ಕೆಟಿಪಿಪಿಎ–ಎಐಟಿಎ ಟೆನಿಸ್‌ ಟೂರ್ನಿ: ಕ್ವಾರ್ಟರ್‌ ಫೈನಲ್‌ಗೆ ರಾಜ್ಯದ ನಿಕ್ಷೇಪ್‌

7

ಕೆಟಿಪಿಪಿಎ–ಎಐಟಿಎ ಟೆನಿಸ್‌ ಟೂರ್ನಿ: ಕ್ವಾರ್ಟರ್‌ ಫೈನಲ್‌ಗೆ ರಾಜ್ಯದ ನಿಕ್ಷೇಪ್‌

Published:
Updated:
Deccan Herald

ಬೆಂಗಳೂರು: ಕರ್ನಾಟಕದ ಬಿ.ಆರ್‌.ನಿಕ್ಷೇಪ್‌ ಮತ್ತು ನಿಖಿತ್‌ ರೆಡ್ಡಿ ಅವರು ಕೆಟಿಪಿಪಿಎ–ಎಐಟಿಎ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಎಸ್‌.ಎ.ಟಿ ಅಂಗಳದಲ್ಲಿ ಗುರುವಾರ ನಡೆದ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ನಿಕ್ಷೇಪ್‌ 9–5ರಿಂದ ಶುಭಂ ಮಲ್ಹೋತ್ರಾ ಎದುರು ಗೆದ್ದರು.

ಶ್ರೇಯಾಂಕ ರಹಿತ ಆಟಗಾರ ನಿಕ್ಷೇಪ್ ಆರಂಭದಿಂದಲೇ ಅಬ್ಬರದ ಆಟ ಆಡಿ ಟೂರ್ನಿಯಲ್ಲಿ ಐದನೆ ಶ್ರೇಯಾಂಕ ಹೊಂದಿದ್ದ ಶುಭಂ ಅವರನ್ನು ತಬ್ಬಿಬ್ಬುಗೊಳಿಸಿದರು.

ಹದಿನಾರರ ಘಟ್ಟದ ಇನ್ನೊಂದು ಹಣಾಹಣಿಯಲ್ಲಿ ನಿಕಿತ್‌ 9–5ರಿಂದ ಆರನೆ ಶ್ರೇಯಾಂಕಿತ ಆಟಗಾರ ಪಗಲವನ್‌ ವಿರುದ್ಧ ಗೆದ್ದರು.

ಈ ವಿಭಾಗದ ಇತರ ಪಂದ್ಯಗಳಲ್ಲಿ ಫೈಸಲ್‌ ಕ್ವಾಮರ್‌ 9–1ರಿಂದ ಶೇಖ್‌ ಇಫ್ತಿಕರ್‌ ಎದುರೂ, ಅರ್ಮಾನ್‌ ಭಾಟಿಯಾ 9–6ರಲ್ಲಿ ಕುನಾಲ್‌ ವಜಿರಾನಿ ಮೇಲೂ, ನಿತೇನ್‌ ಕೀರ್ತನೆ 9–3ರಲ್ಲಿ ಗುಹಾನ್‌ ರಾಜನ್‌ ಎದುರೂ, ರಾಘವ್‌ ಜೈಸಿಂಘಾನಿ 9–7ರಲ್ಲಿ ಅಜಯ್‌ ಪ್ರೀತಂ ವಿರುದ್ಧವೂ, ಪರೀಕ್ಷಿತ್‌ ಸೋಮಾನಿ 9–5ರಲ್ಲಿ ನಾಸೀರ್‌ ಜಾವೂರ್‌ ಮೇಲೂ, ಇಶಾಕ್‌ ಇಕ್ಬಾಲ್‌ 9–5ರಲ್ಲಿ ರಿಷಿ ರೆಡ್ಡಿ ವಿರುದ್ಧವೂ ಗೆದ್ದರು.

ಕ್ವಾರ್ಟರ್‌ಗೆ ಹುಮೇರಾ: ಮಹಿಳೆಯರ ಸಿಂಗಲ್ಸ್‌ನಲ್ಲಿ ಶೇಖ್‌ ಹುಮೇರಾ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಹುಮೇರಾ 9–0ರಲ್ಲಿ ಅಭಾ ಎದುರು ಗೆದ್ದರು.

ಇತರ ಪಂದ್ಯಗಳಲ್ಲಿ ಸಾರಾ ಯಾದವ್‌ 9–4ರಲ್ಲಿ ಸೊನಾಷೆ ಭಟ್ನಾಗರ್‌ ಎದುರೂ, ಸೋಹಾ ಸಾದಿಕ್‌ 9–4ರಲ್ಲಿ ಎಸ್‌.ನಿಧಿ ಮೇಲೂ, ಸಮಾ ಸಾತ್ವಿಕಾ 9–1ರಲ್ಲಿ ವಂಶಿತಾ ಪಠಾನಿಯಾ ಎದುರೂ, ಪ್ರತ್ಯುಷಾ 9–7ರಲ್ಲಿ ಅಪೂರ್ವ ಎದುರೂ, ಪ್ರತಿಭಾ ಪ್ರಸಾದ್‌ 9–4ರಲ್ಲಿ ಅನಾಮ್‌ ಮೇಲೂ, ಲಸ್ಯಾ 9–3ರಲ್ಲಿ ದಕ್ಷತಾ ಮೇಲೂ, ಮಾನ್ಯ 9–7ರಲ್ಲಿ ಅನುಷಾ ವಿರುದ್ಧವೂ ಗೆದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !