ಟೊರಾಂಟೊ ಮಾಸ್ಟರ್ಸ್‌ ಟೆನಿಸ್‌ ಟೂರ್ನಿ: ರಫೆಲ್‌ ನಡಾಲ್‌ಗೆ ಜಯ

7

ಟೊರಾಂಟೊ ಮಾಸ್ಟರ್ಸ್‌ ಟೆನಿಸ್‌ ಟೂರ್ನಿ: ರಫೆಲ್‌ ನಡಾಲ್‌ಗೆ ಜಯ

Published:
Updated:
Deccan Herald

ಟೊರಾಂಟೊ: ಸ್ಪೇನ್‌ ರಫೆಲ್‌ ನಡಾಲ್‌ ಅವರು ಇಲ್ಲಿ ನಡೆಯುತ್ತಿರುವ ಟೊರಾಂಟೊ ಮಾಸ್ಟರ್ಸ್‌ ಟೆನಿಸ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ.

ಶನಿವಾರ ತಡರಾತ್ರಿ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ ಪಂದ್ಯದಲ್ಲಿ ನಡಾಲ್‌, 7–6, 6–4ರಿಂದ ರಷ್ಯಾದ ಕರೆನ್‌ ಕಚನೋವ್‌ ಅವರನ್ನು ಸೋಲಿಸಿದರು. 

ಪಂದ್ಯದುದ್ದಕ್ಕೂ ಮನಮೋಹಕ ಸರ್ವ್‌, ಬ್ಯಾಕ್‌ಹ್ಯಾಂಡ್‌ ಹೊಡೆತಗಳು ಹಾಗೂ ದೀರ್ಘ ರ‍್ಯಾಲಿಗಳಿಂದ ನಡಾಲ್‌ ಅವರು ಗಮನಸೆಳೆದರು.

ನಾಲ್ಕರ ಘಟ್ಟದ ಇನ್ನೊಂದು ಪಂದ್ಯದಲ್ಲಿ ಗ್ರೀಸ್‌ನ ಸ್ಟೆಫಾನೊಸ್‌ ಸಿಟ್ಸಿಪಾಸ್ ಅವರು 6–7, 6–4, 7–6ರಿಂದ ದಕ್ಷಿಣ ಆಫ್ರಿಕಾದ ಕೆವಿನ್‌ ಆ್ಯಂಡರ್ಸನ್‌ ಅವರನ್ನು ಮಣಿಸಿದರು. ಹೀಗಾಗಿ, ಫೈನಲ್‌ ಹಣಾಹಣಿಯಲ್ಲಿ ನಡಾಲ್‌ ಹಾಗೂ ಸ್ಟೆಫಾನೊಸ್‌ ಸೆಣಸಲಿದ್ದಾರೆ. ಇತ್ತೀಚೆಗೆ ನಡೆದಿದ್ದ ವಿಂಬಲ್ಡನ್‌ ಟೆನಿಸ್‌ ಟೂರ್ನಿಯಲ್ಲಿ ಕೆವಿನ್‌ ರನ್ನರ್‌ ಅಪ್‌ ಆಗಿದ್ದರು. 

ಪಂದ್ಯದ ನಂತರ ಮಾತನಾಡಿದ ನಡಾಲ್‌, ‘ಈ ಟೂರ್ನಿಯ ಫೈನಲ್‌ ಪ್ರವೇಶಿಸಿದ್ದು ಸಂತಸ ತಂದಿದೆ. ಇಲ್ಲಿನ ಪ್ರತಿ ಪಂದ್ಯವೂ ಭಿನ್ನ ಅನುಭವಗಳನ್ನು ನೀಡಿವೆ. ಅಂತಿಮ ಘಟ್ಟದ ಪಂದ್ಯದಲ್ಲಿ ಗೆಲ್ಲುವ ಎಲ್ಲ ವಿಶ್ವಾಸವಿದೆ’ ಎಂದು ಹೇಳಿದರು. 

‘ಈ ಟೂರ್ನಿಯಲ್ಲಿ ಡಾಮಿನಿಕ್‌ ಥೀಮ್‌, ನೊವಾಕ್‌ ಜೊಕೊವಿಚ್‌ ಹಾಗೂ ಅಲೆಕ್ಸಾಂಡರ್‌ ಜ್ವೆರೆವ್‌ ಅವರಂತಹ ಘಟಾನುಘಟಿ ಆಟಗಾರರನ್ನು ಕಟ್ಟಿಹಾಕಿದೆ. ಕಠಿಣ ಸವಾಲೊಡ್ಡುವ ಕೆವಿನ್‌ ಆ್ಯಂಡರ್ಸನ್‌ ಅವರ ಎದುರು ಜಯಿಸಿದೆ. ವಿಶ್ವ ಕ್ರಮಾಂಕದಲ್ಲಿ ಅಗ್ರಸ್ಥಾನದಲ್ಲಿರುವ ನಡಾಲ್‌ ಅವರನ್ನು ಫೈನಲ್‌ನಲ್ಲಿ ಸೋಲಿಸುವ ಭರವಸೆ ಇದೆ’ ಎಂದು ಸ್ಟೆಫಾನೊಸ್‌ ಸಿಟ್ಸಿಪಾಸ್ ಹೇಳಿದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !