ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಯಾಮಿ ಓಪನ್‌: ಫೈನಲ್‌ಗೆ ಸಿನ್ನರ್

Last Updated 1 ಏಪ್ರಿಲ್ 2023, 19:22 IST
ಅಕ್ಷರ ಗಾತ್ರ

ಮಿಯಾಮಿ ಗಾರ್ಡನ್ಸ್ (ಎಎಫ್‌ಪಿ): ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಸ್ಪೇನ್‌ನ ಕಾರ್ಲೊಸ್ ಅಲ್ಕರಾಜ್ ಸವಾಲು ಮೀರಿದ ಇಟಲಿಯ ಜಾನಿಕ್ ಸಿನ್ನರ್ ಅವರು ಮಿಯಾಮಿ ಓಪನ್ ಟೆನಿಸ್‌ ಟೂರ್ನಿಯ ಫೈನಲ್‌ಗೆ ಲಗ್ಗೆಯಿಟ್ಟರು.

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಜಿದ್ದಾಜಿದ್ದಿ ಸೆಮಿಫೈನಲ್ ಪಂದ್ಯದಲ್ಲಿ ಸಿನ್ನರ್ 6-7 (4/7), 6-4, 6-2ರಿಂದ ಕಾರ್ಲೊಸ್ ಅವರಿಗೆ ಸೋಲುಣಿಸಿದರು.ಕಾರ್ಲೊಸ್ ಅವರು ಈ ಸೋಲಿನೊಂದಿಗೆ ಅಗ್ರ ರ‍್ಯಾಂಕ್‌ ಕಳೆದುಕೊಳ್ಳಲಿದ್ದಾರೆ.

ಭಾನುವಾರ ನಡೆಯುವ ಫೈನಲ್ ಪಂದ್ಯದಲ್ಲಿ ಸಿನ್ನರ್ ಅವರು ರಷ್ಯಾದ ಡೇನಿಯಲ್ ಮೆಡ್ವೆಡೆವ್ ಅವರನ್ನು ಎದುರಿಸಲಿದ್ದಾರೆ.ನಾಲ್ಕರ ಘಟ್ಟದ ಮತ್ತೊಂದು ಪಂದ್ಯದಲ್ಲಿ ಮೆಡ್ವೆಡೆವ್ ಅವರು 7-6 (7/5), 3-6, 6-3ರಿಂದ ತಮ್ಮದೇ ದೇಶದ ಕರೆನ್ ಕಚನೊವ್ ಸವಾಲು ಮೀರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT