ಶುಕ್ರವಾರ, ಜನವರಿ 24, 2020
21 °C

ಕಾಳ್ಗಿಚ್ಚು: ಮಿಡಿದ ಟೆನಿಸಿಗರು

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್‌ : ಹಿರಿಯ ಟೆನಿಸ್‌ ತಾರೆಗಳಾದ ರೋಜರ್‌ ಫೆಡರರ್‌ ಮತ್ತು ರಫೆಲ್‌ ನಡಾಲ್‌, ಆಸ್ಟ್ರೇಲಿಯಾದ ಕಾಳ್ಗಿಚ್ಚು ಪರಿಹಾರ ನಿಧಿಗೆ ₹ 1.20 ಕೋಟಿ ನೆರವು ನೀಡುವುದಾಗಿ ಬುಧವಾರ ಪ್ರಕಟಿಸಿದ್ದಾರೆ.

ಬುಧವಾರ ಆಸ್ಟ್ರೇಲಿಯನ್‌ ಓಪನ್‌ ಟೂರ್ನಿಗೆ ಪೂರ್ವಭಾವಿಯಾಗಿ ಮೆಲ್ಬರ್ನ್‌ ಪಾರ್ಕ್‌ನ ರಾಡ್ ಲೇವರ್‌ ಅರೇನಾದಲ್ಲಿ  ಹಮ್ಮಿಕೊಂಡಿದ್ದ ಸಹಾಯಾರ್ಥ ಪ್ರದರ್ಶನ ಪಂದ್ಯದ ವೇಳೆ ಅವರು ಈ ನೆರವು ಪ್ರಕಟಿಸಿದ್ದಾರೆ. ನಿಧಿ ಸಂಗ್ರಹ ಕಾರ್ಯಕ್ರಮದಲ್ಲಿ ಸೆರೇನಾ ವಿಲಿಯಮ್ಸ್‌, ಆಸ್ಟ್ರೇಲಿಯಾ ಓಪನ್‌ ಹಾಲಿ ಚಾಂಪಿಯನ್‌ ನೊವಾಕ್ ಜೊಕೊವಿಚ್‌ ಸೇರಿದಂತೆ ಖ್ಯಾತನಾಮ ತಾರೆಯರೂ ಪಾಲ್ಗೊಂ
ಡಿದ್ದಾರೆ.

ತಿಂಗಳಿಂದ ಕಾಣಿಸಿಕೊಂಡಿರುವ ಭೀಕರ ಕಾಳ್ಗಿಚ್ಚಿಗೆ 28 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 2,500 ಮನೆಗಳು ನಾಶವಾಗಿವೆ. ಭಾರಿ ಪ್ರಮಾಣದ ಅರಣ್ಯ, ಕೃಷಿ ಪ್ರದೇಶ ಬೆಂಕಿಗಾಹುತಿಯಾಗಿದೆ.

ಕಾಳ್ಗಿಚ್ಚಿನಿಂದ ಉಂಟಾದ ದಟ್ಟ ಹೊಗೆ ಮೆಲ್ಬರ್ನ್‌ನ ಇತರ ಪ್ರದೇಶಗಳಲ್ಲಿ ಆವರಿಸಿಕೊಂಡಿದೆ. ಸತತ ಎರಡನೇ ದಿನ ಆಸ್ಟ್ರೇಲಿಯನ್‌ ಓಪನ್‌ ಟೂರ್ನಿಯ ಅರ್ಹತಾ ಪಂದ್ಯಗಳಿಗೆ ಅಡಚಣೆಯಾಯಿತು.

ಕಾಳ್ಗಿಚ್ಚು ಪರಿಹಾರ ಕಾರ್ಯದಲ್ಲಿ ತೊಡಗಿರುವ ಆಸ್ಟ್ರೇಲಿಯನ್‌ ವೈಲ್ಡ್‌ಲೈಫ್‌ ಮತ್ತು ನೇಚರ್‌ ರಿಕವರಿ ಫಂಡ್‌ಗೆ 3.50 ಕೋಟಿ ನೀಡುವುದಾಗಿ ಎಟಿಪಿ ಹೇಳಿದೆ.

ಆಟಗಾರರ ಸಿಡಿಮಿಡಿ:ಕಾಳ್ಗಿಚ್ಚಿನಿಂದ ಉಂಟಾದ ಹೊಗೆಯಿಂದ ಉಸಿರಾಟಕ್ಕೆ ತೊಂದರೆ ಉಂಟಾಗುತ್ತಿದ್ದರೂ ಹಿರಿಯ ಆಟಗಾರರು ಮಾತನಾಡುತ್ತಿಲ್ಲ ಎಂದು ಆಸ್ಟ್ರೇಲಿಯನ್‌ ಓಪನ್‌ ಅರ್ಹತಾ ಸುತ್ತಿನಲ್ಲಿ ಆಡುತ್ತಿರುವ ಆಟಗಾರರು ಸಿಡಿಮಿಡಿಗೊಂಡಿದ್ದಾರೆ. ಹಿರಿಯ ಆಟಗಾರರನ್ನು ‘ಸ್ವಾರ್ಥಿ’ಗಳೆಂದು ಅವರು ಜರಿದಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು