ಶುಕ್ರವಾರ, ಅಕ್ಟೋಬರ್ 18, 2019
20 °C

ಟೆನಿಸ್‌: ಸುಮಿತ್ ನಗಾಲ್ ಸೆಮಿಫೈನಲ್‌ಗೆ

Published:
Updated:
Prajavani

ಕ್ಯಾಂಪಿನಸ್, ಬ್ರೆಜಿಲ್: ಯುವ ಆಟಗಾರ ಸುಮಿತ್ ನಗಾಲ್ ಇಲ್ಲಿ ನಡೆಯುತ್ತಿರುವ ಎಟಿಪಿ ಚಾಲೆಂಜರ್‌ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಶನಿವಾರ ನಡೆದ ಎಂಟರ ಘಟ್ಟದ ಪಂದ್ಯದಲ್ಲಿ ಅವರು ಅರ್ಜೆಂಟೀನಾದ ಫ್ರಾನ್ಸಿಸ್ಕೊ ಸೆರುಂಡೊಲೊ ಎದುರು 7–6, 7–5ರಲ್ಲಿ ಗೆಲುವು ಸಾಧಿಸಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 135ನೇ ಸ್ಥಾನದಲ್ಲಿರುವ ನಗಾಲ್‌ಗೆ ಮೊದಲ ಸುತ್ತಿನಲ್ಲಿ ಬೈ ಲಭಿಸಿತ್ತು. ಎರಡನೇ ಸುತ್ತಿನಲ್ಲಿ ಎದುರಾಳಿ ಪೋರ್ಚುಗಲ್‌ನ ಗಸ್ಟೊ ಎಲಿಯಾಸ್ ಪಂದ್ಯದ ನಡುವೆ ಗಾಯಗೊಂಡು ವಾಪಸಾಗಿದ್ದರು. ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ನಗಾಲ್ ಬ್ರೆಜಿಲ್‌ನ ಒರ್ಲಾಂಡೊ ಲುಜ್ ಎದುರು 7–5, 6–3ರ ಗೆಲುವು ಸಾಧಿಸಿದ್ದರು.

ಕ್ವಾರ್ಟರ್ ಫೈನಲ್‌ನಲ್ಲಿ 13ನೇ ಶ್ರೇಯಾಂಕಿತ ಅರ್ಜೆಂಟೀನಾ ಆಟಗಾರ ಪ್ರಬಲ ಪೈಪೋಟಿ ನೀಡಿದರೂ ಆರನೇ ಶ್ರೇಯಾಂಕಿತ ಭಾರತದ ಆಟಗಾರ ಎದೆಗುಂದಲಿಲ್ಲ. ನಾಲ್ಕರ ಘಟ್ಟದಲ್ಲಿ ಅವರು ಅರ್ಜೆಂಟೀನಾದ ಜುವಾನ್ ಪ್ಯಾಬ್ಲೊ ಫಿಕೊವಿಚ್ ಎದುರು ಸೆಣಸುವರು.

Post Comments (+)