದರೆ ಚೇತರಿಸಿ ಪಂದ್ಯ ಗೆದ್ದರು.

ಈ ಗೆಲುವಿನೊಡನೆ ಸಬಲೆಂಕಾ ತಮ್ಮಷ್ಟೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿರುವ ಒಸಾಕಾ ಎದುರು ಹಣಾಹಣಿಗೆ ವೇದಿಕೆ ಸಿದ್ಧಪಡಿಸಿದರು. ಇವರಿಬ್ಬರಿಗೂ 28 ವರ್ಷ ವಯಸ್ಸು. ಇಬ್ಬರೂ ಆಸ್ಟ್ರೇಲಿಯಾ ಓಪನ್ ಮತ್ತು ಅಮೆರಿಕ ಓಪನ್ ಪ್ರಶಸ್ತಿಗಳನ್ನು ತಲಾ ಎರಡು ಬಾರಿ ಗೆದ್ದುಕೊಂಡಿದ್ದಾರೆ.

ಈ ಋತುವಿನಲ್ಲಿ ಸಬಲೆಂಕಾ ಎರಡು ಬಾರಿ ಒಸಾಕಾ ಅವರನ್ನು ಸೋಲಿಸಿದ್ದಾರೆ. ಆದರೆ ಗ್ರ್ಯಾನ್ಸ್ಲಾಮ್ ಟೂರ್ನಿಯಲ್ಲಿ ಏಕೈಕ ಬಾರಿ ಎದುರಾಗಿದ್ದಾಗ (2018ರ ಅಮೆರಿಕ ಓಪನ್) ಒಸಾಕಾ ಗೆಲುವು ಸಾಧಿಸಿದ್ದರು.

16ನೇ ಶ್ರೇಯಾಂಕದ ಜಪಾನ್ನ ಆಟಗಾರ್ತಿ ಇನ್ನೊಂದು ಪಂದ್ಯದಲ್ಲಿ ಅಮೆರಿಕದ ತಾರೆ ಇವಾ ಜೊವಿಕ್ ಅವರನ್ನು 7–6 (7–5), 6–7 (3–7), 6–4 ರಿಂದ ಹಿಮ್ಮೆಟ್ಟಿಸಿದರು. ಸರ್ವ್ಗಳೇ ಪ್ರಮುಖ ಪಾತ್ರ ವಹಿಸಿದ್ದ ಪಂದ್ಯದಲ್ಲಿ ಒಸಾಕಾ ಮೂರನೇ ಸೆಟ್ನ 10ನೇ ಗೇಮ್ನಲ್ಲಿ 18 ವರ್ಷ ವಯಸ್ಸಿನ ಎದುರಾಳಿಯ ಸರ್ವ್ ಮುರಿದು ನಿರ್ಣಾಯಕ ಮುನ್ನಡೆ ಸಾಧಿಸಿದರು.

ಜ್ವರೇವ್ಗೆ ಜಯ: ಪುರುಷರ ಸಿಂಗಲ್ಸ್ನಲ್ಲಿ, ಯಾನಿಕ್ ಸಿನ್ನರ್, ನೊವಾಕ್ ಜೊಕೊವಿಚ್ ನಿರ್ಗಮಿಸಿದ ನಂತರ ಪ್ರಶಸ್ತಿಗೆ ಫೇವರಿಟ್ ಆಗಿರುವ ಎರಡನೇ ಶ್ರೇಯಾಂಕದ ಅಲೆಕ್ಸಾಂಡರ್ ಜ್ವರೇವ್ 6–4, 6–3, 5–7, 6–2 ರಿಂದ ಸ್ಥಳೀಯ ತಾರೆ ಕ್ವೆಂಟಿನ್ ಹಾಲಿಸ್ ಅವರನ್ನು ಸೋಲಿಸಿದರು.

ಹತ್ತನೇ ಶ್ರೇಯಾಂಕದ ಫ್ಲಾವಿಯೊ ಕೊಬೊಲಿ (ಇಟಲಿ) ಅವರು ಅಮೆರಿಕದ ಲರ್ನರ್ ಟಿಯೆನ್ ಅವರನ್ನು 7–2, 6–2, 6–3 ರಿಂದ ಸೋಲಿಸಿದರು. ಸಿನ್ನರ್ ನಿರ್ಗಮನಕ್ಕೆ ಕಾರಣರಾಗಿದ್ದ ಅರ್ಜೆಂಟೀನಾದ ಫ್ರಾನ್ಸಿಸ್ಕೊ ಸೆರೂನ್ಡೊಲೊ ಕೂಡ ಹೊರಬಿದ್ದರು. ಅಮೆರಿಕದ ಝಕಾರಿ ಸ್ವಜ್ದಾ 6–3, 6–4, 3–6, 4–6, 6–3 ರಿಂದ ಸೆರೂನ್ಡೊಲೊ ಅವರನ್ನು ಮಣಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-51-2004564721

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.