ಪ್ಯಾರಿಸ್ (ಎಎಫ್ಪಿ): ನಾಲ್ಕು ಬಾರಿಯ ಚಾಂಪಿಯನ್ ಇಗಾ ಶ್ವಾಂಟೆಕ್ ಅವರಿಗೆ ಭಾನುವಾರ ಉಕ್ರೇನ್ನ ಮಾರ್ಟಾ ಕೊಸ್ತ್ಯುಕ್ ಆಘಾತ ನೀಡಿದರು. 25ನೇ ಜನ್ಮದಿನ ಸಂಭ್ರಮದಲ್ಲಿದ್ದ ಶ್ವಾಂಟೆಕ್, ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಪ್ರಿ ಕ್ವಾರ್ಟರ್ ಫೈನಲ್ನಲ್ಲಿ ಹೊರಬಿದ್ದರು. ಪುರುಷರ ಸಿಂಗಲ್ಸ್ನಲ್ಲಿ ಎರಡನೇ ಶ್ರೇಯಾಂಕದ ಅಲೆಕ್ಸಾಂಡರ್ ಜ್ವರೇವ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

15ನೇ ಶ್ರೇಯಾಂಕದ ಕೊಸ್ತ್ಯುಕ್ 7-5 6-1ರಿಂದ ಮೂರನೇ ಶ್ರೇಯಾಂಕದ ಶ್ವಾಂಟೆಕ್ ಅವರನ್ನು ಹಿಮ್ಮೆಟ್ಟಿಸಿ ರೋಲ್ಯಾಂಡ್ ಗ್ಯಾರೋಸ್ನಲ್ಲಿ ಮೊದಲ ಬಾರಿ ಕ್ವಾರ್ಟರ್ ಫೈನಲ್ಗೆ ಲಗ್ಗೆ ಹಾಕಿದರು. ಏಳನೇ ಗ್ರ್ಯಾನ್ಸ್ಲಾಮ್ ಕಿರೀಟದ ಪ್ರಯತ್ನದಲ್ಲಿದ್ದ ಪೋಲೆಂಡ್ನ ಆಟಗಾರ್ತಿ ನಿರಾಸೆ ಅನುಭವಿಸಿದರು.

ಏಪ್ರಿಲ್ನಲ್ಲಿ ಮ್ಯಾಡ್ರಿಡ್ ಓಪನ್ ಪ್ರಶಸ್ತಿ ಗೆದ್ದಿದ್ದ 23 ವರ್ಷದ ಕೊಸ್ತ್ಯುಕ್ ಅವರು ಮುಂದಿನ ಸುತ್ತಿನಲ್ಲಿ ತಮ್ಮದೇ ದೇಶದ ಎಲಿನಾ ಸ್ವಿಟೋಲಿನಾ ಅವರನ್ನು ಎದುರಿಸಲಿದ್ದಾರೆ. ಏಳನೇ ಶ್ರೇಯಾಂಕದ ಎಲಿನಾ ಆರಂಭಿಕ ಸೆಟ್ನ ಹಿನ್ನಡೆಯಿಂದ ಚೇತರಿಸಿಕೊಂಡು 4–6, 6–4, 6–0ಯಿಂದ 11ನೇ ಶ್ರೇಯಾಂಕದ ಬೆಲಿಂಡಾ ಬೆನ್ಸಿಕ್ (ಸ್ವಿಟ್ಜರ್ಲೆಂಡ್) ಅವರನ್ನು ಸೋಲಿಸಿದರು.

ರೊಮೇನಿಯಾದ ಸೊರಾನಾ ಸಿರ್ಸ್ಟಿಯಾ 6-3, 7-6 (7/4)ರಿಂದ ಚೀನಾದ ವಾಂಗ್ ಕ್ಸಿಯು ಅವರನ್ನು ಮಣಿಸಿದರು. 36 ವರ್ಷದ ಸೊರಾನಾ 2009ರ ಬಳಿಕ ಇಲ್ಲಿ ಎರಡನೇ ಬಾರಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.

ಜ್ವರೇವ್ ಮುನ್ನಡೆ: ಪ್ರಶಸ್ತಿಯ ಫೆವರೀಟ್ಗಳಲ್ಲಿ ಒಬ್ಬರಾದ ಜರ್ಮನಿಯ ಜ್ವರೇವ್ ನಾಲ್ಕನೇ ಸುತ್ತಿನಲ್ಲಿ 7–6(7–3), 6–4, 6–1ರಿಂದ ನೆದರ್ಲೆಂಡ್ಸ್ನ ಜೆಸ್ಪರ್ ಡಿ ಜಾಂಗ್ ಅವರನ್ನು ಮಣಿಸಿದರು. 2024ರ ರನ್ನರ್ಸ್ ಅಪ್ ಆಗಿರುವ ಜ್ವರೇವ್ ಮೊದಲ ಗ್ರ್ಯಾನ್ಸ್ಲಾಮ್ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ. ಅವರಿಗೆ ಝೆಕ್ ರಿಪಬ್ಲಿಕ್ನ ಥಾಮಸ್ ಮಾಚಾಕ್ ಮುಂದಿನ ಎದುರಾಳಿಯಾಗಿದ್ದಾರೆ. ಥಾಮಸ್ 6–4, 6–4, 6–3ರಿಂದ ಬೆಲ್ಜಿಯಂನ ಜಿಜೌ ಬರ್ಗ್ಸ್ ಅವರನ್ನು ಪರಾಭವಗೊಳಿಸಿದರು.

ಸ್ಪೇನ್ನ ಯುವ ತಾರೆ ರಫೆಲ್ ಜೋಡರ್ ಅವರೂ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಮೊದಲೆರಡು ಸೆಟ್ಗಳ ಹಿನ್ನೆಡೆಯಿಂದ ಪುನರಾಗಮನ ಮಾಡಿದ 19 ವರ್ಷದ ಜೋಡರ್ 4-6, 4-6, 6-1, 6-2, 6-2ರ ಐದು ಸೆಟ್ಗಳ ಹಣಾಹಣಿಯಲ್ಲಿ ಸ್ವದೇಶದ ಪ್ಯಾಬ್ಲೊ ಕ್ಯಾರೆನೊ ಬಸ್ತಾ ಅವರನ್ನು ಮಣಿಸಿದರು.

27ನೇ ಶ್ರೇಯಾಂಕದ ರಫೆಲ್ ಗ್ರ್ಯಾನ್ಸ್ಲಾಮ್ ಟೂರ್ನಿಯಲ್ಲಿ ಮೊದಲ ಬಾರಿ ಎಂಟರ ಘಟ್ಟ ತಲುಪಿದರು. ಕಳೆದ ವರ್ಷ ಇದೇ ಸಮಯದಲ್ಲಿ ವಿಶ್ವ ಕ್ರಮಾಂಕದಲ್ಲಿ 707ನೇ ಸ್ಥಾನದಲ್ಲಿದ್ದ ಈ ಆಟಗಾರ ಆಸ್ಟ್ರೇಲಿಯಾ ಓಪನ್ನಲ್ಲಿ ಎರಡನೇ ಸುತ್ತು ತಲುಪಿದ್ದರು.

ನಾಲ್ಕನೇ ಶ್ರೇಯಾಂಕದ ಫೆಲಿಕ್ಸ್ ಆಗರ್ ಅಲಿಸಿಮೆ 5-7, 6-1, 7-6 (7/4), 7-6ರಿಂದ ಅಮೆರಿಕದ ಬ್ರಾಂಡನ್ ನಕಾಶಿಮಾ ಅವರನ್ನು ಸೋಲಿಸಿದರು. ಕೆನಡಾದ ಫೆಲಿಕ್ಸ್ ನಾಲ್ಕನೇ ಸುತ್ತಿನಲ್ಲಿ ಚಿಲಿ ಆಟಗಾರ ಅಲೆಕ್ಸಾಂಡ್ರೊ ಟ್ಯಾಬಿಲೊ ಅವರನ್ನು ಎದುರಿಸುವರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-51-1502392042

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.