ಭಾನುವಾರ, ಅಕ್ಟೋಬರ್ 2, 2022
18 °C

ಟೆನಿಸ್‌: ಫೈನಲ್‌ಗೆ ಹರ್ಕಜ್‌–ಬುಸ್ಟಾ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಮಾಂಟ್ರಿಯಲ್, ಕೆನಡಾ: ನಾಲ್ಕನೇ ಶ್ರೇಯಾಂಕದ ಕಾಸ್ಪರ್ ರೂಡ್ ಸವಾಲು ಮೀರಿದ ಪೋಲೆಂ ಡ್‌ನ ಹುಬರ್ತ್‌ ಹರ್ಕಜ್‌ ಅವರು ಮಾಂಟ್ರಿಯಲ್ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಫೈನಲ್‌ಗೆ ಲಗ್ಗೆಯಿಟ್ಟರು.

ಶನಿವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ನಾಲ್ಕರಘಟ್ಟದ ಪಂದ್ಯದಲ್ಲಿ ಹರ್ಕಜ್ 5-7, 6-3, 6-2ರಿಂದ ನಾರ್ವೆಯ ರೂಡ್‌ ಅವ ರನ್ನು ಮಣಿಸಿದರು. ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಸ್ಪೇನ್‌ನ ಕರೆನೊ ಬುಸ್ಟಾ 7-5, 6-7 (7/9), 6-2ರಿಂದ ಬ್ರಿಟನ್‌ನ ಡೇನಿಯಲ್ ಇವಾನ್ಸ್ ಎದುರು ಗೆದ್ದರು.

ಪ್ರಶಸ್ತಿ ಸುತ್ತಿಗೆ ಹಲೆಪ್‌ (ಎಪಿ): ಟೊರಂ ಟೊದಲ್ಲಿ ನಡೆಯುತ್ತಿರುವ ನ್ಯಾಷನಲ್ ಬ್ಯಾಂಕ್‌ ಓಪನ್ ಟೂರ್ನಿಯಲ್ಲಿ ರುಮೇನಿಯಾದ ಸಿಮೊನಾ ಹಲೆಪ್‌ ಫೈನಲ್‌ ತಲುಪಿದರು. ಸೆಮಿಯಲ್ಲಿ ಅವರು 2-6, 6-3, 6-4ರಿಂದ ಅಮೆರಿ ಕದ ಜೆಸ್ಸಿಕಾ ಪೆಗುಲಾ ಎದುರು ಗೆದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು