ಜಿನೀವಾ: ಭಾರತದ ಯೂಕಿ ಭಾಂಬ್ರಿ– ನ್ಯೂಜಿಲೆಂಡ್ನ ಮೈಕೆಲ್ ವೀನಸ್ ಜೋಡಿಯು ಶನಿವಾರ ಮುಕ್ತಾಯಗೊಂಡ ಜಿನೀವಾ ಓಪನ್ ಎಟಿಪಿ 250 ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ನಲ್ಲಿ ರನ್ನರ್ಸ್ಅಪ್ ಆದರು.

ಮೂರನೇ ಶ್ರೇಯಾಂಕ ಪಡೆದಿದ್ದ ಈ ಜೋಡಿ, ಫೈನಲ್ ಹಣಾಹಣಿಯಲ್ಲಿ ಪ್ರಬಲ ಹೋರಾಟ ತೋರಿದರೂ 6–3, 6–7(7), 7–10ರಿಂದ ರೊಮೈನ್ ಆರ್ನೆಡೊ (ಮೊನಾಕೊ) ಹಾಗೂ ಮಾರ್ಕ್ ಪೊಲ್ಮಾನ್ಸ್ (ಆಸ್ಟ್ರೇಲಿಯಾ) ಎದುರು ಪರಾಭವಗೊಂಡಿತು.

1 ಗಂಟೆ 52 ನಿಮಿಷಗಳವರೆಗೆ ಸಾಗಿದ ಈ ಪಂದ್ಯದಲ್ಲಿ ಭಾಂಬ್ರಿ ಹಾಗೂ ವೀನಸ್ ಅವರು ಮೊದಲ ಸೆಟ್ಅನ್ನು ಸುಲಭವಾಗಿ ಗೆದ್ದುಕೊಂಡರು. ಟೈಬ್ರೇಕರ್ವರೆಗೆ ಸಾಗಿದ ಎರಡನೇ ಸೆಟ್ಅನ್ನು ರೊಮೈನ್ ಮತ್ತು ಮಾರ್ಕ್ ತಮ್ಮದಾಗಿಸಿಕೊಂಡರು. ನಿರ್ಣಾಯಕ ವಾಗಿದ್ದ ಮೂರನೇ ಸೆಟ್ನಲ್ಲಿ ತಾಳ್ಮೆಯಿಂದ ಆಡಿದ ರೊಮೈನ್– ಮಾರ್ಕ್ ಮೇಲುಗೈ ಸಾಧಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-51-958203809

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.