ಈ ಋತುವಿನಲ್ಲಿ ಆಡಲಾಗುವುದಿಲ್ಲ ಎಂದುಕೊಂಡಿದ್ದೆ: ರಫೆಲ್‌ ನಡಾಲ್‌

ಶುಕ್ರವಾರ, ಜೂನ್ 21, 2019
24 °C
ಗಾಯದಿಂದ ಬಳಲಿದ್ದ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಚಾಂಪಿಯನ್‌ ರಫೆಲ್‌ ನಡಾಲ್‌

ಈ ಋತುವಿನಲ್ಲಿ ಆಡಲಾಗುವುದಿಲ್ಲ ಎಂದುಕೊಂಡಿದ್ದೆ: ರಫೆಲ್‌ ನಡಾಲ್‌

Published:
Updated:
Prajavani

ಪ್ಯಾರಿಸ್‌: ಗಾಯದ ಕಾರಣ ಇಂಡಿಯನ್‌ ವೆಲ್ಸ್‌ ಟೂರ್ನಿಯಿಂದ ಹಿಂದೆ ಸರಿದಿದ್ದ ವೇಳೆ ಈ ಋತುವಿನಲ್ಲಿ ಟೆನಿಸ್‌ ಆಡಲಾಗುವುದಿಲ್ಲ ಎಂದು ತಿಳಿದಿದ್ದೆ ಎಂದು ಫ್ರೆಂಚ್‌ ಓಪನ್‌ ಪ್ರಶಸ್ತಿ ವಿಜೇತ ರಫೆಲ್‌ ನಡಾಲ್‌ ಹೇಳಿದ್ದಾರೆ.

ಮೊಣಕಾಲು ನೋವಿನ ಹಿನ್ನೆಲೆಯಲ್ಲಿ ಈ ವರ್ಷದ ಮಾರ್ಚ್‌ನಲ್ಲಿ ನಡೆದಿದ್ದ ಇಂಡಿಯನ್ಸ್ ವೆಲ್ಸ್ ಟೂರ್ನಿಯ ಸೆಮಿಫೈನಲ್ಸ್‌ನಿಂದ  ನಡಾಲ್‌ ಹಿಂದೆ ಸರಿದ್ದಿದ್ದರು. ಆದರೂ ನೋವಿನೊಂದಿಗೆ ಫ್ರೆಂಚ್‌ ಓಪನ್‌ ಟೂರ್ನಿ ಆಡಿದ್ದ ಸ್ಪೇನ್‌ನ ಪರಿಣತ ಆಟಗಾರ 12ನೇ ಬಾರಿ ಕಿರೀಟ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

’ಇಂಡಿಯನ್ಸ್‌ ವೆಲ್ಸ್‌ ಟೂರ್ನಿಯ ಬಳಿಕ ಮಾನಸಿಕವಾಗಿ ಕುಗ್ಗಿಹೋಗಿದ್ದೆ. ನನ್ನ ದೇಹ ಚೇತರಿಸಿಕೊಳ್ಳದಿದ್ದರೆ ಈ ವರ್ಷ ಆಡಲೇಬಾರದು ಎಂದು ನಿರ್ಧರಿಸಿದ್ದೆ.ಇಲ್ಲದಿದ್ದರೆ ನೋವಿನ ಮಧ್ಯಯೇ ಆಡುವುದು ನನ್ನ ಮತ್ತೊಂದು ಆಯ್ಕೆಯಾಗಿತ್ತು’ ಎಂದು  ನಡಾಲ್‌ ಹೇಳಿದರು.

ಜುಲೈ 1ರಂದು ಆರಂಭವಾಗುವ ವಿಂಬಲ್ಡನ್ ಟೂರ್ನಿಯ ತನಕ ಯಾವುದೇ ಪಂದ್ಯವಾಡದಿರಲು ರಫೆಲ್‌ ನಡಾಲ್‌ ನಿರ್ಧರಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !