ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಓಪನ್‌ ಎರಡನೇ ಲೆಗ್‌ ಎಟಿಪಿ ಚಾಲೆಂಜರ್ ಟೂರ್ನಿ: ಅರ್ಜುನ್‌ ಶುಭಾರಂಭ

Last Updated 14 ಫೆಬ್ರುವರಿ 2022, 15:29 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದ ಪ್ರಮುಖ ಭರವಸೆಯಾಗಿದ್ದ ಪ್ರಜ್ಞೇಶ್ ಗುಣೇಶ್ವರನ್ ಅವರು ಬೆಂಗಳೂರು ಓಪನ್ ಎರಡನೇ ಲೆಗ್‌ನ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲೇ ನಿರಾಸೆ ಅನುಭವಿಸಿದರು. ಅರ್ಜುನ್‌ ಖಾಡೆ ಎರಡನೇ ಸುತ್ತಿಗೆ ಮುನ್ನಡೆದರು.

ಕರ್ನಾಟಕ ಲಾನ್ ಟೆನಿಸ್ ಸಂಸ್ಥೆ (ಕೆಎಸ್‌ಎಲ್‌ಟಿಎ) ಅಂಗಣದಲ್ಲಿ ಮಂಗಳವಾರ ಆರಂಭವಾದ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಪ್ರಜ್ಞೇಶ್‌ 4–6, 2–6ರಿಂದ ಅಗ್ರಶ್ರೇಯಾಂಕದ ಆಟಗಾರ ಅಲೆಕ್ಸಾಂಡರ್‌ ವುಕಿಚ್‌ ಎದುರು ಮುಗ್ಗರಿಸಿದರು.

ಪಂದ್ಯದ ಮೊದಲ ಸೆಟ್‌ ಮೂರನೇ ಗೇಮ್‌ನಲ್ಲಿ ಬ್ರೇಕ್ ಪಾಯಿಂಟ್‌ ಗಳಿಸಿದ ವುಕಿಚ್‌ ಅದೇ ಲಯದೊಂದಿಗೆ ಮುನ್ನಡೆದು ಸೆಟ್ ವಶಪಡಿಸಿಕೊಂಡರು. ಎರಡನೇ ಸೆಟ್‌ನ ಆರಂಭದಲ್ಲಿ ಮತ್ತಷ್ಟು ಪರಿಣಾಮಕಾರಿ ಎನಿಸಿದ ಆಸ್ಟ್ರೇಲಿಯಾ ಆಟಗಾರ ಆರಂಭದಲ್ಲಿ 2–0 ಗೇಮ್‌ ಮುನ್ನಡೆ ಗಳಿಸಿದರು. ಪ್ರಜ್ಞೇಶ್‌ಗೆ ಚೇತರಿಸಿಕೊಳ್ಳುವ ಹೆಚ್ಚಿನ ಅವಕಾಶವನ್ನು ವುಕಿಚ್‌ ನೀಡಲಿಲ್ಲ. ಲೈನ್‌ ವಿನ್ನರ್ ಮೂಲಕ ಸೆಟ್‌ ಗೆದ್ದುಕೊಂಡು ಪಂದ್ಯದ ಜಯದ ಸಂಭ್ರಮ ಆಚರಿಸಿದರು.

ವೈಲ್ಡ್‌ಕಾರ್ಡ್‌ ಪ್ರವೇಶ ಪಡೆದಿರುವ ಭಾರತದ ಅರ್ಜುನ್‌6-2, 6-2ರಿಂದ ಭಾರತದವರೇ ಆದ ಆದಿಲ್ ಕಲ್ಯಾಣಪುರ ಅವರನ್ನು ಸೋಲಿಸಿ ಶುಭಾರಂಭ ಮಾಡಿದರು.

ಮೊದಲ ಸುತ್ತಿನ ಮತ್ತೊಂದು ಪಂದ್ಯದಲ್ಲಿ ಬಲ್ಗೇರಿಯಾದ ದಿಮಿತಾರ್‌ ಕುಜಮನೊವ್‌ ಎರಡನೇ ಶ್ರೇಯಾಂಕದ ಆಟಗಾರ ಫ್ರಾನ್ಸ್‌ನ ಹ್ಯೂಗೊ ಗ್ರೇನಿಯರ್ ಅವರಿಗೆ ಆಘಾತ ನೀಡಿದರು. ಅವರಿಗೆ6-4, 6-3ರಿಂದ ಜಯ ಒಲಿಯಿತು.

