ಮಾರ್ಟಿನ್‌ಗೆ ಜಯ; ಮುಗುರುಜಾಗೆ ಗಾಯ

7

ಮಾರ್ಟಿನ್‌ಗೆ ಜಯ; ಮುಗುರುಜಾಗೆ ಗಾಯ

Published:
Updated:
Deccan Herald

ಲಾಸ್ ಕಾಬೋಸ್, ಮೆಕ್ಸಿಕೊ: ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಇಲ್ಲಿ ನಡೆಯುತ್ತಿರುವ ಮಿಫೆಲ್ ಓಪನ್ ಟೆನಿಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದರು. ಮೊದಲ ಸುತ್ತಿನ ಪಂದ್ಯದಲ್ಲಿ ಅವರು ಅಮೆರಿಕದ ಮಾರ್ಕೊಸ್ ಗಿರನ್ ಎದುರು 7–5, 6–3ರಿಂದ ಗೆದ್ದರು.

ವಿಂಬಲ್ಡನ್ ಓಪನ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರಫೆಲ್ ನಡಾಲ್‌ ವಿರುದ್ಧ ಸೋತ ನಂತರ ಅರ್ಜೆಂಟೀನಾದ ಈ ಆಟಗಾರ ಇದೇ ಮೊದಲ ಬಾರಿ ಸ್ಪರ್ಧಾತ್ಮಕ ಟೆನಿಸ್‌ನಲ್ಲಿ ಆಡುತ್ತಿದ್ದಾರೆ.

ಬೆಲಾರಸ್‌ನ ಜೆರಾಸಿಮ್ನೊವ್‌, ಹಾಲಿ ಚಾಂಪಿಯನ್‌ ಸ್ಯಾಮ್‌ ಕ್ವೆರಿ ವಿರುದ್ಧ 7–5, 5–7, 7–6 (6)ರಿಂದ ಗೆದ್ದರು. ಫ್ರಾನ್ಸ್‌ನ ಅಡ್ರಿಯಾನ್ ಮನಾರಿನೊ, ಸ್ವೀಡನ್‌ನ ಎಲಿಯಾಸ್ ಎಮರ್ ಅವರನ್ನು 6–0, 6–2ರಿಂದ ಮಣಿಸಿದರು. ಸ್ಪೇನ್‌ನ ಫೆಲಿಸಿಯಾನೊ ಲೋಪೆಜ್‌ ವಿರುದ್ಧ ಬ್ರಿಟನ್‌ನ ಕ್ಯಾಮರನ್‌ ನೋರಿ 6–3, 6–3ರಿಂದ ಗೆದ್ದರು.

ಮುಗುರುಜಾಗೆ ನಿರಾಸೆ

ಲಾಸ್ ಏಂಜಲೀಸ್‌ನಲ್ಲಿ ನಡೆಯುತ್ತಿರುವ ಡಬ್ಲ್ಯುಟಿಎ ಟೂರ್ನಿಯಲ್ಲಿ ಆಡಬೇಕಾಗಿದ್ದ ಗಾರ್ಬೈನ್ ಮುಗುರುಜಾ ಅವರು ಬಲಗೈ ನೋವಿನಿಂದಾಗಿ ಹಿಂಜರಿದರು.

‘ಕೈಯಲ್ಲಿ ತೀವ್ರ ನೋವು ಕಾಣಿಸಿಕೊಂಡಿದೆ. ಹೀಗಾಗಿ ಆಡಲು ಸಾಧ್ಯವಿಲ್ಲ. ಮುಂದಿನ ಟೂರ್ನಿಯಲ್ಲಿ ಆಡಲು ಸಾಧ್ಯವಿದೆ ಎಂಬ ಭರವಸೆ ಇದೆ’ ಎಂದು ಮುಗುರುಜಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ ಮೊದಲ ಸುತ್ತಿನಲ್ಲಿ ಕ್ಯಾಥರಿನಾ ಬೊಂಡಾರೆಂಕೊ ಅವರನ್ನು ಸೋಲಿಸಿದರು.‌

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !