ಭಾನುವಾರ, ಏಪ್ರಿಲ್ 2, 2023
31 °C

Wimbledon 2021: ರೋಜರ್ ಫೆಡರರ್‌ ವಿಂಬಲ್ಡನ್ ಪ್ರಶಸ್ತಿ ಕನಸು ಭಗ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್: ಎಂಟು ಬಾರಿಯ ವಿಂಬಲ್ಡನ್ ಚಾಂಪಿಯನ್‌, ದಿಗ್ಗಜ ಆಟಗಾರ ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್‌ ಅವರ ಮತ್ತೊಂದು ಪ್ರಶಸ್ತಿಯ ಕನಸು ನನಸಾಗಲಿಲ್ಲ. 

ಸೆಂಟರ್ ಕೋರ್ಟ್‌ನಲ್ಲಿ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಫೆಡರರ್, 3–6, 6–7,0–6ರ ಅಂತರದಿಂದ 14ನೇ ಶ್ರೇಯಾಂಕಿತ ಪೋಲೆಂಡ್‌ನ ಹುಬರ್ತ್‌ ಹುರ್ಕಾಜ್ ಎದುರು ಎಡವಿದರು.

ಇದನ್ನೂ ಓದಿ: 

ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲಿ ಈ ವರೆಗೆ ಹುಬರ್ತ್  ಮೂರನೇ ಸುತ್ತು ದಾಟಿರಲಿಲ್ಲ. ಆದರೆ 20 ಬಾರಿಯ ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ಫೆಡರರ್ ಅವರನ್ನು ನೇರ ಸೆಟ್‌ಗಳಲ್ಲಿ ಮಣಿಸಿ ಇದೇ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದ ಸಾಧನೆ ಮೆರೆದಿದ್ದಾರೆ. 

ಇದು 39 ವರ್ಷದ ಫೆಡರರ್ ಅವರ ಕೊನೆಯ ವಿಂಬಲ್ಡನ್ ಪಂದ್ಯಾವಳಿ ಎಂದೇ ಅಂದಾಜಿಸಲಾಗಿದೆ. ಆದರೆ ಈ ಕುರಿತು ಫೆಡರರ್ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. 

'ಮುಂದಿನ ವರ್ಷ ಆಡುವುದರ ಬಗ್ಗೆ ನನಗೇನು ಖಚಿತತೆಯಿಲ್ಲ. ಈ ಹಂತದ ವರೆಗೂ ತಲುಪಿರುವುದು ಖುಷಿ ತಂದಿದೆ. ಖಂಡಿತವಾಗಿಯೂ ಮತ್ತೆ ಆಡಲು ಬಯಸುತ್ತೇನೆ. ಆದರೆ ನನ್ನ ವಯಸ್ಸು? ಯಾವುದರ ಬಗ್ಗೆ ಖಚಿತತೆಯಿಲ್ಲ' ಎಂದು ಹೇಳಿದ್ದಾರೆ. 

ಮೊದಲ ಸೆಮಿಫೈನಲ್ ಮುಖಾಮುಖಿಯಲ್ಲಿ ವಿಶ್ವದ ಅಗ್ರ ರ‍್ಯಾಂಕಿನ ಆಟಗಾರ ನೊವಾಕ್ ಜೊಕೊವಿಚ್ ಕೆನಡಾದ ಡೆನಿಸ್ ಶಪೊವಲೊವ್ ಸವಾಲನ್ನು ಎದುರಿಸಲಿದ್ದಾರೆ. ದ್ವಿತೀಯ ಸೆಮಿಫೈನಲ್‌ನಲ್ಲಿ  ಹುಬರ್ತ್‌ ಹುರ್ಕಾಜ್ ಅವರಿಗೆ ಇಟಲಿಯ ಮ್ಯಾಟಿಯೊ ಬೆರೆಟ್ಟಿನಿ ಸವಾಲು ಎದುರಾಗಲಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು