ಸೋಮವಾರ, ನವೆಂಬರ್ 18, 2019
25 °C

ಗೆಳತಿ ಜಿಸ್ಕಾ ಪರೆಲ್ಲೊ ಮದುವೆಯಾದ ರಫೆಲ್‌ ನಡಾಲ್

Published:
Updated:
Prajavani

ಮ್ಯಾಡ್ರಿಡ್‌: ಸ್ಪೇನ್‌ನ ಟೆನಿಸ್‌ ಆಟಗಾರ ರಫೆಲ್‌ ನಡಾಲ್‌ ಅವರು ತಮ್ಮ ಬಹುಕಾಲದ ಗೆಳತಿ ಜಿಸ್ಕಾ ಪರೆಲ್ಲೊ ಅವರನ್ನು ಶನಿವಾರ ವಿವಾಹವಾಗಿದ್ದಾರೆ.

33 ವರ್ಷದ ನಡಾಲ್‌ ಮತ್ತು 31ರ ಹರೆಯದ ಜಿಸ್ಕಾ ಅವರು 14 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.

ಲಾ ಫೋರ್ಟಾಲೆಜಾದಲ್ಲಿ ನಡೆದ ಸಮಾರಂಭದಲ್ಲಿ ಕುಟುಂಬದವರು ಸೇರಿ 350 ಮಂದಿಗೆ ಮಾತ್ರ ಆಹ್ವಾನ ನೀಡಲಾಗಿತ್ತು.

ನಡಾಲ್‌ ಅವರು ಗ್ರ್ಯಾನ್‌ಸ್ಲಾಮ್‌ನಲ್ಲಿ 19 ಪ್ರಶಸ್ತಿಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ. ಪರೆಲ್ಲೊ ಮತ್ತು ನಡಾಲ್‌ ಅವರ ತಂಗಿ ಮೇರಿಬೆಲ್‌ ‌ಬಾಲ್ಯದ ಸ್ನೇಹಿತರಾಗಿದ್ದಾರೆ.

ಪ್ರತಿಕ್ರಿಯಿಸಿ (+)