ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್: ಕ್ವಾರ್ಟರ್‌ಫೈನಲ್‌ಗೆ ಪ್ರಜ್ಞೇಶ್‌

Last Updated 13 ನವೆಂಬರ್ 2020, 14:50 IST
ಅಕ್ಷರ ಗಾತ್ರ

ಕ್ಯಾರಿ, ಅಮೆರಿಕ: ತೀವ್ರ ಜಿದ್ದಾಜಿದ್ದಿ ಕಂಡುಬಂದ ಪಂದ್ಯದಲ್ಲಿ ಭಾರತದ ಪ್ರಜ್ಞೇಶ್‌ ಗುಣೇಶ್ವರನ್‌ ಅವರು ಜಾಕ್‌ ಸಾಕ್‌ ಸವಾಲು ಮೀರಿ, ಅಟ್ಲಾಂಟಿಕ್‌ ಟೈರ್‌ ಟೆನಿಸ್‌ ಚಾಂಪಿಯನ್‌ಷಿಪ್‌ನ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟರು.

ಶುಕ್ರವಾರ ಇಲ್ಲಿ ನಡೆದ ಪ್ರೀಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕದ ಪ್ರಜ್ಞೇಶ್‌ 6–7, 6–2, 7–6ರಿಂದ ಅಮೆರಿಕ ಆಟಗಾರನನ್ನು ಮಣಿಸಿದರು. ಹಣಾಹಣಿ ಮೂರು ತಾಸುಗಳವರೆಗೆ ನಡೆಯಿತು.

ಜಾಕ್‌ ಸಾಕ್‌ ಅವರು 2017ರಲ್ಲಿ ವಿಶ್ವ ಸಿಂಗಲ್ಸ್ ಕ್ರಮಾಂಕದಲ್ಲಿ ಜೀವನಶ್ರೇಷ್ಠ ಎಂಟನೇ ಸ್ಥಾನ ತಲುಪಿದ್ದರು. ಸದ್ಯ ಅವರ ಸ್ಥಾನ 253ನೆಯದು. ದಿಟ್ಟತನದ ಆಟವಾಡಿದ ಪ್ರಜ್ಞೇಶ್‌, ಮೂರು ಬಾರಿ ಎದುರಾಳಿಯ ಸರ್ವ್‌ ಮುರಿದರು. ಒಂದು ಬಾರಿ ತಾವು ಸರ್ವ್‌ ಕೈಚೆಲ್ಲಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಸದ್ಯ 146ನೇ ಸ್ಥಾನದಲ್ಲಿರುವ ಪ್ರಜ್ಞೇಶ್‌, ಮುಂದಿನ ಪಂದ್ಯದಲ್ಲಿ ಕ್ವಾಲಿಫೈಯರ್‌ನಿಂದ ಗೆದ್ದುಬಂದ ಆಟಗಾರ ಬ್ರೆಜಿಲ್‌ನ ಥಾಮಸ್‌ ಬೆಲ್ಲುಚಿ ಎದುರು ಸೆಣಸಲಿದ್ದಾರೆ.

ಇದು ಒಟ್ಟು ₹ 38 ಲಕ್ಷ ಬಹುಮಾನ ಮೊತ್ತದ ಟೂರ್ನಿಯಾಗಿದೆ. ಬೆಲ್ಲುಚಿ ಈ ಹಿಂದೆ ರ‍್ಯಾಂಕಿಂಗ್‌ನಲ್ಲಿ 21ನೇ ಸ್ಥಾನದಲ್ಲಿದ್ದವರು. ನಾಲ್ಕು ಎಟಿಪಿ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಆದರೆ ರ‍್ಯಾಂಕಿಂಗ್‌ನಲ್ಲಿ ಈಗ ಅವರ ಸ್ಥಾನ 297.

ಈ ಟೂರ್ನಿಯಲ್ಲಿ ಸ್ಪರ್ಧಿಸಿದ್ದ ಭಾರತದ ರಾಮಕುಮಾರ್‌ ರಾಮನಾಥನ್‌ ಅವರು ಸಿಂಗಲ್ಸ್ ಹಾಗೂ ಡಬಲ್ಸ್ ಎರಡೂ ವಿಭಾಗಗಳಿಂದ ನಿರ್ಗಮಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT