ಲಂಡನ್ (ಪಿಟಿಐ): ಭಾರತ ಪುರುಷರ ಮತ್ತು ಮಹಿಳೆಯರ ತಂಡಗಳು, ಮಂಗಳವಾರ ಇಲ್ಲಿ ಆರಂಭವಾಗುವ ವಿಶ್ವ ಟೀಮ್ ಟೇಬಲ್ ಟೆನಿಸ್ ಚಾಂಪಿ ಯನ್ಷಿಪ್ನಲ್ಲಿ ಎಂದಿನಂತೆ ಭರವಸೆ ಮತ್ತು ಒತ್ತಡದ ಸಮ್ಮಿಶ್ರಣದೊಡನೆ ಕಣಕ್ಕಿಳಿಯಲಿವೆ.

ಏಳನೇ ಗುಂಪಿನಲ್ಲಿರುವ ಭಾರತ ಪುರುಷರ ತಂಡದಲ್ಲಿ ಮಾನವ್ ಠಕ್ಕರ್ (ವಿಶ್ವ ಕ್ರಮಾಂಕ: 38), ಜಿ.ಸತ್ಯನ್ (42), ಮಾನುಷ್ ಶಾ (51), ಹರ್ಮೀತ್ ದೇಸಾಯಿ (80) ಮತ್ತು ಪಾಯಸ್ ಜೈನ್ (127) ಅವರನ್ನು ಒಳಗೊಂಡಿದೆ. ರ್ಯಾಂಕಿಂಗ್ ಗಣನೆಗೆ ತೆಗೆದುಕೊಂಡರೆ, ಗುಂಪಿನ ಇತರ ತಂಡಗಳಾದ ಸ್ಲೊವಾಕಿಯಾ, ಟ್ಯುನೀಷಿಯಾ ಮತ್ತು ಗ್ವಾಟೆಮಾಲಾ ಎದುರು ಭಾರತ ಗೆಲ್ಲುವ ಫೇವರಿಟ್ ಆಗಿದೆ.

ತಂಡಕ್ಕಿರುವ ಹಿನ್ನಡೆ ಎಂದರೆ ಅನುಭವಿ ಆಟಗಾರ ಶರತ್ ಕಮಲ್ ಅವರ ನಿವೃತ್ತಿ. ಒತ್ತಡದ ಸಂದರ್ಭಗಳಲ್ಲಿ ಅವರ ಅನುಭವ ತಂಡದ ಬೆನ್ನಿಗಿರುತಿತ್ತು.

ಯುವ ಉತ್ಸಾಹಿಗಳಿರುವ ಮಹಿಳೆಯರ ತಂಡವು ಆರನೇ ಗುಂಪಿನಲ್ಲಿದ್ದು, ಉಕ್ರೇನ್, ಉಗಾಂಡ ಮತ್ತು ರ್ವಾಂಡಾ ಗುಂಪಿನ ಇತರ ತಂಡಗಳಾಗಿವೆ. ಮಣಿಕಾ ಬಾತ್ರ (ವಿಶ್ವ ಕ್ರಮಾಂಕ 49), ಯಶಸ್ವಿನಿ ಘೋರ್ಪಡೆ (88), ದಿಯಾ ಚಿತಳೆ (92), ಸುತೀರ್ಥ ಮುಖರ್ಜಿ (120), ಸಿಂಡರೆಲಾ ದಾಸ್ (175) ಅವರು ತಂಡದಲ್ಲಿದ್ದಾರೆ. 16 ವರ್ಷ ವಯಸ್ಸಿನ ಸಿಂಡ್ರೆಲಾ ತಂಡದ ಕಿರಿಯಾ ಆಟಗಾರ್ತಿ.

ಉಕ್ರೇನ್ನ ತಂಡಕ್ಕೆ ಮಾರ್ಗರಿಟಾ ಪೆಸೊಟ್ಸ್ಕಾ (ವಿಶ್ವ ಕ್ರಮಾಂಕ: 51) ನೇತೃತ್ವ ವಹಿಸಿದ್ದು ಮಹಿಳಾ ತಂಡಕ್ಕೆ ಪೈಪೋಟಿ ಎದುರಾಗಬಹುದು.

ಬುಸಾನ್ (ದಕ್ಷಿಣ ಕೊರಿಯಾ)ನಲ್ಲಿ ನಡೆದ 2024ರ ಆವೃತ್ತಿಯಲ್ಲಿ ಭಾರತ ತಂಡಗಳು 32ರ ಸುತ್ತಿಗೆ ತಲುಪಿದ್ದರೂ, ಅದರಿಂದ ಮುಂದಕ್ಕೆ ಹೋಗಲು ವಿಫಲವಾಗಿದ್ದವು.

ಗುಂಪಿನಲ್ಲಿ ಅಗ್ರಸ್ಥಾನ ಪಡೆದ ತಂಡಗಳು ನೇರವಾಗಿ ಮುಖ್ಯ ಡ್ರಾಕ್ಕೆ ಪ್ರವೇಶಪಡೆಯಲಿವೆ. ಎರಡನೇ ಸ್ಥಾನ ಪಡೆದ ತಂಡಗಳು ಸಂಕೀರ್ಣ ಕ್ವಾಲಿಫಿಕೇಷನ್ ಪ್ರಕ್ರಿಯೆ ಮುಖಾಂತರ (ಪಂದ್ಯ ಅನುಪಾತ) ಅರ್ಹತೆ ಗಳಿಸಬೇಕಾಗುತ್ತದೆ.

ಈ ವರ್ಷ ಈ ಚಾಂಪಿಯನ್ಷಿಪ್ ಶತಮಾನೋತ್ಸವ ಕಾಣುತ್ತಿದೆ. ಮೊದಲ ಆವೃತ್ತಿ 1926ರಲ್ಲಿ ಇಂಗ್ಲೆಂಡ್ನಲ್ಲಿ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.