ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರ‍್ಯಾಕೆಟ್ಲನ್‌: ಭಾರತ ತಂಡಕ್ಕೆ ಪ್ರಶಸ್ತಿ

Last Updated 30 ಆಗಸ್ಟ್ 2022, 12:24 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ರ‍್ಯಾಕೆಟ್ಲನ್ ತಂಡವು ಆಸ್ಟ್ರಿಯಾದ ಗ್ರಾಜ್‌ನಲ್ಲಿ ನಡೆದ ನೇಷನ್ಸ್ ಕಪ್ ರ‍್ಯಾಕೆಟ್ಲನ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ.

ಫೈನಲ್‌ನಲ್ಲಿ ಭಾರತ 137–101ರಿಂದ ಬ್ರಿಟನ್ ತಂಡಕ್ಕೆ ಸೋಲುಣಿಸಿತು. ಈ ಕ್ರೀಡೆಯಲ್ಲಿ ರ‍್ಯಾಕೆಟ್‌ನಿಂದ ಆಡಲಾಗುವ ನಾಲ್ಕು ಆಟಗಳಲ್ಲಿ (ಟೇಬಲ್ ಟೆನಿಸ್‌, ಬ್ಯಾಡ್ಮಿಂಟನ್‌, ಟೆನಿಸ್‌ ಮತ್ತು ಸ್ಕ್ವಾಷ್‌) ಸ್ಪರ್ಧಿಸಬೇಕಾಗುತ್ತದೆ.

ನೌಕಾಸೇನೆಯ ಅಶುತೋಷ್ ಪೆಡ್ನೆಕರ್‌ಭಾರತ ತಂಡದ ನಾಯಕರಾಗಿದ್ದು, ಪ್ರಶಸ್ತಿ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ವಿಕ್ರಮಾದಿತ್ಯ ಚೌಫ್ಲಾ, ಆದರ್ಶ್ ವಿಕ್ರಂ, ಸಿದ್ಧಾರ್ಥ್ ನಂದಾಲ್‌, ವರಿಂದರ್ ಸಿಂಗ್ ಮತ್ತು ಕರಣ್ ತನೇಜಾ ತಂಡದ ಇನ್ನುಳಿದ ಸದಸ್ಯರು.

2012ರಲ್ಲಿ ವಿಶ್ವ ಬ್ಯಾಡ್ಮಿಂಟನ್‌ ವಿಶ್ವವಿದ್ಯಾನಿಲಯ ಚಾಂಪಿಯನ್‌ಷಿಪ್‌ಗಳಲ್ಲಿ ಆಡಿದ್ದ ಚೌಫ್ಲಾ, ಸಿಂಗಲ್ಸ್ ಸಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದರು. ಪುರುಷರ ಡಬಲ್ಸ್‌ನಲ್ಲಿ ಕರಣ್ ಜೊತೆಗೂಡಿ ಎರಡನೇ ಸ್ಥಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT