ನವದೆಹಲಿ (ಪಿಟಿಐ): ಭಾರತದ ಉದಯೋನ್ಮುಖ ಟೆನಿಸ್ ಆಟಗಾರ ಮಾನಸ್ ಧಾಮ್ನೆ ತಮ್ಮ ಚೊಚ್ಚಲ ಎಟಿಪಿ ಚಾಲೆಂಜರ್ ಟೂರ್ನಿಯ ಅಂತಿಮ ಸುತ್ತಿನಲ್ಲಿ ಎಡವಿದರು. ಕಜಾಕಸ್ತಾನದ ಶಿಮ್ಕೆಂಟ್ನಲ್ಲಿ ಭಾನುವಾರ ನಡೆದ ಫೈನಲ್ನಲ್ಲಿ ಅವರು ಬೆಲ್ಜಿಯಂನ ಬೂವಯ್ಸಾರ್ ಗದಮೊವ್ರಿ ಅವರಿಗೆ ಸೋತರು.

ಅನುಭವಿ ಆಟಗಾರ ಬೂವಯ್ಸಾರ್ 7–6 (8), 6–4 ರಿಂದ 18 ವರ್ಷ ವಯಸ್ಸಿನ ಧಾಮ್ನೆ ಅವರನ್ನು ಸೋಲಿಸಿದರು. ಟೈಬ್ರೇಕರ್ವರೆಗೆವಿಸ್ತರಿಸಿದ ಮೊದಲ ಸೆಟ್ನಲ್ಲಿ ಸೋತಿದ್ದು ಧಾಮ್ನೆ ಆಟದ ಮೇಲೆ ಪರಿಣಾಮ ಬೀರಿದಂತೆ ಕಂಡಿತು. ಎರಡನೇ ಸೆಟ್ನ ಆರಂಭದಲ್ಲಿ ಬ್ರೇಕ್ ಪಡೆದ ಬೂವಯ್ಸಾರ್ ಎರಡು ಗಂಟೆಗೂ ಹೆಚ್ಚುಕಾಲ ನಡೆದ ಪಂದ್ಯ ಗೆದ್ದುಕೊಂಡರು.

ಧಾಮ್ನೆ ಸೋಮವಾರ ಪ್ರಕಟಗೊಳ್ಳಲಿರುವ ಎಟಿಪಿ ರ್ಯಾಂಕಿಂಗ್ನಲ್ಲಿ ಅಗ್ರ 400ರೊಳಗೆ ಸ್ಥಾನ ಪಡೆಯುವುದು ಖಚಿತವಾಗಿದೆ. ಜೀವನಶ್ರೇಷ್ಠ 384ನೇ ಕ್ರಮಾಂಕ ಪಡೆಯುವ ಸಾಧ್ಯತೆಯಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-51-209986038

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.