ಕಿರ್ಗಿಯೊಸ್‌ಗೆ ವಾಷಿಂಗ್ಟನ್ ಕಿರೀಟ

ವಾಷಿಂಗ್ಟನ್: ಬರೋಬ್ಬರಿ ಹದಿನೆಂಟು ಏಸ್‌ಗಳನ್ನು ಸಿಡಿಸಿದ ಆಸ್ಟ್ರೇಲಿಯಾದ ನಿಕ್ ಕಿರ್ಗಿಯೊಸ್, ಎಟಿಪಿ ವಾಷಿಂಗ್ಟನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಭಾನುವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಕಿರ್ಗಿಯೊಸ್ 7–6, 7–6 ನೇರ ಸೆಟ್‌ಗಳಿಂದ ರಷ್ಯಾದ ಡೇನಿಯಲ್ ಮೆಡ್ವೆದೇವ್ ಅವರನ್ನು ಮಣಿಸಿದರು. ಈ ಹೋರಾಟ 1 ಗಂಟೆ 34 ನಿಮಿಷ ನಡೆಯಿತು.
ಈ ಜಯದೊಂದಿಗೆ 24 ವರ್ಷದ ಕಿರ್ಗಿಯೊಸ್, ವೃತ್ತಿಬದುಕಿನಲ್ಲಿ ಆರನೇ ಎಟಿಪಿ ಪ್ರಶಸ್ತಿ ಗೆದ್ದ ಹಿರಿಮೆಗೆ ಭಾಜನರಾದರು.
ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 27ನೇ ಸ್ಥಾನದಲ್ಲಿರುವ ಕಿರ್ಗಿಯೊಸ್, ಒಂಬತ್ತನೇ ಸ್ಥಾನ ಹೊಂದಿರುವ ಡೇನಿಯಲ್ ವಿರುದ್ಧ ಎರಡು ಸೆಟ್‌ಗಳಲ್ಲೂ ದಿಟ್ಟ ಆಟ ಆಡಿದರು. ಆಕರ್ಷಕ ಕ್ರಾಸ್‌ಕೋರ್ಟ್ ಮತ್ತು ಬಲಿಷ್ಠ ರಿಟರ್ನ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.