ಗುಬ್ಬಿ: ಭಾರತೀಯ ಮಹಿಳಾ ಟೆನ್ನಿಸ್ ತಂಡದ ಆಟಗಾರ್ತಿ ಗುಬ್ಬಿಯ ಸೋಹಾ ಸಾದಿಕ್ ಅವರನ್ನು ಭಾನುವಾರ ಪಟ್ಟಣದ ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳು ಸತ್ಕರಿಸಿದರು.

ಟೆನಿಸ್ ಫೆಡರೇಶನ್ನಿಂದ ತುಮಕೂರಿನಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಟೆನಿಸ್ ಕ್ರೀಡಾಕೂಟಕ್ಕೆ ಬಂದಿದ್ದ ಸೋಹಾ ಸಾದಿಕ್ ಅವರನ್ನು ಪಟ್ಟಣಕ್ಕೆ ಕರೆತಂದು ಸನ್ಮಾನಿಸಲಾಯಿತು.

ಸೋಹ ಸಾಧಿಕ್ ಮಾತನಾಡಿ, ‘ತವರು ಊರಿನಲ್ಲಿ ಸಿಗುತ್ತಿರುವ ಅಭಿನಂದನೆಗೆ ಚಿರಾಯುವಾಗಿದ್ದೇನೆ. ಗುಬ್ಬಿಯ ಮಣ್ಣಿನ ಮಗಳಾಗಿ ಟೆನಿಸ್ ಆಟದಲ್ಲಿ ಮಹತ್ತರ ಸಾಧನೆ ಮಾಡಬೇಕು ಎನ್ನುವ ಕನಸನ್ನು ಕಂಡಿದ್ದೇನೆ. ತವರಿನ ಜನರ ಪ್ರೋತ್ಸಾಹ, ಬೆಂಬಲಕ್ಕೆ ಚಿರಋಣಿ’ ಎಂದರು.

ಚನ್ನಬಸವೇಶ್ವರ ಕ್ರೀಡಾ ಸಂಘದ ಕಾರ್ಯದರ್ಶಿ ಶಂಕರ್ ಕುಮಾರ್ ಮಾತನಾಡಿ, ತುಮಕೂರಿನಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಟೆನಿಸ್ ಕ್ರೀಡಾಕೂಟದಲ್ಲಿ ಗುಬ್ಬಿಯ ಹೆಣ್ಣು ಮಗಳು ಭಾಗವಹಿಸುತ್ತಿರುವುದು ಹೆಮ್ಮೆಯ ವಿಚಾರ ಎಂದರು.

ಮೊಹಮ್ಮದ್ ಸಾಧಿಕ್ ಮಾತನಾಡಿ, ಫುಟ್ಬಾಲ್ ಆಟಗಾರರಾಗಿದ್ದ ಸೋಹಾ ಸಾಧಿಕ್ ಅವರ ತಂದೆ ಮಗಳಿಗೆ ಉತ್ತಮ ತರಬೇತಿ ಕೊಡಿಸುವ ಮೂಲಕ ಅಂತರರಾಷ್ಟ್ರೀಯ ಕ್ರೀಡಾಪಟುವನ್ನಾಗಿ ಬೆಳೆಸುತ್ತಿರುವುದು ಪ್ರಸಂಶನಾರ್ಹ ಎಂದು ಹೇಳಿದರು.

ಪಟ್ಟಣದ ಹಿತರಕ್ಷಣ ಸಮಿತಿ ಅಧ್ಯಕ್ಷ ಎಚ್.ಡಿ. ಯಲ್ಲಪ್ಪ, ಎಚ್.ಟಿ. ಭೈರಪ್ಪ, ಶಿಕ್ಷಕ ವಾಸಿಂ ಅನ್ವರ್, ಹಿರಿಯ ಕ್ರೀಡಾಪಟುಗಳು, ಕ್ರೀಡಾಭಿಮಾನಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-17-929645748

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.