ಕಲಬುರಗಿ: ದಿಟ್ಟ ಆಟವಾಡಿದ ಭಾರತದ ಅನುಭವಿ ಆಟಗಾರ್ತಿ ಅಂಕಿತಾ ರೈನಾ ಹಾಗೂ ಭರವಸೆಯ ಪ್ರತಿಭೆ ವೈಷ್ಣವಿ ಅಡ್ಕರ್ ಅವರು ಕಲಬುರಗಿ ಓಪನ್ ಐಟಿಎಫ್ ಮಹಿಳೆಯರ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಎಂಟರಘಟ್ಟಕ್ಕೆ ಮುನ್ನಡೆದರು. ಆದರೆ, ಜೀಲ್ ದೇಸಾಯಿ ಅವರ ಹೋರಾಟ ಪ್ರಿಕ್ವಾರ್ಟರ್ಫೈನಲ್ನಲ್ಲೇ ಅಂತ್ಯವಾಯಿತು.

ಇಲ್ಲಿಯ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ 16ರ ಘಟ್ಟದ ಹಣಾಹಣಿಯಲ್ಲಿ ಎಂಟನೇ ಶ್ರೇಯಾಂಕದ ಅಂಕಿತಾ 6–2, 6–1ರಿಂದ ಉಜ್ಬೆಕಿಸ್ತಾನದ ಮಿಲಾನಾ ಮಸ್ಲೆಂಕೊವಾ ಅವರನ್ನು ಮಣಿಸಿದರು.

ಶರವೇಗದ ಸರ್ವ್ ಮತ್ತು ಹೊಡೆತಗಳ ಮೂಲಕ ಮೊದಲ ಸೆಟ್ನಲ್ಲಿ ಆರಂಭದ ಮೂರು ಗೇಮ್ಗಳನ್ನು ತಮ್ಮದಾಗಿಸಿಕೊಂಡ ಅಂಕಿತಾ, ಎರಡನೇ ಗೇಮ್ನಲ್ಲಿ ಎದುರಾಳಿಯ ಸರ್ವ್ ಮುರಿದರು. ನಂತರದ ಒಂದು ಗೇಮ್ ಮಸ್ಲೆಂಕೊವಾ ಪಾಲಾಯಿತು. ತೀವ್ರ ಪೈಪೋಟಿ ಮುಂದುವರಿದು ಇಬ್ಬರೂ ತಲಾ ಒಂದೊಂದು ಗೇಮ್ ಜಯಿಸಿದಾಗ ಅಂಕಿತಾ 4–2ರ ಮುನ್ನಡೆಯಲಿದ್ದರು. ಏಳನೇ ಗೇಮ್ ಕೂಡ ಆತಿಥೇಯ ಆಟಗಾರ್ತಿ ಮಡಿಲಿಗೆ ಬಂತು. ಎಂಟನೇ ಗೇಮ್ನಲ್ಲಿ ಸುಮಾರು 10 ನಿಮಿಷಕ್ಕೂ ಹೆಚ್ಚು ಕಾಲ ಅಡ್ವಾಂಟೇಜ್, ಡ್ಯೂಸ್ಗಳ ಸರಣಿ ನಡೆಯಿತು. ಒತ್ತಡ ಮೆಟ್ಟಿನಿಂತ ಅಂಕಿತಾ, ಅಂತಿಮವಾಗಿ ಗೇಮ್ ಹಾಗೂ ಸೆಟ್ ಕೈವಶಮಾಡಿಕೊಂಡರು.

ಅಂಕಿತಾ ಎರಡನೇ ಸೆಟ್ನಲ್ಲಿ ಎದುರಾಳಿಗೆ ಕೇವಲ ಒಂದು ಗೇಮ್ (2ನೇ) ಬಿಟ್ಟುಕೊಟ್ಟು ಸಂಪೂರ್ಣ ಪ್ರಾಬಲ್ಯ ಸಾಧಿಸಿದರು.

ಎಐಟಿಎ ರ್ಯಾಂಕಿಂಗ್ನಲ್ಲಿ ಆರನೇ ಸ್ಥಾನದಲ್ಲಿರುವ ವೈಷ್ಣವಿ 6–2, 6–0ರಿಂದ ರಷ್ಯಾದ ಆ್ಯನಾ ಸೆದಿಶೆವಾ ಅವರನ್ನು ಪರಾಭವಗೊಳಿಸಿದರು. 55 ನಿಮಿಷಗಳಲ್ಲಿ ಮುಗಿದ ಈ ಪೈಪೋಟಿಯಲ್ಲಿ 21ರ ಹರಯದ ಪುಣೆ ಆಟಗಾರ್ತಿ ಎರಡು ಭರ್ಜರಿ ಏಸ್ಗಳನ್ನೂ ಸಿಡಿಸಿದರು. ಐದು ಬಾರಿ ಎದುರಾಳಿಯ ಸರ್ವ್ ಮುರಿದರು.

ಇನ್ನೊಂದು ಹಣಾಹಣಿಯಲ್ಲಿ ಐದನೇ ಶ್ರೇಯಾಂಕದ ಜೀಲ್ ದೇಸಾಯಿ ಅವರಿಗೆ 6–7, 3–6ರಿಂದ ರಷ್ಯಾದ ಎಲಿನಾ ನೇಪಿಲಿ ಎದುರು ಸೋಲು ಎದುರಾಯಿತು. ಟೈಬ್ರೇಕ್ವರೆಗೆ ಸಾಗಿದ ಮೊದಲ ಸೆಟ್ನಲ್ಲಿ ತೀವ್ರ ಪೈಪೋಟಿ ನೀಡಿದ್ದ ಜೀಲ್, ಎರಡನೇ ಸೆಟ್ನಲ್ಲಿ ಮಂಕಾದಂತೆ ಕಂಡುಬಂದರು.

ಸಿಂಗಲ್ಸ್ ವಿಭಾಗದ ಇನ್ನುಳಿದ ಪ್ರಿಕ್ವಾರ್ಟರ್ಫೈನಲ್ ಪಂದ್ಯಗಳಲ್ಲಿ ಅಗ್ರಶ್ರೇಯಾಂಕದ ಆಟಗಾರ್ತಿ, ನೆದರ್ಲೆಂಡ್ಸ್ನ ಯಾಸ್ಮಿನ್ ಜಿಂಬ್ರೆರೆ 7–5, 7–5ರಿಂದ ಸಿಂಗಪುರದ ಇವಾ ಮೇರಿ ಡೆಸ್ವಿನ್ಸ್ ಎದುರು, ಇಸ್ರೇಲ್ನ ಮಾಯನ್ ಲಾರೆನ್ 6–3, 6–1ರಿಂದ ಜಪಾನ್ನ ಮಿಚಿಕಾ ಒಜೆಕಿ ವಿರುದ್ಧ, ರಷ್ಯಾದ ಎವ್ಜೆನಿಯಾ ಬರ್ಡಿನಾ 7–6, 6–2ರಿಂದ ತಮ್ಮದೇ ದೇಶದ ಸುಫಿಯಾ ಸುಸ್ಲೊವಾ ಮೇಲೆ, ಥಾಯ್ಲೆಂಡ್ನ ಅಂಚಿಸಾ ಚಂತಾ 6–3, 6–3ರಿಂದ ಬೆಲಾರಸ್ನ ಪೊಲಿನಾ ಕುಹರೆಂಕೊ ವಿರುದ್ಧ, ಥಾಯ್ಲೆಂಡ್ನ ಥಾಸಪಾರ್ನ್ ನಕ್ಲೊ 6–3, 6–0ರಿಂದ ರಷ್ಯಾದ ಸೋಫಿಯಾ ಮಾರ್ಟಿಯಾನೊವಾ ವಿರುದ್ಧ ಗೆದ್ದು ಕ್ವಾರ್ಟರ್ಫೈನಲ್ಗೆ ಕಾಲಿಟ್ಟರು.

ಕರ್ನಾಟಕದ ಜೋಡಿಗೆ ಸೋಲು

ಡಬಲ್ಸ್ ವಿಭಾಗದ ಕಣದಲ್ಲಿದ್ದ ಕರ್ನಾಟಕದ ಜೋಡಿ ಸ್ನಿಗ್ಧಾ ಕಾಂತಾ–ಹರ್ಷಿಣಿ ನಾಗರಾಜ್ ಕ್ವಾರ್ಟರ್ಫೈನಲ್ನಲ್ಲಿ 7–5 6–2ರಿಂದ ಸ್ವದೇಶದ ಸೋನಲ್ ಪಾಟೀಲ್– ಬಾಳಾ ಥಮಾಂಕರ್ ಎದುರು ಸೋತಿತು. ಶ್ರಾವ್ಯಾ ಶಿವಾನಿ ಚಿಲಕಲಪುಡಿ ಹಾಗೂ ಮಿಷಿಕಾ ಒಜೆಕಿ 7–5 2–6 10–6ರಿಂದ ಜೀಲ್ ದೇಸಾಯಿ – ಎಲಿನಾ ನೇಪಿಲಿ ಎದುರು ವೈಷ್ಣವಿ– ಅಂಕಿತಾ 6–2 6–2ರಿಂದ ಬರ್ಡಿನಾ– ಮಾರ್ಟಿಯಾನೊವಾ ವಿರುದ್ಧ ಗೆದ್ದು ಸೆಮಿಫೈನಲ್ ಪ್ರವೇಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.