ಮಂಗಳವಾರ, ಅಕ್ಟೋಬರ್ 22, 2019
21 °C

ಲೇವರ್‌ ಕಪ್‌ ಟೆನಿಸ್‌: ಯುರೋಪ್‌ಗೆ ಹ್ಯಾಟ್ರಿಕ್‌ ಪ್ರಶಸ್ತಿ

Published:
Updated:
Prajavani

ಜಿನೆವಾ: ನಿರ್ಣಾಯಕ ಸಿಂಗಲ್ಸ್‌ನಲ್ಲಿ ಛಲದಿಂದ ಹೋರಾಡಿದ ಅಲೆಕ್ಸಾಂಡರ್‌ ಜ್ವೆರೆವ್‌, ಯುರೋಪ್‌ ತಂಡವು ಸಂಭ್ರಮದ ಹೊಳೆಯಲ್ಲಿ ಮಿಂದೇಳುವಂತೆ ಮಾಡಿದರು.

ಜ್ವೆರೆವ್‌ ಅವರ ದಿಟ್ಟ ಆಟದಿಂದಾಗಿ ಯುರೋಪ್‌ ತಂಡ ಲೇವರ್‌ ಕಪ್‌ ಟೆನಿಸ್‌ ಟೂರ್ನಿಯಲ್ಲಿ 13–11 ಪಾಯಿಂಟ್ಸ್‌ನಿಂದ ವಿಶ್ವ ತಂಡವನ್ನು ಮಣಿಸಿತು. ಇದರೊಂದಿಗೆ ‘ಹ್ಯಾಟ್ರಿಕ್‌’ ಪ್ರಶಸ್ತಿ ಗೆದ್ದ ಸಾಧನೆಯನ್ನು ಮಾಡಿತು.

2017 ಮತ್ತು 2018ರಲ್ಲೂ ಯುರೋಪ್‌ ಚಾಂಪಿಯನ್‌ ಆಗಿತ್ತು.

ಎರಡನೇ ದಿನದ ಅಂತ್ಯಕ್ಕೆ 5–7ರಿಂದ ಹಿಂದಿದ್ದ ವಿಶ್ವ ತಂಡ ಅಂತಿಮ ದಿನವಾದ ಭಾನುವಾರ ಗುಣಮಟ್ಟದ ಸಾಮರ್ಥ್ಯ ತೋರಿತು.

ಡಬಲ್ಸ್‌ನಲ್ಲಿ ಕಣಕ್ಕಿಳಿದಿದ್ದ ಜಾನ್‌ ಇಸ್ನರ್‌ ಮತ್ತು ಜಾಕ್‌ ಸಾಕ್‌ 5–7, 6–4, 10–8ರಿಂದ ಯುರೋಪ್‌ ತಂಡದ ರೋಜರ್‌ ಫೆಡರರ್‌ ಮತ್ತು ಸ್ಟೆಫಾನೊಸ್‌ ಸಿಸಿಪಸ್‌ ಅವರನ್ನು ಸೋಲಿಸಿ ಮೂರು ಪಾಯಿಂಟ್ಸ್‌ ಕಲೆಹಾಕಿದರು.

ನಂತರ ನಡೆದ ಸಿಂಗಲ್ಸ್‌ನಲ್ಲಿ ಟೇಲರ್‌ ಫ್ರಿಟ್ಜ್‌ 7–5, 6–7, 10–5ರಲ್ಲಿ ಡಾಮಿನಿಕ್‌ ಥೀಮ್‌ಗೆ ಸೋಲುಣಿಸಿದ್ದರಿಂದ ವಿಶ್ವ ತಂಡ 11–7 ಮುನ್ನಡೆ ಪಡೆಯಿತು.

ಎರಡನೇ ಸಿಂಗಲ್ಸ್‌ನಲ್ಲಿ ರೋಜರ್‌ ಫೆಡರರ್‌ 6–4, 7–6ರಲ್ಲಿ ಜಾನ್‌ ಇಸ್ನರ್‌ ಅವರನ್ನು ಮಣಿಸಿ ಯುರೋಪ್‌ ತಂಡದ ಹಿನ್ನಡೆಯನ್ನು 10–11ಕ್ಕೆ ತಗ್ಗಿಸಿದರು.

ನಿರ್ಣಾಯಕ ಎನಿಸಿದ್ದ ಮೂರನೇ ಸಿಂಗಲ್ಸ್‌ನಲ್ಲಿ ಜ್ವೆರೆವ್‌ 6–4, 3–6, 10–4ರಲ್ಲಿ ಮಿಲೊಸ್‌ ರಾನಿಕ್‌ ವಿರುದ್ಧ ಗೆದ್ದು ಸಂಭ್ರಮಿಸಿದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)