ಸಿಮೊನಾಗೆ ಜಯ, ಸ್ಲೋನ್‌ಗೆ ನಿರಾಸೆ

7

ಸಿಮೊನಾಗೆ ಜಯ, ಸ್ಲೋನ್‌ಗೆ ನಿರಾಸೆ

Published:
Updated:
Deccan Herald

ಮಾಂಟ್ರಿಯಲ್‌: ರುಮೇನಿಯಾದ ಸಿಮೊನಾ ಹಲೆಪ್‌ ಅವರು ಮಾಂಟ್ರಿಯಲ್‌ ಟೆನಿಸ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. 

ಭಾನುವಾರ ತಡರಾತ್ರಿ ನಡೆದ ಮಹಿಳೆಯರ ವಿಭಾಗದ ಫೈನಲ್‌ ಪಂದ್ಯದಲ್ಲಿ ಸಿಮೊನಾ, 7–6, 3–6, 6–4ರಿಂದ ಅಮೆರಿಕದ ಸ್ಲೋನ್‌ ಸ್ಟೆಫನ್ಸ್‌ ಅವರನ್ನು ಮಣಿಸಿದರು. ಇದರೊಂದಿಗೆ ಈ ಟೂರ್ನಿಯಲ್ಲಿ ಎರಡನೇ ಬಾರಿಗೆ ಪ್ರಶಸ್ತಿ ಗೆದ್ದರು. ಈ ಋತುವಿನಲ್ಲಿ ಅವರು ಮೂರನೇ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. 

ಅಂತಿಮ ಹಣಾಹಣಿಯು ಜಿದ್ದಾಜಿದ್ದಿನಿಂದ ಕೂಡಿತ್ತು. ಮೊದಲ ಸೆಟ್‌ನಲ್ಲಿ ಸಮಬಲ ಸಾಧಿಸಿದ ವೇಳೆ ಸ್ಲೋನ್‌ ಹಲವು ತಪ್ಪುಗಳನ್ನು ಎಸಗಿದರು. ಹೀಗಾಗಿ, ಪಾಯಿಂಟ್ಸ್‌ ಕಳೆದುಕೊಂಡರು. ಆದರೆ ಎರಡನೇ ಸೆಟ್‌ನಲ್ಲಿ ಅವರು ತಿರುಗೇಟು ನೀಡಿದರು. ಬಿರುಸಿನ ಆಟದ ಮೂಲಕ ಎದುರಾಳಿಯನ್ನು ಕಟ್ಟಿಹಾಕಿದ ಅವರು ಸೆಟ್‌ ತಮ್ಮದಾಗಿಸಿಕೊಂಡರು. ಮೂರನೇ ಸೆಟ್‌ನಲ್ಲಿ ಸಿಮೊನಾ ಎದುರಾಳಿಯ ತಂತ್ರಗಳಿಗೆ ಪ್ರತಿತಂತ್ರ ಹೆಣೆದರು. ಅವರ ಉತ್ತಮ ಸ್ಮ್ಯಾಷ್‌, ದೀರ್ಘ ರ‍್ಯಾಲಿಗಳಿಗೆ ಪ್ರತ್ಯುತ್ತರ ನೀಡಲು ಅಮೆರಿಕದ ಆಟಗಾರ್ತಿ ವಿಫಲವಾದರು. 

ಪಂದ್ಯದ ನಂತರ ಮಾತನಾಡಿದ ಸಿಮೊನಾ, ‘ಪ್ರಶಸ್ತಿ ಜಯಿಸಿದ್ದು ಸಂತಸ ತಂದಿದೆ. ಇಂದಿನ ನನ್ನ ಆಟವು ತೃಪ್ತಿ ನೀಡಿದೆ. ಸ್ಲೋನ್‌ ಕೂಡ ಉತ್ತಮ ಪೈಪೋಟಿ ನೀಡಿದರು’ ಎಂದು ಹೇಳಿದರು. 

 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !