ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭುಜದ ನೋವು: ಕ್ವಿಟೋವಾ ಹೊರಕ್ಕೆ

Last Updated 27 ಮೇ 2019, 18:53 IST
ಅಕ್ಷರ ಗಾತ್ರ

ಪ್ಯಾರಿಸ್‌: ಭುಜದ ನೋವಿಗೆ ಒಳಗಾಗಿರುವ ಚೆಕ್‌ ಗಣರಾಜ್ಯದ ಪೆಟ್ರಾ ಕ್ವಿಟೋವ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯಿಂದ ಹೊರಗುಳಿದಿದ್ದಾರೆ.

ಟೂರ್ನಿಯ ಪ್ರಥಮ ಸುತ್ತಿನ ಪಂದ್ಯದಲ್ಲಿ ರೊಮೇನಿಯಾದ ಸೊರಾನಾ ಕ್ರಿಸ್ಟಿಯಾ ಎದುರು ಕ್ವಿಟೋವ ಆಡಬೇಕಿತ್ತು. ಪಂದ್ಯಕ್ಕೆ ಕೆಲವೇ ತಾಸುಗಳಿರುವಾಗ ಅವರು ಟ್ವಿಟರ್‌ನಲ್ಲಿ ನಿರ್ಧಾರ ಪ್ರಕಟಿಸಿದ್ದಾರೆ.

‘ಟೂರ್ನಿಯಿಂದ ಹೊರಗುಳಿಯುತ್ತಿರುವುದು ನಿರಾಸೆ ತಂದಿದೆ. ಕೆಲವು ವಾರಗಳಿಂದ ನನ್ನ ಎಡ ತೋಳಿನಲ್ಲಿ ನೋವು ಕಾಣಿಸಿಕೊಂಡಿತ್ತು. ಮೂಳೆಗೆ ಗಾಯವಾಗಿರುವುದು ಎಂಆರ್‌ಐ ಸ್ಕ್ಯಾನ್‌ನಿಂದ ದೃಢಪಟ್ಟಿದೆ’ ಎಂದು ಕ್ವಿಟೋವ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT