ಇಂಡಿಯನ್ ವೆಲ್ಸ್ (ಅಮೆರಿಕ): ಪಿಎನ್ಬಿ ಪರಿಬಾಸ್ (ಇಂಡಿಯನ್ಸ್ ವೆಲ್ಸ್) ಓಪನ್ ಟೆನಿಸ್ ಟೂರ್ನಿಯಲ್ಲಿ ಭಾರತದ ಯುಕಿ ಭಾಂಬ್ರಿ ಮತ್ತು ಅವರ ಸ್ವೀಡಿಷ್ ಜೊತೆಗಾರ ಆಂಡ್ರೆ ಗೊರಾನ್ಸನ್ ಅವರ ಯಶಸ್ಸಿನ ಓಟ ಸೆಮಿಫೈನಲ್ನಲ್ಲಿ ಕೊನೆಗೊಂಡಿತು.

ಶುಕ್ರವಾರ ರಾತ್ರಿ ನಡೆದ ತೀವ್ರ ಹೋರಾಟದ ಪಂದ್ಯದಲ್ಲಿ ಶ್ರೇಯಾಂಕರಹಿತ ಭಾಂಬ್ರಿ– ಗೊರಾನ್ಸನ್ ಜೋಡಿ 5–7, 7–6 (7), 5–10 ರಲ್ಲಿ ಫ್ರಾನ್ಸ್ನ ಆರ್ಥರ್ ರಿಂಡರ್ನೆಕ್– ಮೊನಾಕೊದ ವೆಲೆಂಟಿನ್ ವೆಕ್ಯರಾಟ್ ಜೋಡಿಯೆದುರು ಸೋಲನುಭವಿತು.

33 ವರ್ಷದ ಭಾಂಬ್ರಿ ಈ ಸೋಲಿನ ಹೊರತಾಗಿಯೂ ವೃತ್ತಿ ಜೀವನದಲ್ಲಿ ಮಹತ್ವದ ಮೈಲುಗಲ್ಲು ಸಾಧಿಸಿದರು. ಎಟಿಪಿ ಮಾಸ್ಟರ್ಸ್ 1000 ದರ್ಜೆಯ ಟೂರ್ನಿಯಲ್ಲಿ ಇದೇ ಮೊದಲ ಬಾರಿ ಸೆಮಿಫೈನಲ್ ತಲುಪಿದ್ದರು.

ಕ್ವಾರ್ಟರ್ಫೈನಲ್ನಲ್ಲಿ ಭಾಂಬ್ರಿ– ಗೊರಾನ್ಸನ್ ಜೋಡಿ 6–3, 7–6 (7) ರಿಂದ ಪ್ರಬಲ ಎದುರಾಳಿಗಳಾದ ಅಲೆಕ್ಸಾಂಡರ್ ಎರ್ಲರ್ (ಆಸ್ಟ್ರಿಯಾ)– ಆ್ಯಂಡ್ರಿಯಾ ವಾವಸೋರಿ (ಇಟಲಿ) ಅವರನ್ನು ಸೋಲಿಸಿತ್ತು.

ಎರಡು ವರ್ಷಗಳಿಂದ ಭಾರತದ ಯಾವುದೇ ಆಟಗಾರ ಮಾಸ್ಟರ್ಸ್ 1000 ಟೂರ್ನಿಯ ಸೆಮಿಫೈನಲ್ ತಲುಪಿರಲಿಲ್ಲ. 2024ರಲ್ಲಿ ರೋಹನ್ ಬೋಪಣ್ಣ ಅವರು ಮಯಾಮಿ ಓಪನ್ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.