ಇಂಡಿಯನ್ ವೆಲ್ಸ್ (ಅಮೆರಿಕ): ಇಟಲಿಯ ಯಾನಿಕ್ ಸಿನ್ನರ್ ಮತ್ತು ಬೆಲರೂಸ್ನ ಅರಿನಾ
ಸಬಲೆಂಕಾ ಅವರು ಭಾನುವಾರ ಇಂಡಿಯನ್ ವೆಲ್ಸ್ ಎಟಿಪಿ ಮಾಸ್ಟರ್ಸ್ 1000 ಟೆನಿಸ್ ಟೂರ್ನಿಯಲ್ಲಿ
ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ವಿಶ್ವದ ಎರಡನೇ ಕ್ರಮಾಂಕದ ಸಿನ್ನರ್ ಅವರು ರೋಚಕ ಫೈನಲ್ ಹಣಾಹಣಿಯಲ್ಲಿ 7-6 (6), 7-6 (4)ರಿಂದ ಡೇನಿಯಲ್ ಮೆಡ್ವೆಡೇವ್ ಅವರನ್ನು ಮಣಿಸಿದರು. ಈ ಟೂರ್ನಿಯಲ್ಲಿ ಅವರು ಒಂದೂ ಸೆಟ್ ಕಳೆದುಕೊಳ್ಳದೆ ಪಾರಮ್ಯ ಮೆರೆದರು.

24 ವರ್ಷದ ಸಿನ್ನರ್ ಅವರು ಮೆಡ್ವೆಡೇವ್ ವಿರುದ್ಧದ ಕೊನೆಯ 10 ಮುಖಾಮುಖಿಯಲ್ಲಿ ಒಂಬತ್ತನೇ ಬಾರಿ ಜಯಗಳಿಸಿ, ಕ್ಯಾಲಿಫೋರ್ನಿಯಾ ಮರುಭೂಮಿಯಲ್ಲಿ ತನ್ನ ಮೊದಲ ಪ್ರಶಸ್ತಿಯನ್ನು ಗೆದ್ದರು. ಅಮೋಘ ಲಯದಲ್ಲಿದ್ದ ರಷ್ಯಾದ ಮೆಡ್ವೆಡೇವ್ ಅವರು ಸೆಮಿಫೈನಲ್ನಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ಕಾರ್ಲೋಸ್ ಅಲ್ಕರಾಜ್ (ಸ್ಪೇನ್) ಅವರಿಗೆ ಆಘಾತ ನೀಡಿದ್ದರು.

ನಾಲ್ಕು ಗ್ರ್ಯಾನ್ಸ್ಲಾಮ್ ಕಿರೀಟಗಳಿಗೆ ಒಡೆಯನಾಗಿರುವ ಸಿನ್ನರ್ 2026ರ ಋತುವಿನಲ್ಲಿ ಮೊದಲ ಪ್ರಶಸ್ತಿಗೆ ಮುತ್ತಿಕ್ಕಿದರು. ಎರಡನೇ ಸೆಟ್ನ ಟೈ ಬ್ರೇಕರ್ನಲ್ಲಿ 0-4 ಹಿನ್ನೆಡೆಯಿಂದ ಚೇತರಿಸಿಕೊಂಡು ಗೆಲುವಿನ ನಗೆ ಬೀರಿದರು. ಇದರೊಂದಿಗೆ ಎಟಿಪಿ ಸರಣಿಯಲ್ಲಿ ಮೆಡ್ವೆಡೇವ್ ಅವರ ಸತತ 9 ಪಂದ್ಯಗಳ ಗೆಲುವಿನ ಓಟಕ್ಕೆ ತಡೆಬಿತ್ತು. ಅವರು ಕಳೆದ ತಿಂಗಳು ದುಬೈ ಓಪನ್ ಪ್ರಶಸ್ತಿ ಗೆದ್ದಿದ್ದರು.

ಸಿನ್ನರ್ ಅವರು ಎಟಿಪಿಯ ಆರೂ ಹಾರ್ಡ್ಕೋರ್ಟ್ ಮಾಸ್ಟರ್ಸ್ 1000 ಪ್ರಶಸ್ತಿ ಗೆದ್ದ ಮೂರನೇ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು. ಈ ಮೊದಲು ದಿಗ್ಗಜರಾದ ರೋಜರ್ ಫೆಡರರ್ ಮತ್ತು ನೊವಾಕ್ ಜೊಕೊವಿಕ್ ಈ ಸಾಧನೆ ಮಾಡಿದ್ದಾರೆ.

ಸಬಲೆಂಕಾಗೆ ಕಿರೀಟ: ಅಗ್ರ ಶ್ರೇಯಾಂಕದ ಸಬಲೆಂಕಾ ಆರಂಭಿಕ ಸೆಟ್ನ ಹಿನ್ನಡೆಯಿಂದ ಚೇತರಿಸಿಕೊಂಡು 3-6, 6-3, 7-6 (6) ರಿಂದ ಕಜಾಕಸ್ತಾನದ ಎಲೆನಾ ರಿಬಾಕಿನಾ ಅವರನ್ನು ಮಣಿಸಿದರು. 2023 ಮತ್ತು 2025 ರಲ್ಲಿ ರನ್ನರ್ ಅಪ್ ಆಗಿದ್ದ ಸಬಲೆಂಕಾ ಇಲ್ಲಿ ಮೊದಲ ಬಾರಿ ಪ್ರಶಸ್ತಿಗೆ ಮುತ್ತಿಕ್ಕಿದರು.

ಉಭಯ ಆಟಗಾರ್ತಿಯರ 16ನೇ ಬಾರಿ ಮುಖಾಮುಖಿ ಇದಾಗಿದ್ದು, ಸಬಲೆಂಕಾ ಈಗ 9-7 ಮುನ್ನಡೆಯನ್ನು ಸಾಧಿಸಿದ್ದಾರೆ. 2025ರ ಡಬ್ಲ್ಯುಯೂಟಿಎ ಫೈನಲ್ಸ್ ಚಾಂಪಿಯನ್ಷಿಪ್ ಮತ್ತು ಆಸ್ಟ್ರೇಲಿಯನ್ ಓಪನ್ ಟೂರ್ನಿಗಳ ಫೈನಲ್ನಲ್ಲಿ ರಿಬಾಕಿನಾ ವಿರುದ್ಧದ ಸೋಲಿಗೆ ಬೆಲರೂಸ್ನ ಆಟಗಾರ್ತಿ ಇಲ್ಲಿ ಮುಯ್ಯಿ
ತೀರಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.