ಟೆನಿಸ್‌ ತಾರೆ ಫೆಡರರ್‌ ಭೇಟಿ ಮಾಡಿದ ಕೊಹ್ಲಿ–ಅನುಷ್ಕಾ

7

ಟೆನಿಸ್‌ ತಾರೆ ಫೆಡರರ್‌ ಭೇಟಿ ಮಾಡಿದ ಕೊಹ್ಲಿ–ಅನುಷ್ಕಾ

Published:
Updated:
Prajavani

ಮೆಲ್ಬರ್ನ್‌: ಸತತ ಪಂದ್ಯಗಳನ್ನು ಆಡಿ ದಣಿದಿದ್ದ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ, ಶನಿವಾರ ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯ ಪಂದ್ಯಗಳನ್ನು ವೀಕ್ಷಿಸಲು ಪತ್ನಿ ಅನುಷ್ಕಾ ಜೊತೆ ರಾಡ್‌ ಲೇವರ್‌ ಅರೆನಾಗೆ ಹೋಗಿದ್ದಾರೆ. ಈ ವೇಳೆ ಟೆನಿಸ್‌ ತಾರೆ ರೋಜರ್‌ ಫೆಡರರ್‌ ಅವರನ್ನು ಭೇಟಿಯಾಗಿದ್ದಾರೆ.

ಕೊಹ್ಲಿ ನೇತೃತ್ವದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್‌ ಮತ್ತು ಏಕದಿನ ಸರಣಿ ಗೆದ್ದು ಚಾರಿತ್ರಿಕ ಸಾಧನೆ ಮಾಡಿತ್ತು. ಸರಣಿ ಗೆದ್ದ ಖುಷಿಯಲ್ಲಿರುವ ವಿರಾಟ್‌ ಸದ್ಯ ಪತ್ನಿ ಜೊತೆ ಸುತ್ತಾಟ ನಡೆಸಿದ್ದಾರೆ.

ಅನುಷ್ಕಾ ಮತ್ತು ವಿರಾಟ್‌, ವಿಐಪಿ ಗ್ಯಾಲರಿಯಲ್ಲಿ ಕುಳಿತು ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಮತ್ತು ಡೆನಿಶ್‌ ಶಪೊವಲೋವ್‌ ಹಾಗೂ ಅಮೆರಿಕದ ಸೆರೆನಾ ವಿಲಿಯಮ್ಸ್‌ ಮತ್ತು ಡಯಾನ ಯೆಸ್ಟ್ರೆಮ್‌ಸ್ಕಾ ನಡುವಣ ಮೂರನೇ ಸುತ್ತಿನ ಹೋರಾಟ ಪಂದ್ಯಗಳನ್ನು ವೀಕ್ಷಿಸಿದರು.

ಇದಕ್ಕೂ ಮುನ್ನ ಅವರು ಫೆಡರರ್‌ ಅವರನ್ನು ಭೇಟಿ ಮಾಡಿ ಮಾತನಾಡಿದರು. ಈ ಚಿತ್ರಗಳನ್ನು ವಿರಾಟ್‌ ಮತ್ತು ಅನುಷ್ಕಾ ತಮ್ಮ ಅಧಿಕೃತ ಟ್ವಿಟರ್‌ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.

‘ಆಸ್ಟ್ರೇಲಿಯಾ ಓಪನ್‌ ಪಂದ್ಯಗಳನ್ನು ನೋಡುತ್ತಾ ದಿನ ಕಳೆದಿದ್ದು ಖುಷಿ ನೀಡಿದೆ. ಇದರೊಂದಿಗೆ ಆಸ್ಟ್ರೇಲಿಯಾ ಪ್ರವಾಸವನ್ನು ಮುಗಿಸಿದ್ದೇನೆ. ಈ ಕ್ಷಣ ಸದಾ ನೆನಪಿನಲ್ಲಿ ಉಳಿಯುವಂತಹದ್ದು’ ಎಂದು ಕೊಹ್ಲಿ ಟ್ವೀಟ್‌ ಮಾಡಿದ್ದಾರೆ.

ಅನುಷ್ಕಾ ಅವರು ‘ಒಂದು ಚಿತ್ರ, ಮೂವರು ದಿಗ್ಗಜರು’ ಎಂಬ ಅಡಿಬರಹದೊಂದಿಗೆ ಪತಿ ಕೊಹ್ಲಿ ಮತ್ತು ಫೆಡರರ್‌ ಜೊತೆ ಇರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಜನವರಿ 12, 2015ರಂದು ಮೊದಲ ಸಲ ಫೆಡರರ್‌ ಅವರನ್ನು ಭೇಟಿ ಮಾಡಿದ್ದ ಕೊಹ್ಲಿ ‘ಇದು ಎಂದಿಗೂ ಮರೆಯಲಾರದ ದಿನ’ ಎಂದು ಟ್ವೀಟ್‌ ಮಾಡಿದ್ದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !