ಬುಧವಾರ, ಏಪ್ರಿಲ್ 14, 2021
24 °C
ಕಾರ್ತಿಕ್–ಮರಿಯಪ್ಪನ್, ಶಿಲ್ಪಾ–ನಳಿನ ಕುಮಾರಿ ಜೋಡಿಗೆ ಪ್ರಶಸ್ತಿ

ವ್ಹೀಲ್‌ಚೇರ್ ಟೆನಿಸ್‌: ವೀರಸಾಮಿ, ಪ್ರತಿಮಾಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕರ್ನಾಟಕದ ಪ್ರತಿಮಾ ರಾವ್ ಹಾಗೂ ವೀರಸಾಮಿ ಶೇಖರ್ ಇಲ್ಲಿ ಶನಿವಾರ ಮುಕ್ತಾಯಗೊಂಡ ಕೆಎಸ್‌ಎಲ್‌ಟಿಎ–ಎಐಟಿಎ ಆಶ್ರಯದ ವ್ಹೀಲ್‌ ಚೇರ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಮಹಿಳೆಯರ ಮತ್ತು ಪುರುಷರ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು.

ಅಗ್ರ ಶ್ರೇಯಾಂಕದ ಪ್ರತಿಮಾ ಫೈನಲ್ ಹಣಾಹಣಿಯಲ್ಲಿ ಕರ್ನಾಟಕದವರೇ ಆದ ಎರಡನೇ ಶ್ರೇಯಾಂಕಿತೆ ಕೆ.ಪಿ.ಶಿಲ್ಪಾ ಅವರನ್ನು 6-4, 1-6, 16-14ರಲ್ಲಿ ಮಣಿಸಿದರು. ವೀರಸಾಮಿ, ತಮಿಳುನಾಡಿನ ಸುಬ್ರಮಣಿಯನ್ ಬಾಲಚಂದರ್ ವಿರುದ್ಧ 6-3, 6-4ರಲ್ಲಿ ಗೆಲುವು ಸಾಧಿಸಿದರು. 

ಪುರುಷರ ಡಬಲ್ಸ್‌ನಲ್ಲಿ ಕರುಣಾಕರಣ್ ಕಾರ್ತಿಕ್ ಮತ್ತು ದುರೈ ಮರಿಯಪ್ಪನ್ 6-1, 7-6 (5)ರಲ್ಲಿ ಸುಬ್ರಮಣಿಯನ್ ಬಾಲಚಂದರ್‌ ಮತ್ತು ವೀರಸಾಮಿ ಶೇಖರ್ ಅವರನ್ನು ಸೋಲಿಸಿದರು. ಮಹಿಳೆಯರ ಡಬಲ್ಸ್‌ನಲ್ಲಿ ನಳಿನ ಕುಮಾರಿ ಜೊತೆಗೂಡಿ ಆಡಿದ ಶಿಲ್ಪಾ 6-1, 6-2ರಲ್ಲಿ ಪ್ರತಿಮಾ ಮತ್ತು ಎಂ.ಕೆ.ಮುಬೀನಾ ಜೋಡಿಯ ಸವಾಲು ಗೆದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.