ಇಂಡಿಯನ್ ವೆಲ್ಸ್ (ಅಮೆರಿಕ): ಹಾಲಿ ಋತುವಿನಲ್ಲಿ ಅಜೇಯ ಓಟ ಮುಂದು ವರಿಸಿರುವ ವಿಶ್ವದ ಅಗ್ರಮಾನ್ಯ ಆಟಗಾರ ಕಾರ್ಲೋಸ್ ಅಲ್ಕರಾಜ್ ಅವರು ಮಂಗಳವಾರ ಇಂಡಿಯನ್ ವೆಲ್ಸ್ ಟೆನಿಸ್ ಟೂರ್ನಿಯಲ್ಲಿ ನಾಲ್ಕನೇ ಸುತ್ತಿಗೆ ಲಗ್ಗೆ ಹಾಕಿದರು.

ಸ್ಪೇನ್ನ ತಾರೆ ಪುರುಷರ ಸಿಂಗಲ್ಸ್ ಮೂರನೇ ಸುತ್ತಿನ ಪಂದ್ಯದಲ್ಲಿ ಆರಂಭಿಕ ಸೆಟ್ನ ಹಿನ್ನಡೆಯಿಂದ ಚೇತರಿಸಿಕೊಂಡು 6-7 (6/8), 6-3, 6-2ರಿಂದ ಫ್ರಾನ್ಸ್ನ ಆರ್ಥರ್ ರಿಂಡರ್ನೆಕ್ ಅವರನ್ನು ಮಣಿಸಿದರು. ಪ್ರಿ ಕ್ವಾರ್ಟರ್ ಫೈನಲ್ನಲ್ಲಿ ಅಲ್ಕರಾಜ್ ಅವರು 13ನೇ ಶ್ರೇಯಾಂಕದ ಕ್ಯಾಸ್ಪರ್ ರೂಡ್ (ನಾರ್ವೆ) ಅವರನ್ನು ಎದುರಿಸಲಿದ್ದಾರೆ.

22 ವರ್ಷದ ಅಲ್ಕರಾಜ್ ಅವರು ಜನವರಿಯಲ್ಲಿ ಆಸ್ಟ್ರೇಲಿಯನ್ ಓಪನ್ ಗೆಲುವಿನೊಂದಿಗೆ ನಾಲ್ಕೂ ಗ್ರ್ಯಾನ್ಸ್ಲಾಮ್ ಗೆದ್ದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ದ್ದರು. ನಂತರ ಕತಾರ್ ಓಪನ್ ಪ್ರಶಸ್ತಿ ಮುಡಿಗೇರಿಸಿಕೊಂಡ ಅವರು ಇಂಡಿಯನ್ ವೆಲ್ಸ್ನಲ್ಲಿ ಗೆಲುವಿನ ಅಭಿಯಾನ ಮುಂದುವರಿಸಿದರು. ಪ್ರಸಕ್ತ ವರ್ಷದಲ್ಲಿ ಸತತ 14 ಪಂದ್ಯಗಳನ್ನು ಗೆದ್ದಿದ್ದಾರೆ.

ಸರ್ಬಿಯಾದ ದಿಗ್ಗಜ ಆಟಗಾರ ನೊವಾಕ್ ಜೊಕೊವಿಚ್ ಅವರೂ ಮೂರು ಸೆಟ್ಗಳ ಪ್ರಯಾಸದ ಗೆಲುವು ದಾಖಲಿಸಿದರು. ಮೂರನೇ ಶ್ರೇಯಾಂಕದ ಅವರು 6-4, 1-6, 6-4ರಿಂದ 72ನೇ ಕ್ರಮಾಂಕದ ಅಲೆಕ್ಸಾಂಡರ್ ಕೊವಾಸೆವಿಕ್ ಅವರನ್ನು ಸೋಲಿಸಿದರು. ಅಮೆರಿಕದ ಆಟಗಾರ ಎರಡನೇ ಸೆಟ್ನಲ್ಲಿ ಮೇಲುಗೈ ಮೂಲಕ ಜೊಕೊವಿಚ್ ಅವರನ್ನು ಒತ್ತಡಕ್ಕೆ ಸಿಲುಕಿಸಿದ್ದರು.

ಇಂಡಿಯನ್ ವೆಲ್ಸ್ನಲ್ಲಿ ಐದು ಬಾರಿ ಪ್ರಶಸ್ತಿ ಗೆದ್ದಿರುವ ಜೊಕೊವಿಕ್ ಅವರು ರೋಜರ್ ಫೆಡರರ್ ಅವರೊಂದಿಗೆ ದಾಖಲೆಯನ್ನು ಹಂಚಿಕೊಂಡಿದ್ದಾರೆ. ಆದರೆ, 2017ರ ನಂತರ ಮೊದಲ ಬಾರಿಗೆ ನಾಲ್ಕನೇ ಸುತ್ತು ತಲುಪಿದ್ದಾರೆ.

ಬ್ರಿಟನ್ನ ಕ್ಯಾಮರೂನ್ ನಾರ್ರಿ 6-4, 6-4 ಸೆಟ್ಗಳಿಂದ ಆರನೇ ಶ್ರೇಯಾಂಕದ ಆಸ್ಟ್ರೇಲಿಯಾದ ಅಲೆಕ್ಸ್ ಡಿ ಮಿನೋರ್ ಅವರಿಗೆ ಆಘಾತ ನೀಡಿದರು. ಅಮೆರಿಕದ ಅಲೆಕ್ಸ್ ಮೈಕೆಲ್ಸನ್ 6-4, 7-6 (8/6) ರಿಂದ ಏಳನೇ ಶ್ರೇಯಾಂಕದ ಅಮೆರಿಕದ ಟೇಲರ್ ಫ್ರಿಟ್ಜ್ ಅವರನ್ನು ಸೋಲಿಸಿದರು. ಆಸ್ಟ್ರೇಲಿಯಾದ ಕ್ವಾಲಿಫೈಯರ್ ಆಟಗಾರ ರಿಂಕಿ ಹಿಜಿಕಾಟಾ 6-7 (3/7), 7-6 (7/3), 6-3ರಿಂದ 10ನೇ ಶ್ರೇಯಾಂಕದ ಅಲೆಕ್ಸಾಂಡರ್ ಬಬ್ಲಿಕ್ (ಕಜಾಕಸ್ತಾನ) ಅವರನ್ನು ಹಿಮ್ಮೆಟ್ಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.