ಬೆಂಗಳೂರು: ಕರ್ನಾಟಕದ ಉದಯೋನ್ಮುಖ ಆಟಗಾರ ಸಿದ್ಧಾಂತ್ ಎಂ. ಅವರು ಗುಜರಾತ್ನ ಗಾಂಧಿಗ್ರಾಮದಲ್ಲಿ ನಡೆದ 87ನೇ ಸಬ್ ಜೂನಿಯರ್ ಮತ್ತು ಕೆಡೆಟ್ ರಾಷ್ಟ್ರೀಯ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ಸ್ನಲ್ಲಿ ಕಂಚು ಡಬಲ್ ಸಾಧಿಸಿದರು.

ಸಿದ್ಧಾಂತ್ ಅವರು 13 ವರ್ಷದೊಳಗಿನ ಬಾಲಕರ ಸಿಂಗಲ್ಸ್ ಸೆಮಿಫೈನಲ್ನಲ್ಲಿ 2–3ರಿಂದ (7–11, 15–13, 8–11, 13–11, 11–6) ಬಂಗಾಳದ ಆರೀವ್ ದತ್ತ ವಿರುದ್ಧ ಪರಾಭವಗೊಂಡರು. ಎಂಟರ ಘಟ್ಟದಲ್ಲಿ 3–2ರಿಂದ ಬಂಗಾಳದ ರಾಜದೀಪ್ ಬಿಸ್ವಾಸ್ ವಿರುದ್ಧ ಜಯ ಸಾಧಿಸಿದ್ದರು.

13 ವರ್ಷದೊಳಗಿನ ಬಾಲಕರ ಡಬಲ್ಸ್ನಲ್ಲಿ ಸಹೋದರ ಎಂ.ಸಾತ್ವಿಕ್ ಜೊತೆಗೂಡಿ ಎರಡನೇ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಈ ಜೋಡಿ ಸೆಮಿಫೈನಲ್ನಲ್ಲಿ 6–11, 11–7, 7–11, 12–10, 5–11ರಿಂದ ಪಂಜಾಬ್ನ ತ್ರಿಜಾಲ್ ವೊಹ್ರಾ ಹಾಗೂ ಸಾತ್ವಿಕ್ ಶರ್ಮಾ ವಿರುದ್ಧ ಸೋಲು ಕಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.