ಪ್ರಜ್ಞೇಶ್ ಅವರ ಸೋಲಿನೊಂದಿಗೆ ಭಾರತದ ಒಟ್ಟು ಐದು ಮಂದಿ ಈಗ ಸ್ಪರ್ಧೆಯಲ್ಲಿ ಉಳಿದಂತಾಗಿದೆ.

ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಫಲಿತಾಂಶಗಳು: ಅರ್ಜುನ್ ಖಾಡೆಗೆ6-2, 6-2ರಿಂದ ಆದಿಲ್ ಕಲ್ಯಾಣಪುರ ಎದುರು ಜಯ, ಅಲೆಕ್ಸಾಂಡರ್ ವುಕಿಚ್‌ಗೆ6-4, 6-2ರಿಂದ ಪ್ರಜ್ಞೇಶ್ ಗುಣೇಶ್ವರನ್ ವಿರುದ್ಧ ಗೆಲುವು, ದಿಮಿತಾರ್‌ ಕುಜಮನೊವ್ ಅವರಿಗೆ6-4, 6-3ರಿಂದ ಹ್ಯೂಗೊ ಗ್ರೇನಿಯರ್ ಎದುರು ಗೆಲುವು, ಮಾರ್ಕ್ ಪೊಲ್ಮನ್ಸ್ (ಆಸ್ಟ್ರೇಲಿಯಾ) ಅವರಿಗೆ6-3, 7-6 (7)ರಿಂದ ಇವ್‌ಜೆನಿ ಡಾನ್‌ಸ್ಕಿ (ರಷ್ಯಾ) ವಿರುದ್ಧ ಜಯ, ಮ್ಯಾಕ್ಸ್ ಪರ್ಸೆಲ್‌ (ಆಸ್ಟ್ರೇಲಿಯಾ) ಅವರಿಗೆ5-7, 6-3, 6-0ರಿಂದ ಜೇಸನ್ ಕುಬ್ಲೆರ್‌ (ಆಸ್ಟ್ರೇಲಿಯಾ) ಎದುರು ಗೆಲುವು, ಕಿಮರ್‌ ಕಾಪರ್ಜೆನ್ಸ್ (ಬೆಲ್ಜಿಯಂ) ಅವರಿಗೆ ಕೆನಡಾದ ಸ್ಟೀವನ್ ಡಿಯಜ್ ವಿರುದ್ಧ ಜಯ.

ಅಂತಿಮ ಅರ್ಹತಾ ಸುತ್ತಿನ ಫಲಿತಾಂಶಗಳು: ಭಾರತದ ಮುಕುಂದ್ ಶಶಿಕುಮಾರ್ ಅವರಿಗೆ7-5, 1-6, 6-3ರಿಂದ ಮನೀಷ್ ಸುರೇಶ್ ಕುಮಾರ್ ಎದುರು ಜಯ, ನಿತಿನ್ ಕುಮಾರ್ ಸಿನ್ಹಾ ಅವರಿಗೆ6-4, 6-7 (5), 6-1ರಿಂದ ರಿಯೊ ನೊಗುಚಿ (ಜಪಾನ್) ವಿರುದ್ಧ ಜಯ, ಆ್ಯಂಡ್ರ್ಯೂ ಹ್ಯಾರಿಸ್‌ (ಆಸ್ಟ್ರೇಲಿಯಾ) ಅವರಿಗೆ6-4, 7-5ರಿಂದ ದಿಗ್ವಿಜಯ್ ಪ್ರತಾಪ್‌ಸಿಂಗ್ ವಿರುದ್ಧ ಜಯ, ಡಾಮಿನಿಕ್ ಪಾಲನ್‌ (ಜೆಕ್ ಗಣರಾಜ್ಯ) ಅವರಿಗೆ6-0, 6-1ರಿಂದ ಬೊಗ್ದೊನ್‌ ಬೊಬ್‌ರವ್‌ (ರಷ್ಯಾ) ಎದುರು ಗೆಲುವು, ಮಾರ್ಕೊಸ್‌ ಕಲೊವೆಲೊನಿಸ್‌ (ಗ್ರೀಸ್‌) ಅವರಿಗೆ6-4, 4-6ರಿಂದ ಭಾರತದ ಶ್ರೀರಾಮ್ ಬಾಲಾಜಿ ಎದುರು ಜಯ, ಅಂಟೋನಿಯಾ ಬೆಲ್ಲಿಯರ್ (ಸ್ವಿಟ್ಜರ್ಲೆಂಡ್‌) ಅವರಿಗೆ6-1, 6-4ರಿಂದ ವ್ಲಾಡಿಸ್ಲಾವ್‌ (ಉಕ್ರೇನ್‌) ಎದುರು ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT