ಡೇವಿಸ್ ಕಪ್‌ ತಂಡದಿಂದ ಲಿಯಾಂಡರ್ ಪೇಸ್‌ ಔಟ್‌

7

ಡೇವಿಸ್ ಕಪ್‌ ತಂಡದಿಂದ ಲಿಯಾಂಡರ್ ಪೇಸ್‌ ಔಟ್‌

Published:
Updated:

ನವದೆಹಲಿ: ಮುಂದಿನ ತಿಂಗಳಲ್ಲಿ ಸರ್ಬಿಯಾದಲ್ಲಿ ನಡೆಯಲಿರುವ ಡೇವಿಸ್ ಕಪ್‌ ವಿಶ್ವ ಗುಂಪಿನ ಪ್ಲೇ ಆಫ್ ಪಂದ್ಯಕ್ಕೆ ಆಯ್ಕೆ ಮಾಡಿರುವ ತಂಡದಲ್ಲಿ ಸ್ಥಾನ ಗಳಿಸಲು ಹಿರಿಯ ಆಟಗಾರ ಲಿಯಾಂಡರ್ ಪೇಸ್‌ ವಿಫಲರಾಗಿದ್ದಾರೆ.

ಆರು ಮಂದಿ ಆಟಗಾರರ ತಂಡವನ್ನು ಮಂಗಳವಾರ ಆರಿಸಲಾಗಿದ್ದು ಪೇಸ್ ಮತ್ತು ಸುಮಿತ್ ನಗಾಲ್ ಅವರನ್ನು ಕೈಬಿಡಲಾಗಿದೆ. ಚೀನಾ ಎದುರಿನ ಪಂದ್ಯದಲ್ಲಿ ಸ್ಥಾನ ಗಳಿಸದೇ ಇದ್ದ ಯೂಕಿ ಭಾಂಬ್ರಿ ತಂಡಕ್ಕೆ ಮರಳಿದ್ದಾರೆ. ಏಷ್ಯನ್‌ ಕ್ರೀಡಾಕೂಟದ ಡಬಲ್ಸ್‌ ವಿಭಾಗದಲ್ಲಿ ಚಿನ್ನ ಗೆದ್ದಿರುವ ರೋಹನ್ ಬೋಪಣ್ಣ ಮತ್ತು ದಿವಿಜ್ ಶರಣ್‌ ಕೂಡ ತಂಡದಲ್ಲಿದ್ದಾರೆ. ನಾಯಕ ಮಹೇಶ್ ಭೂಪತಿ ಅವರೊಂದಿಗೆ ಸಾಕೇತ್ ಮೈನೇನಿ ಕೂಡ ತಂಡದಲ್ಲಿದ್ದಾರೆ.

‘ಲಿಯಾಂಡರ್ ಪೇಸ್ ಮತ್ತು ಸುಮಿತ್ ನಗಾಲ್ ಅವರ ಹೆಸರು ಚರ್ಚೆಗೆ ಬರಲೇ ಇಲ್ಲ. ಲಿಯಾಂಡರ್‌ ಪೇಸ್‌ ಫಾರ್ಮ್‌ನಲ್ಲಿ ಇಲ್ಲದ ಕಾರಣ ಬೋಪಣ್ಣ ಮತ್ತು ದಿವಿಜ್ ಶರಣ್‌ ಮೇಲೆ ಭರವಸೆ ಇದೆ’ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಎಸ್‌.ಪಿ.ಮಿಶ್ರಾ ತಿಳಿಸಿದರು.

ತಂಡ ಇಂತಿದೆ: ಮಹೇಶ್ ಭೂಪತಿ (ನಾಯಕ), ಯೂಕಿ ಭಾಂಬ್ರಿ, ರಾಮ್‌ಕುಮಾರ್ ರಾಮನಾಥನ್, ಪ್ರಜ್ಞೇಶ್‌ ಗುಣೇಶ್ವರನ್‌, ರೋಹನ್ ಬೋಪಣ್ಣ, ದಿವಿಜ್‌ ಶರಣ್‌, ಸಾಕೇತ್ ಮೈನೇನಿ. ಜೀಶನ್ ಅಲಿ (ಕೋಚ್‌).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !