ಬುಧವಾರ, ಅಕ್ಟೋಬರ್ 23, 2019
21 °C
ಬ್ಯೂನೊ ಏರ್ಸ್‌ನಲ್ಲಿ ನಡೆದ ಟೂರ್ನಿ

ನಗಾಲ್‌ಗೆ ಚಾಲೆಂಜರ್‌ ಟೆನಿಸ್‌ ಟೂರ್ನಿ ಪ್ರಶಸ್ತಿ

Published:
Updated:

ಬ್ಯೂನಸ್‌ ಏರ್ಸ್‌, ಆರ್ಜೆಂಟೀನಾ: ಭಾರತದ ಸುಮೀತ್‌ ನಗಾಲ್‌ ನೇರ ಸೆಟ್‌ಗಳಿಂದ ಸ್ಥಳೀಯ ನೆಚ್ಚಿನ ಆಟಗಾರ ಫಾಕುಂಡೊ ಬೊಗ್ನಿಸ್‌ ಅವರನ್ನು ಸೋಲಿಸಿ 54,160 ಡಾಲರ್‌ ಬಹುಮಾನದ ಎಟಿಪಿ ಚಾಲೆಂಜರ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ಪ್ರಶಸ್ತಿ ಗೆದ್ದುಕೊಂಡರು.

ಈ ಟೂರ್ನಿಯಲ್ಲಿ ಏಳನೇ ಶ್ರೇಯಾಂಕ ಪಡೆದಿದ್ದ ಫೈನಲ್‌ನಲ್ಲಿ ನಗಾಲ್‌ 6–4, 6–2 ರಿಂದ ಎಂಟನೇ ಶ್ರೇಯಾಂಕದ ಬೊಗ್ನಿಸ್‌ ಅವರನ್ನು ಸೋಲಿಸಿದರು.  ಫೈನಲ್‌ ಒಂದು ಗಂಟೆ 37 ನಿಮಿಷಗಳವರೆಗೆ ಬೆಳೆಯಿತು.

22 ವರ್ಷದ ಹರ್ಯಾಣ ಆಟಗಾರ ಸುಮೀತ್‌ಗೆ ಇದು ವೃತ್ತಿ ಜೀವನದ ಎರಡನೇ ಚಾಲೆಂಜರ್ ಪ್ರಶಸ್ತಿ. 2017ರಲ್ಲಿ ಬೆಂಗಳೂರಿನಲ್ಲಿ ಅವರು ಮೊದಲ ಬಾರಿ ಪ್ರಶಸ್ತಿ ಗೆದ್ದುಕೊಂಡಿದ್ದರು.

ಈ ಗೆಲುವಿನಿಂದ ಸೋಮವಾರ ಪ್ರಕಟವಾದ ಎಟಿಪಿ ರ‍್ಯಾಂಕಿಂಗ್‌ನಲ್ಲಿ ಅವರು 26 ಸ್ಥಾನಗಳಷ್ಟು ಮೇಲಕ್ಕೆ ಜಿಗಿದು 135ನೇ ಸ್ಥಾನದಲ್ಲಿದ್ದರೆ.

ಕಳೆದ ತಿಂಗಳು ಅಮೆರಿಕ ಓಪನ್‌ನಲ್ಲಿ ಮೊದಲ ಬಾರಿ ಆಡುವ ಮೂಲಕ ಗ್ರ್ಯಾನ್‌ಸ್ಲಾಮ್‌ ಟೂರ್ನಿಯಲ್ಲಿ ನಗಾಲ್‌ ಮೊದಲ ಸುತ್ತಿನಲ್ಲಿ ಫೆಡರರ್‌ ಎದುರು ಸೋಲನುಭವಿಸುವ ಮೊದಲು ಪೈಪೋಟಿ ನೀಡಿ ಗಮನ ಸೆಳೆದಿದ್ದರು.

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)