ಕಲಬುರಗಿ: 2025–26ನೆಯ ಸಾಲಿನ ಅಂತರ್ ಕಂಪನಿಗಳ ರಾಜ್ಯಮಟ್ಟದ ಪುರುಷರ ಟೆನಿಸ್ ಕ್ರೀಡಾಕೂಟದಲ್ಲಿ ದೌಲತರಾಯ ಹಡಪದ ನೇತೃತ್ವದ ಗುಲ್ಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ (ಜೆಸ್ಕಾಂ) ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಮಂಡ್ಯ ನಗರದಲ್ಲಿ ಈಚೆಗೆ ಜರುಗಿದ ಕ್ರೀಡಾಕೂಟದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಮುಖ್ಯ ಎಂಜಿನಿಯರ್ ಹಾಗೂ ಕ್ರೀಡಾ ಸಮಿತಿಯ ಅಧ್ಯಕ್ಷ ಸುನೀಲ್ ಕುಮಾರ್ ಅವರು ಜೆಸ್ಕಾಂ ತಂಡದ ಆಟಗಾರರಿಗೆ ಟ್ರೋಫಿ ಪ್ರದಾನ ಮಾಡಿದರು.

ಜೆಸ್ಕಾಂ ತಂಡದ ದೌಲತರಾಯ ಹಡಪದ, ಸಯ್ಯದ್ ಅಮ್ಜದ್ ಅಲಿ, ನಾಗರಾಜ್ ಹಾಗೂ ವಿನೋದಕುಮಾರ್ ಅವರು ಟ್ರೋಫಿ ಸ್ವೀಕರಿಸಿ ಸಂಭ್ರಮಿಸಿದರು. ಕೂಟದಲ್ಲಿ ಜೆಸ್ಕಾಂ, ಮೆಸ್ಕಾಂ, ಬೆಸ್ಕಾಂ, ಸೆಸ್ಕ್ ಮತ್ತಿತರ ಕಂಪನಿಗಳು ಭಾಗವಹಿಸಿದ್ದವು.

ವಿಜೇತ ಜೆಸ್ಕಾಂ ತಂಡಕ್ಕೆ ಜೆಸ್ಕಾಂನ ಎಸ್ಸಿ, ಎಸ್ಟಿ ಯೂನಿಯನ್ ಉಪಾಧ್ಯಕ್ಷ ಪರಂಗಪ್ಪ ಸೇರಿದಂತೆ ಅಧಿಕಾರಿ, ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-34-1115914850

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.