ಅಮೆರಿಕ ಓಪನ್ ಫೈನಲ್: ಸೆರೆನಾ ಮಣಿಸಿದ ನವೊಮಿ ಒಸಾಕಗೆ ಮೊದಲ ಗ್ರ್ಯಾನ್ ಸ್ಲಾಂ

ನ್ಯೂಯಾರ್ಕ್: 23 ಬಾರಿ ಗ್ರ್ಯಾನ್ ಸ್ಲಾಂ ಪಟ್ಟ ಪಡೆದಿರುವ ಸೆರೆನಾ ವಿಲಿಯಮ್ಸ್ ವಿರುದ್ಧ ಜಪಾನ್ನ ಯುವ ಆಟಗಾರ್ತಿ ನವೊಮಿ ಒಸಾಕ ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಫೈನಲ್ ಕದನದಲ್ಲಿ ರೋಚಕ ಗೆಲುವು ಪಡೆದರು.
6–2, 6–4 ನೇರ ಸೆಟ್ಗಳಿಂದ ಸೆರೆನಾ ಅವರನ್ನು ಮಣಿಸುವ ಮೂಲಕ ಗ್ರ್ಯಾನ್ ಸ್ಲಾಂ ಕಿರೀಟ ಮುಡಿಗೇರಿಸಿದ ಮೊದಲ ಜಪಾನಿ ಮಹಿಳೆ ಎಂಬ ಹೆಗ್ಗಳಿಕೆಗೆ ಒಸಾಕ ಪಾತ್ರರಾದರು. ಪ್ರಾರಂಭದಿಂದಲೇ ಆಕ್ರಮಣಕಾರಿ ಆಟ ಆಡಿದ ಒಸಾಕ ಕೇವಲ 33 ನಿಮಿಷಗಳಲ್ಲಿ ಮೊದಲ ಸೆಟ್ ತನ್ನದಾಗಿಸಿಕೊಳ್ಳುವ ಮೂಲಕ 6 ಬಾರಿ ಅಮೆರಿಕ ಓಪನ್ ಚಾಂಪಿಯನ್ಶಿಪ್ ಪಡೆದಿರುವ ಸೆರೆನಾಗೆ ಆಘಾತ ನೀಡಿದರು.
.@Naomi_Osaka_ picks up her first Grand Slam title at the 2018 #USOpen after a 6-2, 6-4 win over S. Williams!
Tune into @espn Sunday at 1pm ET for more championship action in New York City.https://t.co/VtxXIMiYRS pic.twitter.com/MAdXSVVobZ
— US Open Tennis (@usopen) September 9, 2018
ಎರಡನೇ ಸೆಟ್ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದ್ದು ಸೆರೆನಾ ನಿಯಮ ಉಲ್ಲಂಘಿಸಿರುವುದಾಗಿ ಅಂಪೈರ್ ನೀಡಿದ ತೀರ್ಪಿನಿಂದ. ಜಿದ್ದಾಜಿದ್ದಿನ ಹೋರಾಟದ ನಡುವೆ, ಸೆರೆನಾ ಅವರ ಕೋಚ್ ಕುಳಿತಲ್ಲಿಂದಲೇ ಸಲಹೆಗಳನ್ನು ನೀಡುತ್ತಿದ್ದಾರೆ– ಇದು ನಿಯಮ ಉಲ್ಲಂಘನೆ ಎಂದು ಪ್ರಕಟಿಸಲಾಯಿತು. ಏಕಾಏಕಿ ಕುಪಿತರಾದ ಸೆರೆನಾ ರ್ಯಾಕೆಟ್ನ್ನು ಕೋರ್ಟ್ ಮೇಲೆ ಬಲವಾಗಿ ಕುಕ್ಕಿದ್ದರು. ಇದೂ ಕೂಡ ನಿಯಮ ಉಲ್ಲಂಘನೆಯಾದುದರಿಂದ ಒಸಾಕ ಪಾಲಿಗೆ ಒಂದು ಪಾಯಿಂಟ್ ಸೇರ್ಪಡೆಯಾಯಿತು.
“I have NEVER cheated in my life! I have a daughter and I stand for what’s right!”
I felt Serena Williams on a spiritual level here.
#UsOpen pic.twitter.com/bgNWJw9OJ1— Emmanuel Acho (@thEMANacho) September 8, 2018
ಈ ದಿಢೀರ್ ಬೆಳವಣಿಗೆಯನ್ನು ಸಹಿಸಿಕೊಳ್ಳದ ಸೆರೆನಾ ಚೇರ್ ಅಂಪೈರ್ ಬಳಿ ಬಂದು; ’ನಾನು ಮೋಸ ಮಾಡಿ ಗೆಲುವು ಪಡೆಯುವ ಅವಶ್ಯಕತೆ ಇಲ್ಲ, ಅದಕ್ಕಿಂತಲೂ ನಾನು ಸೋಲು ಅನುಭವಿಸುತ್ತೇನೆ’ ಎಂದು ಖಾರವಾಗಿ ಪ್ರತಿಕ್ರಿಯಿಸಿದರು. ವಾದದ ನಡುವೆ ಸೆರೆನಾಗೆ ಒತ್ತರಿಸಿ ಬಂದ ಕಣ್ಣೀರು ತಡೆದು ಆಟ ಮುಂದುವರಿಸಿದರು. ಈ ಎಲ್ಲವನ್ನೂ ಬಹಳ ತಣ್ಣಗೆ ನೋಡುತ್ತಿದ್ದ ಒಸಾಕ ಎರಡನೇ ಸೆಟ್ನಲ್ಲಿಯೂ ಪಾರಮ್ಯ ಸಾಧಿಸಿದರು.
Your 2018 #USOpen champion...@Naomi_Osaka_ 🏆🗽 pic.twitter.com/yAPFaezBpz
— US Open Tennis (@usopen) September 8, 2018
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸೆರೆನಾ ರನ್ನರ್ ಅಪ್ ಟ್ರೋಫಿ ಪಡೆಯುವ ವೇಳೆ ಪ್ರೇಕ್ಷಕರಿಂದ ಬೂ...ಉದ್ಗಾರ ಹೆಚ್ಚಾಯಿತು. ಇದೇ ಸಂದರ್ಭದಲ್ಲಿ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಸೆರೆನಾ, 'ನಾನು ನಿಮಗೆಲ್ಲ ಒಂದು ಮಾತು ಹೇಳಲು ಬಯಸುತ್ತೇನೆ, ಆಕೆ ಸೊಗಸಾದ ಆಟವಾಡಿದಳು ಮತ್ತು ಇದು ಅವಳ ಮೊದಲ ಗ್ರ್ಯಾನ್ ಸ್ಲಾಂ. ನೀವು ಇಲ್ಲಿ ಚೀರುತ್ತಿದ್ದೀರಿ, ನಾನೂ ಸಹ. ಇದನ್ನು ಉತ್ತಮ ಸಂದರ್ಭವಾಗಿಸೋಣ. ಉದ್ಗರಿಸುವುದನ್ನು ನಿಲ್ಲಿಸೋಣ. ನವೊಮಿಗೆ ಶುಭಾಶಯಗಳು. ಇದು ನನಗೆ ಅತ್ಯಂತ ಕಠಿಣ ವರ್ಷ...' ಎಂದು ಮಾತು ಕೊನೆ ಮಾಡಿದರು.
ಕಳೆದ ವರ್ಷ ಹೆಣ್ಣು ಮಗುವಿಗೆ ಜನ್ಮ ನೀಡಿದ ಸೆರೆನಾ, ಈ ವರ್ಷ ಮತ್ತೆ ಅಂಗಳಕ್ಕೆ ಮರಳಿದ್ದರು.
No act of kindness is ever wasted.#USOpen pic.twitter.com/jVFXd1cZFp
— US Open Tennis (@usopen) September 9, 2018
"When I step on the court, I'm not a Serena fan - I'm just a tennis player playing another tennis player. But when I hugged her at the net, I felt like a little kid again."
❤ @Naomi_Osaka_ lets us into her heart...#USOpen pic.twitter.com/GlCigEQUiv
— US Open Tennis (@usopen) September 9, 2018
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.