ಪ್ಯಾರಿಸ್ (ಎಎಫ್ಪಿ): ಸುಡುಬಿಸಿಲಿನ ಜೊತೆಗೆ ವಾನ್ ಮಾನುವೆಲ್ ಸೆರೂನ್ಡೊಲೊ ಅವರ ಅಸಾಧಾರಣ ಚೇತರಿಕೆಯ ಆಟದಿಂದಾಗಿ ಯಾನಿಕ್ ಸಿನ್ನರ್ ಅವರು ಫ್ರೆಂಚ್ ಓಪನ್ ಟೂರ್ನಿಯಿಂದ ಹೊರಬೀಳಬೇಕಾಯಿತು. ಇದರಿಂದ ಪುರುಷರ ಸಿಂಗಲ್ಸ್ನಲ್ಲಿ ಇತರ ಅಕಾಂಕ್ಷಿಗಳಿಗೂ ಪ್ರಶಸ್ತಿ ಅವಕಾಶ ಮುಕ್ತವಾಯಿತು.

ವಿಶ್ವದ ಅಗ್ರಮಾನ್ಯ ಆಟಗಾರ ನಾಗಿರುವ ಸಿನ್ನರ್ ಮೊದಲ ಎರಡು ಸೆಟ್ಗಳನ್ನು ಗೆದ್ದು ಮೂರನೇಯದರಲ್ಲಿ 5–1 ಮುನ್ನಡೆ ಸಾಧಿಸಿ ಗೆಲುವಿನ ಅಂಚಿ ನಲ್ಲಿದ್ದರು. ಆದರೆ ಬಿಸಿ ಗಾಳಿಗೆ ಅವರು ಬವಳಿದಂತೆ ಕಂಡರು. ಅಂಕಣದಲ್ಲಿ ಓಡಾಡಲು ಪರದಾಡಿದರು. ಒಂದು ಹಂತದಲ್ಲಿ ಸತತವಾಗಿ 18 ಪಾಯಿಂಟ್ಗಳನ್ನು ಕಳೆದುಕೊಂಡರು.

ಚೇರ್ ಅಂಪೈರ್ ಬಳಿ ತೆರಳಿದ ಸಿನ್ನರ್ ‘ತಲೆಸುತ್ತಿನ’ ಅನುಭವವಾಗು ತ್ತಿದೆ ಎಂದು ಹೇಳಿ ವೈದ್ಯಕೀಯ ವಿರಾಮ ಪಡೆದು ‘ಫಿಲಿಪ್ ಶಾಟಿಯೆ’ ಕೋರ್ಟ್ ನಿಂದ ಹೊರನಡೆದರು. ಹಿಂತಿರುಗಿದ ಬಳಿಕ ಪಂದ್ಯದ ಮೇಲೆ ಹಿಡಿತವನ್ನು ಕಳೆದು ಕೊಂಡರು. 3–6, 2–6, 7–5, 6–1, 6–1 ರಲ್ಲಿ 56ನೇ ಕ್ರಮಾಂಕದ ಸೆರೂನ್ಡೊಲೊ ಅವರಿಗೆ ಸೋತರು.

2023ರ ಫ್ರೆಂಚ್ ಓಪನ್ ನಂತರ ಸಿನ್ನರ್ ಅವರು ಗ್ರ್ಯಾನ್ಸ್ಲಾಮ್ ಟೂರ್ನಿ ಯಿಂದ ಇಷ್ಟುಬೇಗ ಹೊರಬಿದ್ದಿದ್ದು ಇದೇ ಮೊದಲು. ಇದು 24 ವರ್ಷದ ಸೆರೂನ್ಡೊಲೊ ಅವರಿಗೆ ವೃತ್ತಿ ಜೀವನದ ಬಲು ದೊಡ್ಡ ಯಶಸ್ಸು. ಇತ್ತೀಚಿನ ವರ್ಷಗಳಲ್ಲಿ ಟೆನಿಸ್ನ ಅತಿ ದೊಡ್ಡ ಆಘಾತಕಾರಿ ಫಲಿತಾಂಶಕ್ಕೆ ಅವರು ಕಾರಣರಾಗಿ 32ರ ಸುತ್ತನ್ನು ತಲುಪಿದರು.

ಸುಡುಬಿಸಿಲು: ಈ ಬಾರಿ ವಿರಳವೆಂಬಂತೆ ಇಲ್ಲಿ ಸುಡುಬಿಸಿಲು ಆಟಗಾರರನ್ನು ಕಾಡುತ್ತಿದೆ. ಅದರ ಪ್ರಕೋಪದಿಂದ ಅನೇಕ ಆಟಗಾರರು ತೊಂದರೆ ಎದುರಿಸಿದ್ದಾರೆ. ಝೆಕ್ ಆಟಗಾರ ಯಾಕುಬ್ ಮೆನ್ಸಿಕ್ ಅವರು ಗೆದ್ದ ಬಳಿಕ ಬುಧವಾರ ಕೋರ್ಟ್ನಲ್ಲೇ ಕುಸಿದಿದ್ದರು. ‘ಪಂದ್ಯಗಳನ್ನು ಸಂಜೆಯ ನಂತರ ಆಡಿಸಬೇಕು’ ಎಂದು ನೊವಾಕ್ ಜೊಕೊವಿಚ್ ಒತ್ತಾಯಿಸಿದ್ದರು.

ಬಿಸಿಲಿನ ಪ್ರತಾಪದಿಂದ ಬಳಲಿದವರಲ್ಲಿ 24 ವರ್ಷ ವಯಸ್ಸಿನ ಸಿನ್ನರ್ ಹೊಸ ಸೇರ್ಪಡೆ. ರೋಮ್, ಮಾಂಟೆಕಾರ್ಲೊ, ಮಯಾಮಿ ಮತ್ತು ಇಂಡಿಯನ್ಸ್ ವೆಲ್ಸ್ ಟೂರ್ನಿಗಳಲ್ಲಿ ಒಟ್ಟು 30 ಪಂದ್ಯಗಳ ಅವರ ಜಯದ ಸರಪಣಿ ಈ ಸೋಲಿನೊಡನೆ ಮುರಿಯಿತು.

ಆರಂಭದಲ್ಲಿ ಸಿನ್ನರ್ ಆಡಿದ ರೀತಿ ನೋಡಿದಾಗ ಅವರು ಇನ್ನೊಂದು ಸುಲಭ ಗೆಲುವು ದಾಖಲಿಸುವಂತೆ ಕಂಡಿತು. ಆದರೆ ಮೂರನೇ ಸೆಟ್ನಲ್ಲಿ ಇದಕ್ಕಿದ್ದ ಬಳಲತೊಡಗಿದರು. ಮೂರು ಗೇಮ್ಗಳಲ್ಲಿ ಒಂದೂ ಅಂಕ ಪಡೆಯ ಲಾಗಲಿಲ್ಲ. 9 ನಿಮಿಷ ನಂತರ ವಾಪಸು ಬಂದಾಗ ಪ್ರೇಕ್ಷಕರು ಚಪ್ಪಾಳೆಯೊಡನೆ ಹುರಿದುಂಬಿಸಿದರು. ಆದರೆ ಅಷ್ಟೇನೂ ಖ್ಯಾತರಲ್ಲದ ಅರ್ಜೆಂಟೀನಾದ ಎದುರಾಳಿ ಅಷ್ಟರಲ್ಲಿ ವಿರಾಮದ ಅವಕಾಶ ಪಡೆದು ಉತ್ಸಾಹದಿಂದ ಆಡಿದರು. ಸತತ ಒತ್ತಡ ಹೇರಿದ ಅರ್ಜೆಂ ಟೀನಾದ ಆಟಗಾರ ‘ಫೋರ್ಹ್ಯಾಂಡ್ ವಿನ್ನರ್’ ಮೂಲಕ ಗೆಲುವಿನ ಅಂಕ ಪಡೆದರು; ಮೊದಲ ಬಾರಿ ಗ್ರ್ಯಾನ್ಸ್ಲಾಮ್ ಟೂರ್ನಿಯಲ್ಲಿ ಮೂರನೇ ಸುತ್ತು ತಲುಪಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-51-1947564430

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.