ಬುಧವಾರ, ಮೇ 12, 2021
25 °C
ಎಂಎಟಿ–ಎಐಟಿಎ 14 ವರ್ಷದೊಳಗಿನವರ ಟೆನಿಸ್ ಟೂರ್ನಿ

ಹರ್ಷಿಣಿಗೆ ‘ಡಬಲ್‘ ಸಂಭ್ರಮ: ಗಂಧರ್ವಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಮೋಘ ಸಾಮರ್ಥ್ಯ ತೋರಿದ ಅಗ್ರಶ್ರೇಯಾಂಕಿತ ಆಟಗಾರ್ತಿ ಕರ್ನಾಟಕದ ಹರ್ಷಿಣಿ ಎನ್‌. ಇಲ್ಲಿ ನಡೆದ ಎಂಎಟಿ–ಎಐಟಿಎ 14 ವರ್ಷದೊಳಗಿನವರ ಟೆನಿಸ್ ಟೂರ್ನಿಯ ಬಾಲಕಿಯರ ಸಿಂಗಲ್ಸ್ ಹಾಗೂ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದರು. ಬಾಲಕರ ಸಿಂಗಲ್ಸ್ ವಿಭಾಗದ ಪ್ರಶಸ್ತಿಯು ರಾಜ್ಯದ ಗಂಧರ್ವ ಜಿ.ಕೆ. ಅವರು ಪಾಲಾಯಿತು.

ಶುಕ್ರವಾರ ನಡೆದ ಬಾಲಕಿಯರ ಸಿಂಗಲ್ಸ್ ಫೈನಲ್‌ ಹಣಾಹಣಿಯಲ್ಲಿ ಹರ್ಷಿಣಿ 6–1, 6–2ರಿಂದ ಅನ್ವಿ ಪುನೆಗಂಟಿ ಅವರನ್ನು ಸೋಲಿಸಿದರು. ಡಬಲ್ಸ್ ವಿಭಾಗದಲ್ಲಿ ಸಂಗೀತಾ ರಾಮನ್ ಜೊತೆಗೂಡಿದ್ದ ಹರ್ಷಿಣಿ 6-4, 6-0ರಿಂದ ಮಹಾರಾಷ್ಟ್ರ–ತಮಿಳುನಾಡಿನ ಜೋಡಿ ದೇವಾಂಶ್ರೀ ಪ್ರಭುದೇಸಾಯಿ–ಲಕ್ಷಿತಾ ಗೋಪಿನಾಥ್ ಅವರನ್ನು ಮಣಿಸಿ ಪ್ರಶಸ್ತಿಗೆ ಮುತ್ತಿಟ್ಟರು.

ಬಾಲಕರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಗಂಧರ್ವ 6-3, 6-1ರಿಂದ ತಮಿಳುನಾಡಿನ ನವೀನ್ ಸುಂದರಂ ಅವರಿಗೆ ಸೋಲುಣಿಸಿದರು. ಡಬಲ್ಸ್‌ ವಿಭಾಗದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಕರ್ನಾಟಕದ ಅಥರ್ವ ಮಿಶ್ರಾ ಹಾಗೂ ತಮಿಳುನಾಡಿನ ಮನವ್ ಸಿಯಾಲ್‌ ಜೊತೆಗೂಡಿ 4-6, 7-6, 12-10ರಿಂದ ತಮಿಳುನಾಡಿನ ಅರ್ಜಿತ್ ಸರ್ವನನ್‌ ಹಾಗೂ ನವೀನ್ ಅವರನ್ನು ಸೋಲಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು