ಬೆಂಗಳೂರು: ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಪಡೆದಿರುವ ಬೆಂಗಳೂರಿನ ಕ್ರಿಶ್ ತ್ಯಾಗಿ ನಿರಾಯಾಸ ಗೆಲುವು ಸಾಧಿಸುವಂತೆ ಕಂಡಾಗ ಒಂದಷ್ಟು ತಪ್ಪುಗಳನ್ನು ಎಸಗಿದರು. ಆದರೆ ಅವು ದುಬಾರಿಯಾಗದೇ ಅವರು 6–4, 6–4 ರಿಂದ ಜಪಾನ್ನ ಯೂತಾ ಕವಾಹಾಶಿ ಅವರನ್ನು ಸೋಲಿಸಿ ಕರ್ನಾಟಕ ಓಪನ್ ಟೆನಿಸ್ ಟೂರ್ನಿಯ ಸಿಂಗಲ್ಸ್ ಕ್ವಾರ್ಟರ್ಫೈನಲ್ ತಲುಪಿದರು.

ಕಬ್ಬನ್ಪಾರ್ಕ್ನ ಎಸ್.ಎಂ.ಕೃಷ್ಣ ಟೆನಿಸ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ, 19 ವರ್ಷ ವಯಸ್ಸಿನ ಕ್ರಿಶ್ ಮೊದಲ ಸೆಟ್ ಗೆದ್ದ ನಂತರ ಎರಡನೇ ಸೆಟ್ನಲ್ಲಿ 4–1 ಮುನ್ನಡೆ ಸಾಧಿಸಿದ್ದರು.

ಭರ್ಜರಿ ಸರ್ವ್, ಶಕ್ತಿಶಾಲಿ ಹೊಡೆತಗಳನ್ನು ಆಡಿದ ಅವರು ಎರಡನೇ ಸೆಟ್ನಲ್ಲಿ ಒಂದು ಸರ್ವ್ ಕಳೆದುಕೊಂಡಿದ್ದರೂ ಸುಲಭ ಗೆಲುವಿನ ಹಾದಿಯಲ್ಲಿದ್ದರು. ಆದರೆ ಈ ಹಂತದಲ್ಲಿ ತಪ್ಪುಗಳಾದವು. ಮೊದಲ ಸರ್ವ್ಗಳಲ್ಲಿ ‘ಫಾಲ್ಟ್’ಗಳಾದವು. ಅವರ ಹೊಡೆತಗಳು ಅಂಕಣದಾಚೆ ಹೋದವು. ಜಪಾನ್ನ ಆಟಗಾರ ಇದರಿಂದ ಅಂತರವನ್ನು 3–4ಕ್ಕೆ ಇಳಿಸಿದರು. ಆದರೆ ಸಂಯಮ ಕಳೆದುಕೊಳ್ಳದೇ ಆಡಿದ ಅವರು ಮೊದಲಿನ ಲಯಕ್ಕೆ ಮರಳಿ ಪಂದ್ಯ ಗೆದ್ದರು.

ಕ್ರಿಶ್ ಜೊತೆ, ಚೆನ್ನೈನ 26 ವರ್ಷ ವಯಸ್ಸಿನ ಮನೀಶ್ ಸುರೇಶ್ ಕುಮಾರ್ ಅವರು ಕಣದಲ್ಲಿ ಉಳಿದಿರುವ ಭಾರತದ ಇನ್ನೊಬ್ಬ ಆಟಗಾರ ಎನಿಸಿದ್ದಾರೆ. ಇಬ್ಬರೂ ಇದೇ ಮೊದಲ ಬಾರಿ ಎಟಿಪಿ ಚಾಲೆಂಜರ್ ಮಟ್ಟದ ಟೂರ್ನಿಯಲ್ಲಿ ಎಂಟರ ಘಟ್ಟ ತಲುಪಿದ್ದಾರೆ.

ವಿಶ್ವ ಕ್ರಮಾಂಕದಲ್ಲಿ 829ನೇ ಸ್ಥಾನದಲ್ಲಿರುವ ಮನೀಶ್ 6–4, 3–2 ರಿಂದ ಮುಂದಿದ್ದಾಗ ಅವರ ಎದುರಾಳಿ ಬ್ರಿಟನ್ನ ಆಲಿಸ್ಟರ್ ಗ್ರೇ ಪಂದ್ಯ ಬಿಟ್ಟುಕೊಟ್ಟರು.

ಆದರೆ ಮುಕುಂದ್ ಶಶಿಕುಮಾರ್ ಹೊರಬಿದ್ದರು. ಬ್ರಿಟನ್ನ ಆಟಗಾರ, ಎರಡನೇ ಶ್ರೇಯಾಂಕದ ಹಮಿಶ್ ಸ್ಟುವರ್ಟ್ (ವಿಶ್ವ ಕ್ರಮಾಂಕದಲ್ಲಿ 292ನೇ ಸ್ಥಾನ) 6–4, 6–4 ರಿಂದ ಮುಕುಂದ್ ಅವರನ್ನು ಸೋಲಿಸಿದರು.

ಅಗ್ರ ಶ್ರೇಯಾಂಕದ ಕೀಗನ್ ಸ್ಮಿತ್ (ಅಮೆರಿಕ) 4–6, 6–3, 6–4 ರಿಂದ ಝೆಕ್ ರಿಪಬ್ಲಿಕ್ನ ಡೊಮಿನಿಕ್ ಪಾಲನ್ ಅವರನ್ನು, ನಾಲ್ಕನೇ ಶ್ರೇಯಾಂಕದ ಫಿಲಿಪ್ ಸೆಕುಲಿಕ್ (ಆಸ್ಟ್ರೇಲಿಯಾ) ಅವರು 6–2, 6–3 ರಿಂದ ಕ್ರಿಸ್ಟೋಫರ್ ಪಾಪಾ ಅವರನ್ನು, ಐದನೇ ಶ್ರೇಯಾಂಕದ ಒ.ಮಿಲಿಕ್ (ಸರ್ಬಿಯಾ) 3–6, 6–4, 6–3 ರಿಂದ ಜೋಶುವಾ ಚಾರ್ಲ್ಟನ್ (ಆಸ್ಟ್ರೇಲಿಯಾ) ಅವರನ್ನು, ಇಲ್ಯಾ ಇವಾಶ್ಕ (ಬೆಲರೂಸ್) 6–1, 6–2 ರಿಂದ ಕೊಕೊರೊ ಇಸೊಮುರಾ (ಜಪಾನ್) ಅವರನ್ನು, ಏಳನೇ ಶ್ರೇಯಾಂಕದ ಮಿತ್ ವೇಲ್ಸ್ (ಇಸ್ರೇನ್) ಅವರನ್ನು ಸೋಲಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-51-1425166210

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.