ಶುಕ್ರವಾರ, ಸೆಪ್ಟೆಂಬರ್ 20, 2019
21 °C

ರ‍್ಯಾಂಕಿಂಗ್‌: ಸುಮಿತ್‌ ಶ್ರೇಷ್ಠ ಸಾಧನೆ

Published:
Updated:
Prajavani

ನವದೆಹಲಿ: ಭಾರತದ ಸುಮಿತ್‌ ನಗಾಲ್‌, ಸೋಮವಾರ ಬಿಡುಗಡೆಯಾಗಿರುವ ಎಟಿಪಿ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 174ನೇ ಸ್ಥಾನಕ್ಕೇರಿದ್ದಾರೆ. ಇದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ.

22 ವರ್ಷದ ನಗಾಲ್‌, ಅಮೆರಿಕ ಓಪನ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನಲ್ಲಿ, ಸ್ವಿಟ್ಜರ್ಲೆಂಡ್‌ನ ರೋಜರ್‌ ಫೆಡರರ್‌ ಎದುರು ದಿಟ್ಟ ಆಟ ಆಡಿ ಗಮನ ಸೆಳೆದಿದ್ದರು. ಭಾರತದ ಆಟಗಾರ ಒಟ್ಟು 16 ಸ್ಥಾನ ಜಿಗಿದಿದ್ದಾರೆ.

ಪ್ರಜ್ಞೇಶ್‌ ಗುಣೇಶ್ವರನ್‌ ಅವರು ಅಗ್ರ 100ರೊಳಗೆ ಸ್ಥಾನ ಹೊಂದಿದ್ದಾರೆ. ಅಮೆರಿಕ ಓಪನ್‌ನ ಮೊದಲ ಸುತ್ತಿನಲ್ಲಿ ಸೋತಿದ್ದ ಅವರು 85ನೇ ಸ್ಥಾನಕ್ಕೆ ಬಡ್ತಿ ಹೊಂದಿದ್ದಾರೆ.

ರಾಮಕುಮಾರ್‌ ರಾಮನಾಥನ್‌ 176ನೇ ಸ್ಥಾನ ಪಡೆದಿದ್ದಾರೆ. ಅವರು ಒಂದು ಸ್ಥಾನ ಮೇಲೇರಿದ್ದಾರೆ.

ಡಬಲ್ಸ್‌ ವಿಭಾಗದ ಆಟಗಾರ ರೋಹನ್‌ ಬೋಪಣ್ಣ 43ನೇ ಸ್ಥಾನಕ್ಕೆ ಇಳಿದಿದ್ದಾರೆ. ಅವರು ನಾಲ್ಕು ಸ್ಥಾನ ಕಳೆದುಕೊಂಡಿದ್ದಾರೆ.

ದಿವಿಜ್‌ ಶರಣ್‌ ಮತ್ತು ಲಿಯಾಂಡರ್‌ ಪೇಸ್‌ ಅವರು ಕ್ರಮವಾಗಿ 49 ಮತ್ತು 78ನೇ ಸ್ಥಾನಗಳಲ್ಲಿದ್ದಾರೆ.

ಮಹಿಳಾ ಸಿಂಗಲ್ಸ್‌ ವಿಭಾಗದ ರ‍್ಯಾಂಕಿಂಗ್‌ನಲ್ಲಿ ಅಂಕಿತಾ ರೈನಾ 194ನೇ ಸ್ಥಾನ ಹೊಂದಿದ್ದಾರೆ. ಪ್ರಾಂಜಲಾ ಯಡ್ಲಪಳ್ಳಿ 338ನೇ ಸ್ಥಾನದಲ್ಲಿದ್ದಾರೆ.

Post Comments (+)