ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಮಿಗೆ ಲಾಜೊವಿಚ್‌, ಮೆಡ್ವೆಡೇವ್‌

ಮಾಂಟೆ ಕಾರ್ಲೊ ಮಾಸ್ಟರ್ಸ್‌ ಟೆನಿಸ್‌ ಟೂರ್ನಿ
Last Updated 19 ಏಪ್ರಿಲ್ 2019, 19:09 IST
ಅಕ್ಷರ ಗಾತ್ರ

ಮಾಂಟೆಕಾರ್ಲೊ, ಮೊನಾಕೊ:ಸರ್ಬಿಯಾದ ದುಸಾನ್‌ ಲಾಜೊವಿಚ್ ಮತ್ತು ರಷ್ಯಾದ ಡೇನಿಯಲ್ ಮೆಡ್ವೆಡೇವ್‌ ಅವರು ಮಾಂಟೆಕಾರ್ಲೊ ಮಾಸ್ಟರ್ಸ್‌ ಟೆನಿಸ್‌ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಲಾಜೊವಿಚ್‌6–4, 7–5 ರಲ್ಲಿ ಇಟಲಿಯ ಲೊರೆಂಜೊ ಸೊನೆಗೊ ವಿರುದ್ಧ ಗೆದ್ದರು.

ಮೊದಲ ಸೆಟ್‌ ಅನ್ನು ಸುಲಭವಾಗಿ ಗೆದ್ದುಕೊಂಡ ಲಾಜೊವಿಚ್‌ಗೆ ಎರಡನೇ ಸೆಟ್‌ನಲ್ಲಿ ಲೊರೆಂಜೊ ಪ್ರಬಲ ಪೈಪೋಟಿ ನೀಡಿದರು. ಅಂತಿಮವಾಗಿ ಲಾಜೊವಿಚ್‌ ಜಯ ಸಾಧಿಸಿದರು.

ಜೆಕೊವಿಚ್‌ಗೆ ನಿರಾಸೆ: ಮತ್ತೊಂದು ಪಂದ್ಯದಲ್ಲಿ ರಷ್ಯಾದ ಡೇನಿಯಲ್‌ ಮೆಡ್ವೆಡೇವ್‌ ಅವರು ವಿಶ್ವದ ಅಗ್ರ ಶ್ರೇಯಾಂಕಿತ ನೊವಾಕ್‌ ಜೆಕೊವಿಚ್‌ ಅವರನ್ನು 6–3, 4–6, 6–2ರಿಂದ ಸೋಲಿಸಿದರು.

ಜೆಕೊವಿಚ್‌ ‌ಅವರ ಸರ್ವ್ ಮುರಿ ಯುವ ಮೂಲಕ ಮೆಡ್ವೆಡೇವ್‌ ಉತ್ತಮ ಆರಂಭ ಮಾಡಿದರು. ಆಕರ್ಷಕ ಸರ್ವ್‌, ಫೋರ್‌ ಹ್ಯಾಂಡ್‌ ಮತ್ತು ಬ್ಯಾಕ್‌ಹ್ಯಾಂಡ್‌ ಮೂಲಕ ಎದುರಾಳಿಯನ್ನು ಕಂಗೆಡಿಸಿ ಮೊದಲ ಸೆಟ್‌ ಅನ್ನು ವಶಪಡಿಸಿಕೊಂಡರು.ಎರಡನೇ ಸೆಟ್‌ನ ಆರಂಭದಲ್ಲಿ ಜೊಕೊವಿಚ್‌ 2–1ರಿಂದ ಮುಂದಿದ್ದರು.

ಸೆಟ್‌ ಗೆದ್ದ ಅವರು 1–1ರಲ್ಲಿ ಸಮ ಬಲ ಸಾಧಿಸಿದರು. ಆದರೆ,ಮೆಡ್ವೆಡೇವ್‌ ಮೂರನೇ ಸೆಟ್‌ ವಶಪಡಿಸಿಕೊಳ್ಳುವ ಮೂಲಕ ಸೆಮಿಫೈನಲ್‌ ಪ್ರವೇಶಿಸಿದರು.

ಶನಿವಾರ ನಡೆಯುವ ಸೆಮಿಫೈನಲ್‌ನಲ್ಲಿಲಾಜೊವಿಚ್ ಮತ್ತು ಡೇನಿಯಲ್‌ ಮೆಡ್ವೆಡೇವ್‌ ಸೆಣಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT