ಶನಿವಾರ, ಏಪ್ರಿಲ್ 4, 2020
19 °C

ಟೆನಿಸ್‌: ಕ್ವಾರ್ಟರ್‌ಫೈನಲ್‌ಗೆ ನಿಕ್ಷೇಪ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕನ್ನಡಿಗ ಬಿ.ಆರ್‌. ನಿಕ್ಷೇಪ್‌ ಚೆನ್ನೈನಲ್ಲಿ ನಡೆಯುತ್ತಿರುವ ಎಐಟಿಎ ಟೆನಿಸ್‌ ಟೂರ್ನಿಯ ಸಿಂಗಲ್ಸ್‌ ವಿಭಾಗದಲ್ಲಿ ಮಂಗಳವಾರ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟರು.

ಎರಡನೇ ಸುತ್ತಿನ ಹಣಾಹಣಿಯಲ್ಲಿ ಆರನೇ ಶ್ರೇಯಾಂಕದ ನಿಕ್ಷೇಪ್‌, ಕರ್ನಾಟಕದವರೇ ಆದ ಮನೀಷ್‌ ಜಿ. ಅವರನ್ನು 6–4, 3–6, 6–2ರಿಂದ ಸೋಲಿಸಿದರು. ರಾಜ್ಯದ ಮತ್ತೊಬ್ಬ ಆಟಗಾರ ವಸಿಷ್ಠ ಚೆರುಕು ಕೂಡ ಎಂಟರಘಟ್ಟ ಪ್ರವೇಶಿಸಿದರು. ಅವರು ಎರಡನೇ ಶ್ರೇಯಾಂಕದ ಗೋಕುಲ್‌ ಸುರೇಶ್‌(ಪಂದ್ಯದಿಂದ ನಿವೃತ್ತಿ) ಅವರನ್ನು 6–1, 2–0ರಿಂದ ಮಣಿಸಿದರು.

ಕ್ವಾರ್ಟರ್‌ಫೈನಲ್‌ನಲ್ಲಿ ನಿಕ್ಷೇಪ್‌ ಅವರು ಆಂಧ್ರಪ್ರದೇಶದ ಕಜಾ ವಿನಾಯಕ ಶರ್ಮಾ ಅವರನ್ನು ಎದುರಿಸಲಿದ್ದರೆ, ವಸಿಷ್ಠ ತಮಿಳುನಾಡಿನ ಭರತ್‌ ನಿಶೋಕ್‌ ವಿರುದ್ಧ ಆಡಲಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು