ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರನೇ ಸುತ್ತಿಗೆ ರಷ್ಯಾದ ಡ್ಯಾನಿಯಲ್ ಮೆಡ್ವೆಡೆವ್

Last Updated 12 ಅಕ್ಟೋಬರ್ 2021, 19:59 IST
ಅಕ್ಷರ ಗಾತ್ರ

ಇಂಡಿಯನ್‌ ವೆಲ್ಸ್, ಅಮೆರಿಕ: ಮಳೆ ಕಾಡಿದ ಪಂದ್ಯದಲ್ಲಿ ಮಿನುಗಿದ ರಷ್ಯಾದ ಡ್ಯಾನಿಯಲ್ ಮೆಡ್ವೆಡೆವ್ ಅವರು ಇಲ್ಲಿ ನಡೆಯುತ್ತಿರುವ ಇಂಡಿಯನ್ಸ್ ವೆಲ್ಸ್ ಮಾಸ್ಟರ್ಸ್‌ ಟೆನಿಸ್ ಟೂರ್ನಿಯ ಮೂರನೇ ಸುತ್ತಿಗೆ ಕಾಲಿಟ್ಟರು.

ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಅಮೆರಿಕ ಓಪನ್ ಚಾಂಪಿಯನ್‌ ಮೆಡ್ವೆಡೆವ್‌ 6-2, 7-6 (7/1)ರಿಂದ ಸರ್ಬಿಯಾದ ಫಿಲಿಪ್‌ ಕ್ರಾಜಿನೊವಿಚ್ ಸವಾಲು ಮೀರಿದರು.

25 ವರ್ಷದ ರಷ್ಯಾ ಆಟಗಾರನಿಗೆ ಈ ಋತುವಿನಲ್ಲಿ ದೊರೆತ 50ನೇ ಜಯವಿದು. ಮುಂದಿನ ಪಂದ್ಯದಲ್ಲಿ ಅವರು ಬಲ್ಗೇರಿಯಾದ ಗ್ರಿಗರ್ ಡಿಮಿಟ್ರೊವ್ ಅವರನ್ನು ಎದುರಿಸಲಿದ್ದಾರೆ.

ಮತ್ತೊಂದು ಪಂದ್ಯದಲ್ಲಿ ಡಿಮಿಟ್ರೊವ್‌ 6-3, 6-4ರಿಂದ ಅಮೆರಿಕದ ರಿಲಿ ಒಪೆಲ್ಕಾ ಅವರನ್ನು ಮಣಿಸಿದರು.

ಅರ್ಜೆಂಟೀನಾದ ಡಿಗೊ ಸ್ವಾಟ್ಜ್‌ಮನ್‌ ಹಾಗೂ ನಾರ್ವೆಯ ಕಾಸ್ಪರ್ ರುಡ್‌ ಕೂಡ ಮೂರನೇ ಸುತ್ತು ತಲುಪಿದರು. ಸ್ವಾಟ್ಜ್‌ಮನ್‌ 5-7, 6-4, 6-0ರಿಂದ ಬ್ರಿಟನ್‌ನ ಡೇನಿಯಲ್ ಇವಾನ್ಸ್ ಎದುರು, ರುಡ್‌ 6-7 (4/7), 6-4, 6-4ರಿಂದ ದಕ್ಷಿಣ ಆಫ್ರಿಕಾದ ಲಾಯ್ಡ್ ಹ್ಯಾರಿಸ್ ಎದುರು ಗೆದ್ದರು.

ಮಹಿಳೆಯರ ಸಿಂಗಲ್ಸ್‌ ಮೂರನೇ ಸುತ್ತಿನ ಪಂದ್ಯಗಳಲ್ಲಿ ಜೆಕ್ ಗಣರಾಜ್ಯದ ಕರೋಲಿನಾ ಪ್ಲಿಸ್ಕೊವಾ 3–6, 5–7ರಿಂದ ಬ್ರೆಜಿಲ್‌ನ ಬೀಟ್‌ರಿಜ್‌ ಹದ್ದಾದ್‌ ಮೈಯಾ ವಿರುದ್ಧ ಸೋಲು ಅನುಭವಿಸಿದರೆ, ಕೆನಡಾದ ಬಿಯಾಂಕಾ ಆ್ಯಂಡ್ರಿಸ್ಕ್ಯೂ 6–7 (5/7), 3–6ರಿಂದ ಈಸ್ಟೋನಿಯಾದ ಅನೆಟ್‌ ಕೊಂಟಾವೆಟ್‌ ಎದುರು
ಎಡವಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT