ಗುಣೇಶ್ವರನ್‌ಗೆ ಜಯ ಸಾಕೇತ್‌ಗೆ ನಿರಾಸೆ

ಮಂಗಳವಾರ, ಜೂಲೈ 16, 2019
23 °C

ಗುಣೇಶ್ವರನ್‌ಗೆ ಜಯ ಸಾಕೇತ್‌ಗೆ ನಿರಾಸೆ

Published:
Updated:
Prajavani

ನವದೆಹಲಿ: ಭಾರತದ ಪ್ರಜ್ಞೇಶ್‌ ಗುಣೇಶ್ವರನ್‌ ಅವರು ಟರ್ಕಿಯ ಅಂಟಲ್ಯಾ ಓಪನ್‌ ಟೆನಿಸ್ ಟೂರ್ನಿಯ ಎರಡನೇ ಸುತ್ತು ಪ್ರವೇಶಿಸಿದರು. ಮೊದಲ ಸುತ್ತಿನಲ್ಲಿ ಸರ್ಬಿಯಾದ ಜಾಂಕೊ ತಿಪ್ಸಾರೆವಿಕ್‌ ಅವರನ್ನು ಪ್ರಜ್ಞೇಶ್‌ 6–0, 7–6 ಸೆಟ್‌ಗಳಿಂದ ಮಣಿಸಿದರು.

ಭಾರತದ ಸಾಕೇತ್‌ ಮೈನೇನಿ ಅವರು ಲಂಡನ್‌ನಲ್ಲಿ ನಡೆಯುತ್ತಿರುವ ವಿಂಬಲ್ಡನ್‌ ಅರ್ಹತಾ ಸುತ್ತಿನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಮೊದಲ ಸುತ್ತಿನಲ್ಲೇ ಹೊರಬಿದ್ದರು.

ದೀರ್ಘ ಹೋರಾಟ ಕಂಡುಬಂದ ಪಂದ್ಯದಲ್ಲಿ ಮೈನೇನಿ, ಸ್ಪೇನ್‌ನ ಗಿಲೆರ್ಮೊ ಗಾರ್ಸಿಯಾ ಲೋಪೆಜ್‌ ಅವರಿಗೆ 4–6, 6–4, 5–7 ಸೆಟ್‌ಗಳಿಂದ ಶರಣಾದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !