ಮಾಂಟ್ರಿಯಲ್‌ ಟೆನಿಸ್‌ ಟೂರ್ನಿ: ಫೈನಲ್‌ಗೆ ಸಿಮೊನಾ ಹಲೆಪ್‌

7
ಆ್ಯಶ್ಲೆ ಬಾರ್ಟಿಗೆ ನಿರಾಸೆ

ಮಾಂಟ್ರಿಯಲ್‌ ಟೆನಿಸ್‌ ಟೂರ್ನಿ: ಫೈನಲ್‌ಗೆ ಸಿಮೊನಾ ಹಲೆಪ್‌

Published:
Updated:
Deccan Herald

ಮಾಂಟ್ರಿಯಲ್‌: ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರುಮೇನಿಯಾದ ಸಿಮೊನಾ ಹಲೆಪ್‌ ಅವರು ಇಲ್ಲಿ ನಡೆಯುತ್ತಿರುವ ಮಾಂಟ್ರಿಯಲ್‌ ಟೆನಿಸ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ. 

ಶನಿವಾರ ತಡರಾತ್ರಿ ನಡೆದ ಮಹಿಳೆಯರ ವಿಭಾಗದ ಸೆಮಿಫೈನಲ್‌ ಪಂದ್ಯದಲ್ಲಿ ಸಿಮೊನಾ, 6–4, 6–1ರಿಂದ ಆಸ್ಟ್ರೇಲಿಯಾದ ಆ್ಯಶ್ಲೆ ಬಾರ್ಟಿ ಅವರನ್ನು ಮಣಿಸಿದರು. 

ಪಂದ್ಯದ ಆರಂಭದಿಂದಲೂ ಬಿರುಸಿನ ಆಟವಾಡಿದ ಸಿಮೊನಾ, ಎದುರಾಳಿಯನ್ನು ಕಟ್ಟಿಹಾಕಿದರು. ಅವರ ಅಬ್ಬರದ ಆಟದ ಮುಂದೆ ಆಶ್ಲೆ ಆಟವು ಮಂಕಾಯಿತು. ರುಮೇನಿಯಾದ ಆಟಗಾರ್ತಿಯು ಮೊದಲ ಸೆಟ್‌ನಲ್ಲಿ ಸ್ವಲ್ಪ ಪ್ರತಿರೋಧ ಎದುರಿಸಿದರು. ಆದರೆ, ಎರಡನೇ ಸೆಟ್‌ನಲ್ಲಿ ಅವರ ಆಟವು ಮತ್ತಷ್ಟು ರಂಗೇರಿತು. ಎದುರಾಳಿಯನ್ನು ಒತ್ತಡಕ್ಕೆ ಸಿಲುಕಿಸಿದ ಹಲೆಪ್‌ ಸುಲಭವಾಗಿ ಪಂದ್ಯವನ್ನು ತಮ್ಮದಾಗಿಸಿಕೊಂಡರು. 

ಹಿಂದಿನ ನಾಲ್ಕು ವರ್ಷಗಳಲ್ಲಿ ಮೂರನೇ ಬಾರಿಗೆ ರುಮೇನಿಯಾದ ಆಟಗಾರ್ತಿ ಈ ಟೂರ್ನಿಯ ಅಂತಿಮ ಘಟ್ಟ ತಲುಪಿದ್ದಾರೆ. 2016ರಲ್ಲಿ ಅವರು ಈ ಟೂರ್ನಿಯ ಚಾಂಪಿಯನ್‌ ಆಗಿದ್ದರು.

ಮೂರನೇ ಶ್ರೇಯಾಂಕಿತ ಆಟಗಾರ್ತಿ ಸ್ಲೋನ್‌ ಸ್ಟೆಫನ್ಸ್‌ ಹಾಗೂ ಐದನೇ ಶ್ರೇಯಾಂಕಿತ ಆಟಗಾರ್ತಿ ಎಲಿನಾ ಸ್ವಿಟೊಲಿನಾ ಅವರ ನಡುವಿನ ಇನ್ನೊಂದು ಸೆಮಿಫೈನಲ್‌ ಪಂದ್ಯದ ವಿಜೇತರೊಂದಿಗೆ ಹಲೆಪ್‌ ಸೆಣಸಲಿದ್ದಾರೆ.

ಪಂದ್ಯದ ನಂತರ ಮಾತನಾಡಿದ ಸಿಮೊನಾ, ‘ಇಂದು ಆಡಿದ ಆಟವು ನನಗೆ ತೃಪ್ತಿ ನೀಡಿದೆ. ಉತ್ತಮ ಸರ್ವ್‌ ಹಾಗೂ ದೀರ್ಘ ರ‍್ಯಾಲಿಗಳಿಂದ ಎದುರಾಳಿಯನ್ನು ಕಟ್ಟಿಹಾಕಲು ಯಶಸ್ವಿಯಾದೆ. ಫೈನಲ್‌ ಪಂದ್ಯದಲ್ಲೂ ಇದೇ ರೀತಿಯ ಆಟವಾಡುವ ಭರವಸೆ ಇದೆ’ ಎಂದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !