ಶುಕ್ರವಾರ, ಜುಲೈ 1, 2022
28 °C
ಫ್ರೆಂಚ್ ಓಪನ್ ಟೆನಿಸ್ ಟೂರ್ನಿ: ಅಜರೆಂಕಾ ಜಯಭೇರಿ; ಮರಿಯಾ ಸಕ್ಕರಿಗೆ ಮುಚೋವ ವಿರುದ್ಧ ಸೋಲು

ಫ್ರೆಂಚ್ ಓಪನ್ ಟೆನಿಸ್ ಟೂರ್ನಿ: ನೊವಾಕ್‌, ಕರ್ಬರ್‌ ಮುನ್ನಡೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಪ್ಯಾರಿಸ್: ಹಾಲಿ ಚಾಂಪಿಯನ್, ಸರ್ಬಿಯಾದ ನೊವಾಕ್ ಜೊಕೊವಿಚ್ ಮತ್ತು ಮಾಜಿ ಗ್ರ್ಯಾನ್‌ಸ್ಲಾಂ ಚಾಂಪಿಯನ್ ಜರ್ಮನಿಯ ಏಂಜೆಲಿಕಾ ಕರ್ಬರ್, ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಮೂರನೇ ಸುತ್ತು ಪ್ರವೇಶಿಸಿದರು.

ಬುಧವಾರ ನಡೆದ ಪಂದ್ಯದಲ್ಲಿ ಸ್ಲೊವಾಕಿಯಾದ ಅಲೆಕ್ಸ್ ಮೊಲ್ಕಾನ್ ವಿರುದ್ಧ ಜೊಕೊವಿಚ್ 6-2, 6-3, 7-6 (7/4)ರಲ್ಲಿ ಜಯ ಗಳಿಸಿದರು. ಮತ್ತೊಂದು ರೋಚಕ ಪಂದ್ಯದಲ್ಲಿ ಅಲೆಕ್ಸಾಂಡರ್ ಜ್ವೆರೆವ್ ಸೋಲಿನ ಸುಳಿಯಿಂದ ಚೇತರಿಸಿಕೊಂಡು ಜಯದ ನಗೆ ಸೂಸಿದರು. ಅರ್ಜೆಂಟೀನಾದ ಸೆಬಾಸ್ಟಿಯನ್ ಬಯೆಜ್ ಅವರನ್ನು ಜ್ವೆರೆವ್ 2-6, 4-6, 6-1, 6-2, 7-5ರಲ್ಲಿ ಮಣಿಸಿದರು.

ಏಂಜೆಲಿಕಾ ಕರ್ಬರ್ ಫ್ರಾನ್ಸ್‌ನ ಎಲ್ಸಾ ಜಾಕ್‌ಮೋಟ್ ಅವರನ್ನು 6-1, 7-6 (7/2)ರಲ್ಲಿ ಮಣಿಸಿದರು. ವೈಲ್ಡ್ ಕಾರ್ಡ್ ಮೂಲಕ ಪ್ರವೇಶಿಸಿರುವ 2020ರ ಜೂನಿಯರ್ ಚಾಂಪಿಯನ್ ಎಲ್ಸಾ ಮೊದಲ ಸೆಟ್‌ನಲ್ಲಿ ಸುಲಭವಾಗಿ ಮಣಿದರು. ಆದರೆ ನಂತರ ಪ್ರಬಲ ಪೈಪೋಟಿ ನೀಡಿದರು. ಪಟ್ಟುಬಿಡದ ಕರ್ಬರ್ ಗೆಲುವಿನ ದಡ ಸೇರಿದರು.

ಆಸ್ಟ್ರೇಲಿಯಾ ಒಪನ್‌ನಲ್ಲಿ ಎರಡು ಬಾರಿ ಪ್ರಶಸ್ತಿ ಗೆದ್ದಿರುವ ಅಜರೆಂಕಾ 2014ರ ಫ್ರೆಂಚ್ ಓಪನ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಆ್ಯಂಡ್ರಿಯಾ ಪೆಟ್ರೊವಿಚ್ ವಿರುದ್ಧ 6-1, 7-6 (7/3)ರಲ್ಲಿ ಗೆದ್ದರು.  ಅಮೆರಿಕ ಓಪನ್‌ನ ಚಾಂಪಿಯನ್ ಎಮಾ ರಡುಕಾನು ವಿರುದ್ಧ 3-6, 6-1, 6-1ರಲ್ಲಿ ಬೆಲಾರಸ್‌ನ ಅಲಿಯಕ್ಸಾಂಡ್ರ ಸಸ್ನೊವಿಚ್ ವಿರುದ್ಧ ಜಯ ಗಳಿಸಿದರು. 

ನಾಲ್ಕನೇ ಶ್ರೇಯಾಂಕದ ಮರಿಯಾ ಸಕ್ಕರಿ ಜೆಕ್ ಗಣರಾಜ್ಯದ ಕರೊಲಿನಾ ಮುಚೋವ ವಿರುದ್ಧ 7-6(5) 7-6(4)ರಲ್ಲಿ ಸೋತರು.

ರಾಮ್‌ಕುಮಾರ್‌ಗೆ ‘ಮೊದಲ’ ಜಯ
ಭಾರತದ ರಾಮ್‌ಕುಮಾರ್ ರಾಮನಾಥನ್ ಗ್ರ್ಯಾನ್‌ಸ್ಲಾಂ ಟೂರ್ನಿಯಲ್ಲಿ ಇದೇ ಮೊದಲ ಬಾರಿ ಮುಖ್ಯ ಸುತ್ತಿನಲ್ಲಿ ಜಯ ಗಳಿಸಿದರು. ಪುರುಷರ ಡಬಲ್ಸ್‌ನಲ್ಲಿ ಅಮೆರಿಕದ ಹಂಟರ್‌ ರೀಸಿ ಜೊತೆಗೂಡಿ ಆಡುತ್ತಿರುವ ಅವರು ಮೊದಲ ಸುತ್ತಿನಲ್ಲಿ ಜರ್ಮನಿಯ ಡ್ಯಾನಿಯಲ್ ಆಲ್ಟಿಮಿಯರ್‌ ಮತ್ತು ಆಸ್ಕರ್ ಒಟಿ ವಿರುದ್ಧ 7-6(4), 6-3ರಲ್ಲಿ ಜಯ ಗಳಿಸಿದರು.  

ರೋಹನ್ ಬೋಪಣ್ಣ ಮತ್ತು ನೆದರ್ಲೆಂಡ್ಸ್‌ನ ಮಟ್ವಿ ಮಿಡೆಲ್‌ಕೂಪ್‌ 6-4, 6-1ರಲ್ಲಿ ಸ್ಥಳೀಯ ಆಟಗಾರರಾದ ಸಸ್ಜಾ ಗ್ಯುಮರ್ಡ್‌ ಮತ್ತು ಲೂಕಾ ವ್ಯಾನ್ ಅಶ್ಚೆ ವಿರುದ್ಧ ಗೆದ್ದರು. ಸಸ್ಚಾ ಮತ್ತು ಅಶ್ಚೆ ವೈಲ್ಡ್ ಕಾರ್ಡ್ ಪ್ರವೇಶ ಪಡೆದುಕೊಂಡಿದ್ದರು. 

ಅಲಿಯಕ್ಸಾಂಡ್ರ ಮೇಲೆ ನಿಷೇಧದ ಕಾರ್ಮೋಡ
ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ದಾಳಿಯ ವಿರುದ್ಧ ಮಾತನಾಡಿದ ಮತ್ತು ಉಕ್ರೇನ್ ಟೆನಿಸ್‌ಪಟುಗಳಿಗೆ ಬೆಂಬಲ ಸೂಚಿಸಿರುವ ಅಲಿಯಾಕ್ಸಾಂಡ್ರ ಸಸ್ನೊವಿಚ್‌ ಅವರು ಟೂರ್ನಿಯಿಂದ ನಿಷೇಧಕ್ಕೆ ಒಳಗಾಗುವ ಸಾಧ್ಯತೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು