ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರೆಂಚ್‌ ಓಪನ್‌ಗೆ ಕಿರ್ಗಿಯೋಸ್‌ ಅಲಭ್ಯ

Last Updated 24 ಮೇ 2019, 16:26 IST
ಅಕ್ಷರ ಗಾತ್ರ

ಪ್ಯಾರಿಸ್‌: ಆಸ್ಟ್ರೇಲಿಯಾದ ನಿಕ್‌ ಕಿರ್ಗಿಯೋಸ್‌ ಫ್ರೆಂಚ್‌ ಓಪನ್‌ ಟೆನಿಸ್‌ನಿಂದ ಹಿಂದೆ ಸರಿದಿದ್ದಾರೆ. ’ಟೂರ್ನಿ ನೋವುಂಟು ಮಾಡುವುಂತದ್ದು’ ಎಂದು ಅವರು ಕೆಲ ದಿನಗಳ ಹಿಂದೆ ಹೇಳಿದ್ದರು.

ವರ್ಷದ ಎರಡನೇ ಪ್ರಮುಖ ಟೂರ್ನಿಯಿಂದ ಅವರು ಹಿಂದೆ ಸರಿದಿದ್ದನ್ನು ಸಂಘಟಕರು ದೃಢಪಡಿಸಿದ್ದು, ಅವರ ಸ್ಥಾನದಲ್ಲಿ ಅರ್ಹತಾ ಸುತ್ತಿನಿಂದ ಒಬ್ಬ ಆಟಗಾರರನ್ನು ಸೇರಿಸಿಕೊಳ್ಳಲಾಗುತ್ತದೆ. ಕಿರ್ಗಿಯೋಸ್‌ ಅವರು ಟೂರ್ನಿಯ ಪ್ರಥಮ ಸುತ್ತಿನ ಪಂದ್ಯದಲ್ಲಿ ಬ್ರಿಟನ್‌ನ ಕ್ಯಾಮರೂನ್‌ ನೊರ್ರಿ ಅವರನ್ನು ಎದುರಿಸಬೇಕಿತ್ತು.

ಕಳೆದ ವಾರ ಇಟಾಲಿಯನ್‌ ಓಪನ್‌ ಟೂರ್ನಿಯಿಂದ ಕಿರ್ಗಿಯೋಸ್‌ ಅನರ್ಹಗೊಂಡಿದ್ದರು. ಆ ಬಳಿಕ ನೇರವಾಗಿ ಲಂಡನ್‌ಗೆ ತೆರಳಿ ಆ್ಯಂಡಿ ಮರ್ರೆ ಅವರೊಂದಿಗೆ ಅಭ್ಯಾಸದಲ್ಲಿ ನಿರತರಾಗಿದ್ದರು

‘ಹಸಿರು ಹಾಸಿನೊಂದಿಗೆ ಕಂಗೊಳಿಸುತ್ತಿರುವ ಅಂಗಣದಲ್ಲಿ ನಡೆಯಲಿರುವ ಈ ಬಾರಿಯ ಫ್ರೆಂಚ್‌ ಓಪನ್‌ ಟೂರ್ನಿಯು ಅತ್ಯುತ್ತಮ ಟೂರ್ನಿಯಾಗಿರಲಿದೆ’ ಎಂದು ಕಿರ್ಗಿಯೋಸ್‌ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಕಳೆದ ಬಾರಿಯ ಟೂರ್ನಿಯಲ್ಲೂ ಅವರು ಆಡಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT