ಬುಧವಾರ, ಆಗಸ್ಟ್ 21, 2019
22 °C
ಪಾಕಿಸ್ತಾನ ಟೆನಿಸ್‌ ಫೆಡರೇಷನ್‌ ಅಧ್ಯಕ್ಷ ಸಲೀಂ ಸೈಫುಲ್ಲಾ ಖಾನ್‌ ಭರವಸೆ

ಡೇವಿಸ್ ಕಪ್‌: ಭಾರತ ತಂಡಕ್ಕೆ ಭದ್ರತೆ ಭರವಸೆ

Published:
Updated:

ನವದೆಹಲಿ (ಪಿಟಿಐ): ಪಾಕಿಸ್ತಾನಕ್ಕೆ ತೆರಳಲಿರುವ ಭಾರತ ಡೇವಿಸ್‌ ಕಪ್‌ ತಂಡಕ್ಕೆ ಪಾಕಿಸ್ತಾನ ಟೆನಿಸ್‌ ಫೆಡರೇಷನ್‌ (ಪಿಟಿಎಫ್‌) ಬಿಗಿ ಭದ್ರತೆಯ ಭರ ವಸೆ ನೀಡಿದೆ.
ಈ ಕುರಿತು ಮಾತನಾಡಿರುವ ಪಿಟಿಎಫ್‌ ಮುಖ್ಯಸ್ಥ ಸಲೀಂ ಸೈಫುಲ್ಲಾ ಖಾನ್‌ ‘ಸ್ಪರ್ಧೆ ವೀಕ್ಷಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸುವ ಯೋಚನೆಯಿದೆ. ಭಾರತದ ಆಟಗಾರರು ಹಾಗೂ ಅಭಿಮಾನಿಗಳಿಗೆ ಸೂಕ್ತ ಭದ್ರತಾ ವ್ಯವಸ್ಥೆ ಕೈಗೊಳ್ಳುವೆವು’ ಎಂದು ತಿಳಿಸಿದ್ದಾರೆ.

ಡೇವಿಸ್‌ ಕಪ್‌ ಟೂರ್ನಿಯ ಕುರಿತು ಪಾಕಿಸ್ತಾನದ ಜನರಲ್ಲಿ ಭಾರೀ ಕುತೂಹಲ ಮನೆಮಾಡಿದೆ. ಭಾರತ ತಂಡ ಡೇವಿಸ್‌ ಕಪ್‌ ಟೆನಿಸ್‌ ಆಡಲು 55 ವರ್ಷಗಳ ಬಳಿಕ ಪಾಕಿಸ್ತಾನ ಪ್ರವಾಸ ಕೈಗೊಂಡಿದೆ. 1964ರಲ್ಲಿ ನಡೆದಿದ್ದ ಟೂರ್ನಿಯಲ್ಲಿ ಭಾರತ ಪಾಲ್ಗೊಂಡು 4–0ಯಿಂದ ಜಯಭೇರಿ ಮೊಳಗಿಸಿತ್ತು. ದಶಕದ ಬಳಿಕ ಪಾಕಿಸ್ತಾನ ಡೇವಿಸ್‌ ಕಪ್‌ ಆತಿಥ್ಯಕ್ಕೆ ಸಜ್ಜಾಗಿದೆ. ಸೆಪ್ಟೆಂಬರ್‌ 14, 15ರಂದು ಟೂರ್ನಿ ನಡೆಯಲಿದೆ.

Post Comments (+)