ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಲೀವ್‌ಲ್ಯಾಂಡ್‌ ಟೆನಿಸ್‌ ಟೂರ್ನಿ: ಪ್ರಶಸ್ತಿ ಸುತ್ತಿಗೆ ಸಾನಿಯಾ– ಕ್ರಿಸ್ಟಿನಾ

Last Updated 28 ಆಗಸ್ಟ್ 2021, 12:32 IST
ಅಕ್ಷರ ಗಾತ್ರ

ಕ್ಲೀವ್‌ಲ್ಯಾಂಡ್‌, ಅಮೆರಿಕ: ಅದ್ಭುತ ಲಯ ಮುಂದುವರಿಸಿದ ಭಾರತದ ಸಾನಿಯಾ ಮಿರ್ಜಾ ಹಾಗೂ ಅಮೆರಿಕದ ಕ್ರಿಸ್ಟಿನಾ ಮೆಕಾಲೆ ಜೋಡಿಯು ‘ಟೆನಿಸ್‌ ಇನ್‌ ದ ಲ್ಯಾಂಡ್‌‘ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ಶುಕ್ರವಾರ ರಾತ್ರಿ ನಡೆದಮಹಿಳೆಯರ ಡಬಲ್ಸ್‌ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಈ ಜೋಡಿಯು 7-6 (5) 6-2ರಿಂದ ನಾರ್ವೆ–ಅಮೆರಿಕದ ಉಲ್‌ರಿಕ್‌ ಐಕರಿ ಮತ್ತು ಕ್ಯಾಥರೀನ್‌ ಹ್ಯಾರಿಸನ್ ಅವರನ್ನು ಮಣಿಸಿದರು. ಒಂದು ತಾಸು 23 ನಿಮಿಷಗಳಲ್ಲಿ ಈ ಪಂದ್ಯ ಮುಗಿಯಿತು.

ಟೂರ್ನಿಯಲ್ಲಿ ಶ್ರೇಯಾಂಕರಹಿತ ಆಟಗಾರ್ತಿಯರಾಗಿರುವ ಸಾನಿಯಾ–ಕ್ರಿಸ್ಟಿನಾ ಪ್ರಶಸ್ತಿ ಸುತ್ತಿನಲ್ಲಿ ಜಪಾನ್‌ನ ಶುಕೊ ಅಯೋಮಾ ಮತ್ತು ಈನಾ ಶಿಬಹಾರ ಅವರಿಗೆ ಮುಖಾಮುಖಿಯಾಗಲಿದ್ದಾರೆ. ಜಪಾನ್ ಆಟಗಾರ್ತಿಯರು ಇಲ್ಲಿ ಅಗ್ರಶ್ರೇಯಾಂಕ ಗಳಿಸಿದ್ದಾರೆ.

ಈ ಹಿಂದಿನ ಎರಡು ಪಂದ್ಯಗಳಲ್ಲಿ ಸಾನಿಯಾ ಮತ್ತು ಕ್ರಿಸ್ಟಿನಾ ಒಂದೂ ಸೆಟ್‌ ಕಳೆದುಕೊಳ್ಳದೆ ಜಯ ಸಾಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT