ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌: ಸ್ಯಾಮ್‌ ಕ್ವೆರಿಗೆ ಆಘಾತ

ವಿಂಬಲ್ಡನ್‌ ಸಿಂಗಲ್ಸ್‌: ಮ್ಯಾಡಿಸನ್ ಕೀಸ್‌ಗೆ ಸೋಲುಣಿಸಿದ ಎವ್ಜಿನಿಯಾ ರಾಡಿನಾ
Last Updated 6 ಜುಲೈ 2018, 19:53 IST
ಅಕ್ಷರ ಗಾತ್ರ

ಲಂಡನ್‌: ಅಮೋಘ ಆಟದ ಮೂಲಕ ಅಮೆರಿಕದ ಸ್ಯಾಮ್ ಕ್ವೆರಿ ಅವರನ್ನು ದಂಗುಬಡಿಸಿದ ಶ್ರೇಯಾಂಕರಹಿತ ಆಟಗಾರ ಫ್ರಾನ್ಸ್‌ನ ಜೆಲ್‌ ಮೊನ್‌ಫಿಲ್ಸ್‌ ವಿಂಬಲ್ಡನ್‌ ಟೆನಿಸ್ ಟೂರ್ನಿಯ ನಾಲ್ಕನೇ ಸುತ್ತು ಪ್ರವೇಶಿಸಿದರು.

ಈ ಹಿಂದೆ ಆರು ಬಾರಿ ಮೂರನೇ ಸುತ್ತು ಪ್ರವೇಶಿಸಿದರೂ ಮುಂದೆ ಸಾಗುವಲ್ಲಿ ವಿಫಲರಾಗಿದ್ದ ಅವರು ಆಲ್‌ ಇಂಗ್ಲೆಂಡ್ ಅಂಗಣದ ಸೆಂಟರ್ ಕೋರ್ಟ್‌ನಲ್ಲಿ ಶುಕ್ರವಾರ ಬಲಶಾಲಿ ಹೊಡೆತಗಳ ಮೂಲಕ ಮಿಂಚಿದರು. ಪ್ರತ್ಯುತ್ತರ ನೀಡಲು ಸಾಧ್ಯವಾಗದ 11ನೇ ಶ್ರೇಯಾಂಕಿತ ಕ್ವೆರಿ 7–5, 4–6, 4–6, 2–6ರಿಂದ ಸೋತರು.

ಜ್ವೆರೆವ್‌ಗೆ ಗೆಲುವು: ಗುರುವಾರ ಮಳೆಯಿಂದಾಗಿ ಮುಂದೂಡಿದ್ದ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕಿತ ಅಲೆಕ್ಸಾಂಡರ್ ಜ್ವೆರೆವ್‌ ಶುಕ್ರವಾರ ಗೆಲುವು ಸಾಧಿಸಿದರು. ಗುರುವಾರ ಮೂರು ಸೆಟ್‌ಗಳು ಮುಕ್ತಾಯಗೊಂಡಾಗ ಎರಡು 1–2ರಿಂದ ಹಿನ್ನಡೆ ಅನುಭವಿಸಿದ ಜ್ವೆರೆವ್‌ ಶುಕ್ರವಾರ ಚೇತರಿಸಿಕೊಂಡರು. ಅವರ ಅಮೋಘ ಆಟಕ್ಕೆ ಅಮೆರಿಕದ ಟೇಲರ್ ಫ್ರಿಟ್ಜ್‌ ಮಣಿದರು. 6–4, 5–7, 6–7 (0), 6–1, 6–2ರಿಂದ ಗೆದ್ದ ಜ್ವೆರೆವ್‌ ಮೂರನೇ ಸುತ್ತು ಪ್ರವೇಶಿಸಿದರು.

‘ಗುರುವಾರ ಹಿನ್ನಡೆ ಅನುಭವಿಸಿದ್ದರಿಂದ ಬೇಸರಗೊಂಡಿದ್ದೆ.ಶುಕ್ರವಾರ ಛಲ ಬಿಡದೆ ಆಡಿದೆ. ಹೀಗಾಗಿ ಜಯ ದಕ್ಕಿತು’ ಎಂದು ಜ್ವೆರೆವ್ ಹೇಳಿದರು.

ಅಮೆರಿಕ ಓಪನ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದ ಕೆವಿನ್ ಆ್ಯಂಡರ್ಸನ್‌ ಜರ್ಮನಿಯ ಫಿಲಿಪ್‌ ಕೊಚ್ರಿಬರ್ ಅವರನ್ನು 6–3, 7–5, 7–5ರಿಂದ ಸೋಲಿಸಿ ನಾಲ್ಕನೇ ಸುತ್ತು ಪ್ರವೇಶಿಸಿದರು.

ಅರ್ಹತಾ ಸುತ್ತಿನಲ್ಲಿ ಆಡಿ ಬಂದಿದ್ದ ರಷ್ಯಾದ ಎವ್ಜಿನಿಯಾ ರಾಡಿನಾ ಮಹಿಳೆಯರ ಸಿಂಗಲ್ಸ್‌ನಲ್ಲಿ ಮ್ಯಾಡಿಸನ್ ಕೀಸ್ ಅವರನ್ನು 7–5, 5–7, 6–4ರಿಂದ ಸೋಲಿಸಿ ನಾಲ್ಕನೇ ಸುತ್ತು ಪ್ರವೇಶಿಸಿದರು. ಗ್ರ್ಯಾನ್‌ಸ್ಲಾಂ ಟೂರ್ನಿಯೊಂದರಲ್ಲಿ ಅವರು ನಾಲ್ಕನೇ ಸುತ್ತು ಪ್ರವೇಶಿಸಿದ್ದು ಇದೇ ಮೊದಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT