ಟೊರೊಂಟೊ ಮಾಸ್ಟರ್ಸ್: ನಡಾಲ್ ಶುಭಾರಂಭ

7

ಟೊರೊಂಟೊ ಮಾಸ್ಟರ್ಸ್: ನಡಾಲ್ ಶುಭಾರಂಭ

Published:
Updated:
Deccan Herald

ಟೊರೊಂಟೊ, ಕೆನಡಾ: ಕೆನಡಾದಲ್ಲಿ ನಾಲ್ಕನೇ ಟ್ರೋಫಿ ಗೆಲ್ಲುವತ್ತ ಹೆಜ್ಜೆ ಇರಿಸಿರುವ ಸ್ಪೇನ್‌ನ ರಫೆಲ್‌ ನಡಾಲ್‌ ಟೊರೊಂಟೊ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಅವರು ಫ್ರಾನ್ಸ್‌ನ ಬೆನಾಯ್ಟ್ ಪೇರೆ ವಿರುದ್ಧ 6–2, 6–3ರಿಂದ ಗೆದ್ದರು.

2005, 2008 ಮತ್ತು 2013ರಲ್ಲಿ ಟೊರೊಂಟೊ ಮಾಸ್ಟರ್ಸ್ ಟೂರ್ನಿಯ ಪ್ರಶಸ್ತಿ ಗೆದ್ದಿರುವ ನಡಾಲ್‌ 74 ನಿಮಿಷಗಳಲ್ಲಿ ಎದುರಾಳಿಯನ್ನು ಏಕಪಕ್ಷೀಯವಾಗಿ ಮಣಿಸಿದರು. ಈ ಮೂಲಕ ಬೆನಾಯ್ಟ್ ವಿರುದ್ಧದ ನಾಲ್ಕೂ ಪಂದ್ಯಗಳನ್ನು ಗೆದ್ದ ಸಾಧನೆ ಮಾಡಿದರು.

‘ಐದು ದಿನಗಳಿಂದ ಇಲ್ಲಿ ಚೆನ್ನಾಗಿ ಅಭ್ಯಾಸ ಮಾಡಿದ್ದೇನೆ. ಆದರೂ ಮೊದಲ ಪಂದ್ಯದಲ್ಲಿ ಪರಿಪೂರ್ಣ ಸಾಮರ್ಥ್ಯವನ್ನು ಧಾರೆ ಎರೆಯಲು ನನಗೆ ಸಾಧ್ಯವಾಗಲಿಲ್ಲ. ಮೊದಲ ಪಂದ್ಯದಲ್ಲಿ ಗೆದ್ದಿರುವುದರಿಂದ ಆತ್ಮವಿಶ್ವಾಸ ಹೆಚ್ಚಿದೆ’ ಎಂದು ನಡಾಲ್ ಹೇಳಿದರು.

ಹಾಲಿ ಚಾಂಪಿಯನ್ ಅಲೆಕ್ಸಾಂಡರ್ ಜ್ವೆರೆವ್‌ 6–4, 6–4ರಿಂದ ಬ್ರಾಡ್ಲಿ ಕ್ಲಾನ್‌ ಎದುರು ಗೆದ್ದು ಎರಡನೇ ಸುತ್ತು ಪ್ರವೇಶಿಸಿದರು. ನೊವಾಕ್ ಜೊಕೊವಿಚ್‌ ಮೊದಲ ಸುತ್ತಿನಲ್ಲಿ 6–3, 6–4ರಿಂದ ಪೀಟರ್ ಪೋಲಂನ್ಸ್ಕಿ ವಿರುದ್ಧ ಗೆದ್ದರು.

ರಾನಿಕ್‌ಗೆ ಫ್ರಾನ್ಸಿಸ್ ಎದುರು ಸೋಲು
ಅಮೋಘ ಆಟದ ಮೂಲಕ ಮಿಲಾಸ್ ರಾನಿಕ್‌ ಎದುರು ಗೆದ್ದ ಅಮೆರಿಕದ ಫ್ರಾನ್ಸಿಸ್‌ ಟಿಯಾಫೊ ಟೆನಿಸ್ ಪ್ರಿಯರ ಮನ ಗೆದ್ದರು. ಅವರು 7–6 (7/4), 4–6, 6–1ರಿಂದ ಗೆದ್ದರು. ಡೆನಿಸ್ ಶಪವಲೊವ್‌ ಇಟಲಿಯ ಫ್ಯಾಬಿಯೊ ಫಾಗ್ನಿನಿ ಅವರನ್ನು 6–3, 7–5ರಿಂದ ಮಣಿಸಿದರು.

ವಿಂಬಲ್ಡನ್‌ನಲ್ಲಿ ಸೆಮಿಫೈನಲ್‌ ವರೆಗೆ ತಲುಪಿದ್ದ ಜಾನ್ ಇಸ್ನೆರ್‌ ಫ್ರಾನ್ಸ್‌ನ ಪೀರೆ ಹ್ಯೂಜ್ಸ್‌ ಹರ್ಬರ್ಟ್‌ ವಿರುದ್ಧ 7–6 (7/3), 6–2ರಿಂದ ಗೆದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !