ಸೋಮವಾರ, ಆಗಸ್ಟ್ 26, 2019
27 °C

ಮಾಂಟ್ರಿಯಲ್ ಮಾಸ್ಟರ್ಸ್: ನಡಾಲ್, ಥೀಮ್ ಮುನ್ನಡೆ

Published:
Updated:
Prajavani

ಮಾಂಟ್ರಿಯಲ್: ರಫೆಲ್ ನಡಾಲ್ ಮತ್ತು ಡಾಮ್ನಿಕ್ ಥೀಮ್ ಅವರು ಎಟಿಪಿ ಮಾಂಟ್ರಿಯಲ್ ಮಾಸ್ಟರ್ಸ್‌ ಟೆನಿಸ್ ಟೂರ್ನಿಯ ಮೂರನೇ ಸುತ್ತಿಗೆ ಪ್ರವೇಶಿಸಿದ್ಧಾರೆ.

ಬುಧವಾರ ಮಳೆಯಿಂದಾಗಿ ಎರಡು ತಾಸು ತಡವಾದ ಪಂದ್ಯದಲ್ಲಿ ಅಗ್ರಶ್ರೇಯಾಂಕದ ಆಟಗಾರ ನಡಾಲ್  7–6 (8/6), 6–4ರಿಂದ ಬ್ರಿಟನ್‌ನ ಡೇನಿಯಲ್ ಇವಾನ್ಸ್‌ ವಿರುದ್ಧ ಗೆದ್ದರು.

‘ವಿಂಬಲ್ಡನ್ ಟೂರ್ನಿ ಆದ ನಂತರ ಮನಸ್ಸಿಗೆ ಸ್ವಲ್ಪಮಟ್ಟಿಗೆ ನಿರಾಳ ಭಾವ ಆವರಿಸುತ್ತದೆ. ಆದ್ದರಿಂದ ತುಸು ವಿಶ್ರಾಂತಿಯ ನಂತರ ಇದು ಮೊದಲ ಪಂದ್ಯ. ಲಯ ಕಂಡುಕೊಳ್ಳುವ ಪ್ರಯತ್ನ ಮಾಡಿದೆ. ಹುಲ್ಲಿನಂಕಣದ ನಂತರ ಇಲ್ಲಿಯ ಹಾರ್ಡ್‌ಕೋರ್ಟ್‌ನಲ್ಲಿ ಆಡಿದೆ. ಫಿಟ್‌ನೆಸ್ ಪರೀಕ್ಷೆ ಮಾಡಿಕೊಂಡೆ. ಸಂತೃಪ್ತಿ ಇದೆ’ ಎಂದು ನಡಾಲ್ ಹೇಳಿದರು.

ಎರಡನೇ ಸುತ್ತಿನ ಪಂದ್ಯದಲ್ಲಿ ಆಸ್ಟ್ರೀಯಾದ ಡಾಮ್ನಿಕ್ ಥೀಮ್ 6–4, 3–6, 6–3ರಿಂದ ಆತಿಥೇಯ ದೇಶದ ಡೆನಿಸ್ ಶಪೊಲೊವ್ ವಿರುದ್ಧ ಜಯಿಸಿದರು. ‌

ದ್ವಿತೀಯ ಶ್ರೇಯಾಂಕದ ಆಟಗಾರ ಥೀಮ್ ಅವರು ಡೆನಿಸ್  ವಿರುದ್ಧ ಮೊದಲ ಸೆಟ್‌ನಲ್ಲಿ ಸುಲಭವಾಗಿ ಗೆದ್ದರು. ಆದರೆ ಎರಡನೇ ಸೆಟ್‌ನಲ್ಲಿ ಡೆನಿಸ್ ತಿರುಗೇಟು ನೀಡಿದರು.

ಇನ್ನೊಂದು ಪಂದ್ಯದಲ್ಲಿ ಮಿಲೋಸ್ ರಾನಿಚ್  ಅವರು ಗಾಯಗೊಂಡು ಹಿಂದೆ ಸರಿದರು. ಇದರಿಂದಾಗಿ 18 ವರ್ಷದ ಮಿಲೋಸ್ ಕೆನಡಾದವರೇ ಆದ ಆಗರ್ ಅಲಿಸ್ಸೆಮ್ ಎದುರು 6–3, 3–6ರಿಂದ ಸೋತರು. ಎರಡನೇ ಸೆಟ್‌ನ ಅರ್ಧದಲ್ಲಿಯೇ ಹಿಂದೆ ಸರಿದರು.

ಗ್ರೀಕ್ ದೇಶದ ಸ್ಟೆಫಾನೊಸ್ ಸಿಸಿಪಸ್ 4–6, 6–3, 3–6ರಿಂದ ಪೊಲೆಂಡ್‌ನ ಹಬರ್ಟ್ ಹರ್ಕಾಜ್ ವಿರುದ್ಧ ಸೋತರು.

 

 

 

 

 

 

 

 

 

Post Comments (+)